ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11) ಮನೆಯಲ್ಲಿ ವಾರ ಟಾಸ್ಕ್ ಗಳು ನಡೆದಿದೆ.
ಸ್ಪರ್ಧಿಗಳು ಮಣ್ಣಿನ ಟಾಸ್ಕ್ ನಲ್ಲಿ ಜೋಡಿಗಳಾಗಿ ಆಡಿದ್ದಾರೆ. ತಾವು ಮಾಡಿದ ಮಣ್ಣಿನ ಅಕ್ಷರವನ್ನು ಇನ್ನೊಬ್ಬ ಸ್ಪರ್ಧಿಗಳು ಹಾಳು ಮಾಡಿದ್ದಾರೆ.
ಶಿಶಿರ್ ಹಾಗೂ ಚೈತ್ರಾ ಅವರು ಜೋಡಿಗಳಾಗಿ ಟಾಸ್ಕ್ ಅಡಿದ್ದು, ಮಣ್ಣಿನಲ್ಲಿ ಅಕ್ಷರ ಬರೆಯುವ ವೇಳೆ ಚೈತ್ರಾ ಅವರ ಕೈಯಲ್ಲಿದ್ದ ಚಿನ್ನದ ಉಂಗುರ ಕಳೆದು ಹೋಗಿದೆ.
ಇದರಿಂದ ಚೈತ್ರಾ ಅವರು ಕಣ್ಣೀರಿಟ್ಟಿದ್ದಾರೆ. ಅದು ತುಂಬಾ ಮಹತ್ವದ ಉಂಗುರ ದಯವಿಟ್ಟು ಹುಡುಕಿಕೊಡಿ ಬಿಗ್ ಬಾಸ್ ಎಂದು ಚೈತ್ರಾ ಕ್ಯಾಮರಾದ ಮುಂದೆ ಮನವಿ ಮಾಡಿಕೊಂಡಿದ್ದಾರೆ.
ಟಾಸ್ಕ್ ಬ್ರೇಕ್ ಸಮಯದಲ್ಲಿ ಎಲ್ಲರೂ ಸೇರಿ ಉಂಗುರ ಹುಡುಕುವ ಪ್ರಯತ್ನ ಮಾಡಿದ್ದಾರೆ. ಆದರೆ ಉಂಗುರ ಸಿಗದೆ ಇದ್ದಾಗ ಚೈತ್ರಾ ಅವರು ಮನಸ್ಸಿನಲ್ಲಿ ಕೊರಗಜ್ಜ ದೈವದ ಬಳಿ ಉಂಗುರ ಸಿಗಬೇಕೆಂದು ಪ್ರಾರ್ಥಿಸಿದ್ದಾರೆ.
ಇದಾದ ಕೆಲವೇ ಸಮಯದಲ್ಲಿ ಕ್ಯಾಪ್ಟನ್ ರೂಮ್ ನಲ್ಲಿ ಕಳೆದು ಹೋದ ಉಂಗುರವನ್ನು ತ್ರಿವಿಕ್ರಮ್ ಅವರ ಕೈಗೆ ಬಿಗ್ ಬಾಸ್ ನೀಡಿದ್ದಾರೆ.
ತ್ರಿವಿಕ್ರಮ್ ಅವರು ಉಂಗುರವನ್ನು ತಂದು ಚೈತ್ರಾ ಅವರ ಕೈಗೆ ನೀಡಿದ್ದಾರೆ. ಇದನ್ನು ನೋಡಿದ ಚೈತ್ರಾ ಕೊರಗಜ್ಜ ದೈವದ ಹೆಸರು ಹೇಳಿ ಉಂಗುರ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.