Advertisement

Bigg Boss: ಬಿಗ್‌ ಬಾಸ್‌ ಮನೆಯೊಳಗೆ ಎಂಟ್ರಿ ಕೊಡಲಿದ್ದಾರೆ ವಯಸ್ಕ ನಟಿ

11:31 AM Dec 20, 2023 | Team Udayavani |

ಮುಂಬಯಿ: ಸದ್ಯ ಕಿರುತೆರೆಯಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮ ಶುರುವಾಗಲು ದಿನಗಣನೆ ಬಾಕಿ ಉಳಿದಿದೆ. ಈಗಾಗಲೇ ತೆಲುಗಿನಲ್ಲಿ ಬಿಗ್‌ ಬಾಸ್‌ ಕಾರ್ಯಕ್ರಮ ಆರಂಭಗೊಂಡಿದೆ. ಇತ್ತ ಹಿಂದಿ ಹಾಗೂ ಕನ್ನಡದಲ್ಲಿ ಕಾರ್ಯಕ್ರಮ ಆರಂಭಕ್ಕೆ ದಿನಾಂಕ ನಿಗದಿ ಆಗಿದೆ.

Advertisement

ಹಿಂದಿ ಬಿಗ್‌ ಬಾಸ್‌ ಸೀಸನ್‌ 17 ರ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಲಿದ್ದಾರೆ ಎನ್ನುವುದರ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಕೆಲ ಸ್ಪರ್ಧಿಗಳ ಭಾಗವಹಿಸುವುದು ಖಚಿತವಾಗಿದೆ.

ಸಲ್ಮಾನ್‌ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಮಾಜಿ ನೀಲಿ ಚಿತ್ರತಾರೆ ಸನ್ನಿ ಲಿಯೋನ್‌ ಈ ಹಿಂದೆ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ. ಇದರ ಜೊತೆ ಮಾಡೆಲ್‌ ಪಮೇಲಾ ಆಂಡರ್ಸನ್ ಅವರು ಕೂಡ ಸೀಸನ್‌ 4 ನಲ್ಲಿ ಬಿಗ್‌ ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು.

ಇದೀಗ ಮತ್ತೊಬ್ಬ ವಯಸ್ಕ ಕಂಟೆಂಟ್‌ ಕ್ರಿಯೇಟರ್‌ ರೊಬ್ಬರು ಬಿಗ್‌ ಬಾಸ್‌ ಮನೆಯೊಳಗೆ ಹೋಗಲಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ರಭಾವಿ ಮತ್ತು ವಯಸ್ಕ ಕಂಟೆಂಟ್‌ ಕ್ರಿಯೇಟರ್‌ ಆಗಿರುವ ಇಂಡೋ – ಅಮೇರಿಕನ್‌ ಶಿಲ್ಪಾ ಸೇಥಿ ಅವರು ಬಿಗ್‌ ಬಾಸ್‌ ಮನೆಯೊಳಗೆ ಸ್ಪರ್ಧಿಯಾಗಿ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಇವರನ್ನು ಭಾರತದ ಕಿಮ್ ಕಾರ್ಡಶಿಯಾನ್ ಎಂದು ಕರೆಯಲಾಗುತ್ತದೆ. ಏಕೆಂದರೆ ಅವರ ರೂಪ ಹಾಗೂ ಅವರು ಹಾಕುವ ಪೋಸ್ಟ್‌ ಕಿಮ್ ಕಾರ್ಡಶಿಯಾನ್ ರಂತೆಯೇ ಇರುತ್ತದೆ.

Advertisement

ಶಿಲ್ಪಾ ಸೇಥಿ ಅವರಿಗೆ ಇನ್ಸ್ಟಾಗ್ರಾಮ್‌ ನಲ್ಲಿ 10 ಮಿಲಿಯನ್‌ ಫಾಲೋವರ್ಸ್‌ ಗಳಿದ್ದಾರೆ. ಅವರ ಹಾಟ್‌ & ಮಾದಕತೆ ಫೋಟೋಗಳು ಇಂಟರ್‌ ನೆಟ್‌ ನಲ್ಲಿ ಭಾರೀ ವೈರಲ್‌ ಆಗುತ್ತವೆ. ವಯಸ್ಕ ಕಂಟೆಂಟ್‌ ನಟಿ ಬಿಗ್‌ ಬಾಸ್‌ ಮನೆಯೊಳಗೆ ಎಂಟ್ರಿ ಆಗುವುದು ಪಕ್ಕಾ ಆಗಿದೆ ಎನ್ನಲಾಗಿದೆ.

ಶಿಲ್ಪಾ ತನ್ನನ್ನು ತಾನು ಅತ್ಯಂತ ʼಕೆಟ್ಟ ಭಾರತೀಯʼ(Baddest Indian) ಎಂದು ಕರೆದುಕೊಂಡಿದ್ದಾಳೆ.

ಯಾರೆಲ್ಲಾ ಸ್ಪರ್ಧಿಗಳು: ಬಿಗ್‌ ಬಾಸ್‌ ಸೀಸನ್‌ 17 ರಲ್ಲಿ ಸ್ಪರ್ಧಿಗಳಾಗಿ ಮನೆಯೊಳಗೆ ಕಾಲಿಡುವವರ ಪಟ್ಟಿ ದೊಡ್ಡಿದಿದೆ. ಅವುಗಳಲ್ಲಿ ಪ್ರಮುಖರೆಂದರೆ, ಮಾಜಿ ಮಿಸ್ ಇಂಡಿಯಾ, ಮನಸ್ವಿ ಮಾಮ್ಗೈ, ದಂಪತಿಗಳಾದ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್, ನೀಲ್ ಭಟ್ ಮತ್ತು ಐಶ್ವರ್ಯಾ ಶರ್ಮಾ ,ಇಶಾ ಮಾಳವಿಯಾ ಮತ್ತು ಅಭಿಷೇಕ್ ಕುಮಾರ್, ಯೂಟ್ಯೂಬರ್‌ ದಂಪತಿ ಅರ್ಮಾನ್ ಮಲಿಕ್ ಮತ್ತು ಪಾಯಲ್ ಮಲಿಕ್ ಕೂಡ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಆಗಲಿದ್ದಾರೆ.

ಇದೇ ಅ.15 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next