Advertisement

ಅಕ್ಟೋಬರ್‌ 21 ರಿಂದ ಬಿಗ್‌ಬಾಸ್‌ ಸೀಸನ್‌ -6 ಶುರು

11:33 AM Sep 29, 2018 | |

“ಬಿಗ್‌ಬಾಸ್‌’ ಯಾವಾಗ ಶುರುವಾಗುತ್ತೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಈಗಾಗಲೇ ಯಶಸ್ವಿಯಾಗಿ ಐದು ಸೀಸನ್‌ ಮುಗಿಸಿರುವ “ಬಿಗ್‌ಬಾಸ್‌’ ಈತ ತನ್ನ ಆರನೇ ಸೀಸನ್‌ಗೆ ಅಣಿಯಾಗುತ್ತಿದೆ. ಅಕ್ಟೋಬರ್‌ 21 ರಿಂದ “ಬಿಗ್‌ಬಾಸ್‌ ಸೀಸನ್‌ 6′ ಶುರುವಾಗುತ್ತಿದೆ. ಸುದೀಪ್‌ ಅವರ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದ್ದು, ಆ ಮೂಲಕ “ಬಿಗ್‌ಬಾಸ್‌’ ಶುರುವಾಗುವ ಕುರಿತು ವಿವರ ಹೊರಬಿದ್ದಿದೆ.

Advertisement

ಪ್ರತಿ ದಿನ 8 ಗಂಟೆಗೆ “ಬಿಗ್‌ಬಾಸ್‌’ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ. ಅ. 21 ರ ಭಾನುವಾರ ಸಂಜೆ 6 ಗಂಟೆಗೆ ಕಲರ್‌ಫ‌ುಲ್‌ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಹೊಸ ಪ್ರೋಮೋದಲ್ಲಿ ಸುದೀಪ್‌ ಹಿಂದಿನ ಸ್ಪರ್ಧಿಗಳು ಹರಿಬಿಟ್ಟ ಡೈಲಾಗ್‌ ಮೂಲಕ ಗಮನಸೆಳೆದಿದ್ದಾರೆ. “ನಿಜ ಹೇಳ್ತೀನಿ ಇಲ್ಲಿ ನಾನು ನಾನಾಗಿದ್ದೇನೆ. ಎಲ್ಲರೂ ಸೇರಿಕೊಂಡು ನನ್ನ ಟಾರ್ಗೆಟ್‌ ಮಾಡುತ್ತಿದ್ದಾರೆ ಬಿಗ್‌ಬಾಸ್‌.

ಛೀ.. ಎಷ್ಟ್ ನಾಟಕ ಬಿಗ್‌ಬಾಸ್‌, ನನ್‌ ತಪ್ಪಿದ್ರೆ ನೀವ್‌ ಹೇಳಿ ಬಿಗ್‌ಬಾಸ್‌ ಒಪ್ತಿನಿ. ನನ್‌ ತಪ್ಪಿಲ್ಲ ಬಿಗ್‌ಬಾಸ್‌,ಟಾಸ್ಕ್ ಮಾಡಿದ್ದೀನಿ, ಅಡುಗೆ ಮಾಡಿದ್ದೀನಿ, ಊಟನೂ ಮಾಡ್ಸಿದಿನಿ ಬಿಗ್‌ಬಾಸ್‌….’ ಹೀಗೆ ಕಾಮಿಡಿ ಮಾಡುವ ಮೂಲಕ ಬಿಗ್‌ಬಾಸ್‌ ಪ್ರೋಮೋದಲ್ಲಿ ಶುರುವಾಗುವ ದಿನಾಂಕ ಘೋಷಿಸಿದ್ದಾರೆ.

ಅಂದಹಾಗೆ, ಈ ಸೀಸನ್‌ 6 ರಲ್ಲಿ ಈ ಬಾರಿಯೂ ಸೆಲಿಬ್ರಿಟಿಗಳ ಜೊತೆಗೆ ಸಾಮಾನ್ಯ ವ್ಯಕ್ತಿಗಳೂ ಪಾಲ್ಗೊಳ್ಳಲಿದ್ದಾರೆಂಬುದು ಸತ್ಯ. ಸದ್ಯಕ್ಕೆ ಹರಿದಾಡುತ್ತಿರುವ ಹೆಸರುಗಳ ಪೈಕಿ ಕುರಿ ಪ್ರತಾಪ್‌, ಶುಭಾ ಪೂಂಜ, ಪ್ರೇಮಾ, ಟೆನ್ನಿಸ್‌ ಕೃಷ್ಣ, ಸುಮನ್‌ ರಂಗನಾಥ್‌, 5 ರೂಪಾಯಿ ಡಾಕ್ಟರ್‌ ಶಂಕರೇ ಗೌಡ ಹೆಸರುಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next