Advertisement
ಆಯಾ ಸ್ಪರ್ಧಿಗಳು ಯಾಕೆ ಮನೆಯಲ್ಲಿ ಇರಬೇಕು ಇರಬಾರದು. ತಮ್ಮ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದು, ಎದುರಾಳಿ ಸ್ಪರ್ಧಿ ತಾವು ಅವರಿಗಿಂತ ಯಾಕೆ ಬೆಸ್ಟ್ ಎನ್ನುವ ಸಮರ್ಥನೆ ನೀಡಿದರು.
Related Articles
Advertisement
ಮಧ್ಯರಾತ್ರಿ ಚಪಾತಿಗೆ ಬೇಡಿಕೆಯಿಟ್ಟ ನರಕ ವಾಸಿಗಳು:ಸ್ವರ್ಗ ನಿವಾಸಿಗಳಿಂದ ನರಕ ವಾಸಿಗಳು ಮಧ್ಯರಾತ್ರಿ ಚಪಾತಿ ಮಾಡಿಕೊಡಲು ಹೇಳಿ ಸತಾಯಿಸಿದರು. ಬೆಳಗ್ಗೆ 4 ಗಂಟೆಗೆ ಚಹಾ ಮಾಡಿಕೊಡಿ ಎಂದು ಜಗದೀಶ್ ಕ್ಯಾಪ್ಟನ್ ಬಳಿ ಹೇಳಿದರು. ಆದರೆ ಚಹಾ ಮಾಡಿಕೊಡದ್ದಕ್ಕೆ ಜಗದೀಶ್ ಕ್ಯಾಪ್ಟನ್ ಅವರ ಮೇಲೆ ಗರಂ ಆದರು. ನೀವು ಹೇಳಿದ್ದನೆಲ್ಲ ಮಾಡಿಕೊಟ್ಟಿದ್ದೇವೆ. ಆದ್ರೆ ಯೋಗ್ಯತೆ ಅದು ಇದು ಅಂಥ ಮಾತನಾಡ್ಬೇಡಿ ಹಾಗೆ ಮಾಡಿದ್ರೆ ಶಿಕ್ಷೆ ಕೊಡುವುದು ಖಚಿತವೆಂದು ಕ್ಯಾಪ್ಟನ್ ಹಂಸಾ ಜಗದೀಶ್ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಕ್ಯಾಪ್ಟನ್ ಗೆ ಕ್ವಾಟ್ಲೆ ಕೊಟ್ಟ ಜಗದೀಶ್:
ಜಗದೀಶ್ ಅವರನ್ನು ಮನೆ ಕೆಲಸಕ್ಕೆ ಕರೆದುಕೊಂಡು ಬರಲು ಕ್ಯಾಪ್ಟನ್ ಹಂಸಾ ಅವರು ಅನ್ನಿಸುತ್ತಿದೆ ಹಾಡಿಗೆ ಎದೆಯ ಮೇಲೆ ಕಾಲಿಟ್ಟು ನಡೆದ ಪ್ರಸಂಗಕ್ಕೆ ಇಡೀ ಮನೆಮಂದಿಯ ನಗುವಿಗೆ ಕಾರಣವಾಯಿತು. ಮನೆಯವರನ್ನು ತನ್ನ ನೃತ್ಯದ ಮೂಲಕ ಜಗದೀಶ್ ಮನರಂಜನೆ ನೀಡಿದರು. ನಿಯಮ ಉಲ್ಲಂಘನೆ; ಸ್ಪರ್ಧಿಗಳಿಗೆ ಶಾಕ್ ಕೊಟ್ಟ ಬಿಗ್ ಬಾಸ್ :
ಟಾಸ್ಕ್ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಹಾಕಿದ್ದ ಬಿಳಿ ಬಣ್ಣದ ಪರೆದಯನ್ನು ಸ್ಪರ್ಧೆಯೊಬ್ಬರು ಇಣುಕಿ ನೋಡಿದ ಪರಿಣಾಮ ಬಿಗ್ ಬಾಸ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇಡೀ ಮನೆಗೆ ಬಿಗ್ ಬಾಸ್ ನಾಮಿನೇಟ್ ಶಿಕ್ಷೆಯನ್ನು ನೀಡಿದ್ದಾರೆ. ಸುರೇಶ್ ಅವರು ಪರದೆ ಆಚೆ ರೆಡಿಯಾಗುತ್ತಿರುವ ಸ್ಪರ್ಧೆಯನ್ನು ನೋಡಿ ಬಾ ಎಂದು ಮಾನಸ ಅವರಿಗೆ ಹೇಳಿದ್ದಾರೆ. ಮಾನಸ ಹೋದ ಬಳಿಕ ಜಗದೀಶ್ ಕೂಡ ಪರದೆ ಆಚೆ ಹೋಗಿದ್ದಾರೆ. ಇದಕ್ಕೂ ಮೊದಲು ಶಿಶಿರ್, ಮೋಕ್ಷಿತಾ ಅವರು ಪರದೆ ಆಚೆ ಇಣುಕಿ ನೋಡಿದ್ದಾರೆ. ಆ ಮೂಲಕ ಮುಖ್ಯವಾದ ನಿಯಮದ ಉಲ್ಲಂಘನೆ ಆಗಿದೆ. ಕ್ಯಾಪ್ಟನ್ ಇದನ್ನು ನೋಡಿಯೂ ಯಾವ ಕ್ರಮವನ್ನು ತೆಗೆದುಕೊಳ್ಳದೆ ಇರುವುದರಿಂದ ಮನೆಯ ಎಲ್ಲರನ್ನೂ ನಾಮಿನೇಟ್ ಮಾಡಿದ್ದಾರೆ. ಕ್ಯಾಪ್ಟನ್ ಹಂಸಾ ಅವರಿಗೆ ಶಿಕ್ಷೆ ಕೊಟ್ಟು ಎಚ್ಚರಿಕೆ ಕೊಟ್ಟಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ಯಾಪ್ಟನ್ ಒಬ್ಬರ ವಿಶೇಷ ಅಧಿಕಾರ ಇದರಿಂದ ಕಳೆದುಕೊಂಡಂತಾಗಿದೆ. ಮೊದಲು ನಾಮಿನೇಟ್ ಆದವರು ಯಾರು..?
ಜಗದೀಶ್ ಅವರು ಕ್ಯಾಪ್ಟನ್ ಅವರಿಂದ ನೇರವಾಗಿ ನಾಮಿನೇಟ್ ಆಗಿದ್ದು, ತಿವಿಕ್ರಮ್, ಅನುಷಾ,ಧನರಾಜ್, ಐಶ್ವರ್ಯಾ, ಮಾನಸ, ರಂಜಿತ್ ಅವರು ನಾಮಿನೇಟ್ ಆಗಿದ್ದರು.