Advertisement
ತೀರ್ಪು ಪ್ರಕಟಿಸಿದ ಯೂಸುಫ್ ಅವರು, ಜಾಧವ್ ಪ್ರಕರಣ ವನ್ನು ಮತ್ತೂಮ್ಮೆ ಕೂಲಂಕಶವಾಗಿ ಪರಾ ಮರ್ಶಿಸುವ ಹಾಗೂ ತೀರ್ಪನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ ಎಂದು ಪಾಕಿಸ್ಥಾನಕ್ಕೆ ಸೂಚಿಸಿದರು. ಜಾಧವ್‌ಗೆ ಸಿಗ ಬೇಕಾದ ರಾಜತಾಂತ್ರಿಕ ನೆರವನ್ನು ನೀಡದ ಪಾಕಿಸ್ಥಾನದ ನಡೆಗೆ ಅತೃಪ್ತಿ ವ್ಯಕ್ತಪಡಿಸಿದ ನ್ಯಾಯಪೀಠ, ಆ ಲೋಪವನ್ನು ಸರಿಪಡಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಿತು.
Related Articles
Advertisement
ಸ್ನೇಹಿತರು, ಸಂಬಂಧಿಗಳ ಸಂಭ್ರಮಸತಾರಾ: ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಬುಧವಾರ ಸಂಜೆ ಕುಲ ಭೂಷಣ್ ಜಾಧವ್ ಕುರಿತ ಪ್ರಕಟವಾಗುವ ತೀರ್ಪಿಗೆ ಇಡೀ ಭಾರತ ಕುತೂಹಲದಿಂದ ಕಾಯುತ್ತಿದ್ದಂತೆಯೇ ಮಹಾರಾಷ್ಟ್ರ ಸತಾರಾದ ಗ್ರಾಮವೊಂದು ಎಲ್ಲರಿಗಿಂತ ಉಸಿರು ಬಿಗಿಹಿಡಿದು ಟಿವಿ ಚಾನೆಲ್‌ಗಳ ಎದುರು ಕುಳಿತಿತ್ತು. ಜಾಧವ್ ಮೂಲತಃ ಸತಾರಾದ ಜಾವಿ ಗ್ರಾಮದವರಾಗಿದ್ದು, ಅಲ್ಲಿ ಅವರು ಮನೆಯನ್ನೂ ಹೊಂದಿದ್ದಾರೆ. ವರ್ಷಕ್ಕೆರಡು ಬಾರಿ ಅಲ್ಲಿಗೆ ಅವರು ಹೋಗುತ್ತಿದ್ದರು. ಈಗ ಪಾಕಿಸ್ಥಾನದಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿರುವ ಜಾಧವ್ ಕುರಿತ ತೀರ್ಪನ್ನು ಗ್ರಾಮದ ಜನರು ಅತ್ಯಂತ ಕುತೂಹಲದಿಂದ ವೀಕ್ಷಿಸಿದರು. ಬಲೂನ್, ಪಾರಿವಾಳ ಹಾರಿಬಿಟ್ಟರು: ಜಾಧವ್ ತಂದೆ ಮುಂಬೈ ಸಹಾಯಕ ಪೊಲೀಸ್ ಕಮಿಷನರ್ ಆಗಿದ್ದರು. ಹೀಗಾಗಿ ಮುಂಬಯಿಯ ಪರೇಲ್‌ನಲ್ಲಿ ಜಾಧವ್ ವಾಸಿಸುತ್ತಿದ್ದರು. ಇಲ್ಲಿ ಜಾಧವ್ ಹಲವು ಸ್ನೇಹಿತರು ಮತ್ತು ಆತ್ಮೀಯರನ್ನು ಹೊಂದಿದ್ದಾರೆ. ಇವರೂ ಕೂಡ ಪರೇಲ್‌ನಲ್ಲಿ ಬೃಹತ್ ಟಿವಿ ಪರದೆ ಯಲ್ಲಿ ಜಾಧವ್ ಕುರಿತ ತೀರ್ಪನ್ನು ವೀಕ್ಷಿಸಿದ್ದಾರೆ. ಜಾಧವ್ ಬಿಡುಗಡೆಗೆ ಕೋರ್ಟ್ ಆದೇಶಿಸಲಿ ಎಂಬುದಾಗಿ ಇವರು ಹಲವು ದೇಗುಲಗಳಲ್ಲಿ ಪ್ರಾರ್ಥನೆ ಯನ್ನೂ ಮಾಡಿದ್ದಾರೆ. ಜಾಧವ್ ಪರ ತೀರ್ಪು ನೀಡುತ್ತಿದ್ದಂತೆಯೇ ಬಲೂನ್‌ಗಳನ್ನು ಹಾಗೂ ಪಾರಿವಾಳಗಳನ್ನು ಹಾರಿಸಿಬಿಟ್ಟು ಸಂಭ್ರಮ ವ್ಯಕ್ತ ಪಡಿಸಿದ್ದಾರೆ. ಅಷ್ಟೇ ಅಲ್ಲ, ಕುಲಭೂಷಣ್ ಜತೆಗೆ ಭಾರತವಿದೆ ಎಂಬ ಸಂದೇಶವುಳ್ಳ ಟಿ ಶರ್ಟ್ ಧರಿಸಿದ ಯುವಕರು ರಸ್ತೆಯಲ್ಲಿ ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದುದು ಮುಂಬೈನ ಹಲವೆಡೆ ಕಂಡುಬಂತು. ಜಾಧವ್ ಪರ ಕೋರ್ಟ್ ತೀರ್ಪು ನೀಡಿರು ವುದು ಸಂತಸ ತಂದಿದೆ. ನಾವು ಈಗ ಜಾಧವ್ ಮನೆಗೆ ವಾಪಸಾಗುವುದನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಜಾಧವ್ ಸಂಬಂಧಿ ಹಾಗೂ ನಿವೃತ್ತ ಎಸಿಪಿ ಸುಭಾಷ್ ಜಾಧವ್ ಹೇಳಿದ್ದಾರೆ. ಇನ್ನೊಂದೆಡೆ ಜಾಧವ್ ಬಿಡುಗಡೆ ಮಾಡಲು ಭಾರತ ಸರಕಾರ ತನ್ನ ಶಕ್ತಿ ಮೀರಿ ಪ್ರಯತ್ನಿಸಬೇಕು. ಪಾಕಿಸ್ಥಾನದ ಮೇಲೆ ಒತ್ತಡ ಹೇರಿ ಸರಕಾರ ಜಾಧವ್‌ರನ್ನು ಬಿಡುಗಡೆ ಮಾಡಿಸಬೇಕು ಎಂದು ಗಾವಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ತಿರಸ್ಕೃತಗೊಂಡ ವಾದಗಳು
ವಾದ 1 ಪಾಕಿಸ್ಥಾನ: ಗೂಢಚರ್ಯೆ ನಡೆಸಿರುವ ಜಾಧವ್‌ನ ಬಳಿ ಪಾಕಿಸ್ಥಾನಕ್ಕೆ ಸಂಬಂಧಿಸಿದ ಅನೇಕ ಮಹತ್ವದ ಮಾಹಿತಿ ಗಳಿವೆ. ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ಜಾಧವ್‌ನನ್ನು ಭೇಟಿ ಮಾಡಲು ಅವಕಾಶ ನೀಡಿದರೆ ಆ ಮಾಹಿತಿಗಳನ್ನು ಜಾಧವ್ ಹಂಚಿಕೊಳ್ಳಲಿರುವ ಭೀತಿಯಿಂದ ರಾಜತಾಂತ್ರಿಕ ನೆರವಿಗೆ ಅವಕಾಶ ಕಲ್ಪಿಸಿಲ್ಲ.
ನ್ಯಾಯಪೀಠದ ಅಭಿಮತ: ವಿಯೆನ್ನಾ ಒಪ್ಪಂದದ ಪ್ರಕಾರ, ಗೂಢಚರ್ಯೆ ಆರೋಪವೊಂದಕ್ಕಾಗಿಯೇ ರಾಜತಾಂತ್ರಿಕ ಸೌಲಭ್ಯ ತಪ್ಪಿಸುವ ಹಾಗಿಲ್ಲ. ವಾದ 2 ಪಾಕಿಸ್ಥಾನ: ಕೆಲವಾರು ಅಂತಾರಾಷ್ಟ್ರೀಯ ನಿಯಮಗಳು, ಗೂಢಚರ್ಯೆ ಆರೋಪ ಹೊತ್ತ ವಿದೇಶಿಗನಿಗೆ ರಾಜತಾಂತ್ರಿಕ ನೆರವನ್ನು ನೀಡುವುದನ್ನು ನಿರ್ಬಂಧಿಸುತ್ತವೆ. ಅದರ ಆಧಾರದಲ್ಲೇ ಜಾಧವ್‌ಗೆ ಆ ಸೌಲಭ್ಯ ನಿರಾಕರಿಸಲಾಗಿದೆ.
ನ್ಯಾಯಪೀಠ: ಅಂತಾರಾಷ್ಟ್ರೀಯ ನಿಯಮಗಳಿಗಿಂತ ವಿಯೆನ್ನಾ ಒಪ್ಪಂದ ಹೆಚ್ಚು ಮಹತ್ವದ್ದು. ಆ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ಥಾನ ಸಹಿ ಹಾಕಿರುವುದರಿಂದ ಒಪ್ಪಂದವನ್ನು ಪಾಲಿಸುವುದು ಇಬ್ಬರಿಗೂ ಅನಿವಾರ್ಯ. ವಾದ 3 ಪಾಕಿಸ್ಥಾನ: 2008ರಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ಏರ್ಪಟ್ಟಿರುವ ರಾಜತಾಂತ್ರಿಕ ಒಪ್ಪಂದದ ಪ್ರಕಾರ ಈ ಪ್ರಕರಣವನ್ನು ಮುನ್ನಡೆಸಲಾಗಿದೆ. ಹಾಗಾಗಿ, ಈ ಪ್ರಕರಣಕ್ಕೆ ವಿಯೆನ್ನಾ ಪ್ರಕರಣ ಅನ್ವಯಿಸುವುದಿಲ್ಲ. ನ್ಯಾಯಪೀಠ: ವಿಯೆನ್ನಾ ಒಪ್ಪಂದ ಪಾಲನೆ ವಿಚಾರದಲ್ಲಿ ಬೇರ್ಯಾವ ಒಪ್ಪಂದವನ್ನೂ ಹೆಸರಿಸುವಂತಿಲ್ಲ. ಅಲ್ಲದೆ, 2008ರ ಭಾರತ-ಪಾಕಿಸ್ಥಾನ ಒಪ್ಪಂದವು ಈ ಎರಡೂ ದೇಶಗಳಲ್ಲಿ ಗೂಢಚರ್ಯೆ ವಿಚಾರವಾಗಿ ಬಂಧಿಸಲ್ಪಟ್ಟಿರುವ ಉಭಯ ದೇಶಗಳ ನಾಗರಿಕರಿಗೆ ಮಾನವೀಯ ನೆರವು ನೀಡುವುದಕ್ಕೆ ಆದ್ಯತೆ ನೀಡಲಾಗಿದೆ. ಆದರೆ, ಜಾಧವ್ ಪ್ರಕರಣದಲ್ಲಿ ಕನಿಷ್ಠ ಅದನ್ನೂ ಸಹ ಪಾಲಿಸಿಲ್ಲ. ಜಾಧವ್ ವಿರುದ್ಧದ ಮರಣದಂಡನೆ ತೀರ್ಪನ್ನು ತಪ್ಪಿಸಿ ಅವರಿಗೆ ನ್ಯಾಯ ಸಿಗುವಲ್ಲಿ ಐಸಿಜೆ ತೀರ್ಪು ನಾಂದಿ ಹಾಡಿದೆ. ವಕೀಲನಾಗಿದ್ದಕ್ಕೂ ಸಾರ್ಥಕವಾಯಿತು ಎನಿಸುತ್ತಿದೆ.
ಹರೀಶ್ ಸಾಳ್ವೆ, ಭಾರತದ ಪರ ವಕೀಲ
ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಮತ್ತು ಸಂಭ್ರಮಿಸುತ್ತೇವೆ. ಆದರೆ ಜಾಧವ್ ಭದ್ರತೆಯ ಆತಂಕ ಮುಂದುವರಿದಿದೆ. ಇದರಿಂದಾಗಿ ಜಾಧವ್ ವಿರುದ್ಧ ಇನ್ನೊಂದು ಅರೆಬೆಂದ ತೀರ್ಪನ್ನು ಪಾಕಿಸ್ಥಾನ ಹೊರಡಿಸುವ ಅಪಾಯ ತಪ್ಪಿದ್ದಲ್ಲ.
ಸುರ್ಜೆವಾಲ, ಕಾಂಗ್ರೆಸ್ ವಕ್ತಾರ ಜಾಧವ್ ಗಲ್ಲುಶಿಕ್ಷೆಗೆ ತಡೆ ನೀಡಿರುವ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ. ಈ ತೀರ್ಪು ಭಾರತಕ್ಕೆ ಮಹತ್ವದ ಜಯವಾಗಿದೆ. ಅಲ್ಲದೆ, ಇದು ಪ್ರಧಾನಿ ಮೋದಿ ಅವರ ರಾಜತಾಂತ್ರಿಕ ನಡೆಗೂ ಸಂದ ಜಯ.
ರಾಜನಾಥ್ ಸಿಂಗ್, ರಕ್ಷಣಾ ಸಚಿವ ಅಂತಾರಾಷ್ಟ್ರೀಯ ನ್ಯಾಯಾಲಯವು ನಿಜವಾದ ಅರ್ಥದಲ್ಲಿ ನ್ಯಾಯವಾದ ತೀರ್ಪು ನೀಡಿದೆ. ಮಾನವ ಹಕ್ಕುಗಳನ್ನು ಎತ್ತಿಹಿಡಿದಿರುವುದು ಅತ್ಯಂತ ಸೂಕ್ತ ನಿರ್ಣಯವಾಗಿದೆ. ತೀರ್ಪಿಗೆ 15 ನ್ಯಾಯಾ ಧೀಶರು ಪರವಾಗಿ ಮತ ಹಾಕಿದ್ದು, ಬಹುತೇಕ ಅವಿರೋಧ ತೀರ್ಪಿನಂತಾಗಿದೆ.
ಪಿ.ಚಿದಂಬರಂ, ಮಾಜಿ ವಿತ್ತ ಸಚಿವ ಅಂತಾರಾಷ್ಟ್ರೀಯ ನ್ಯಾಯಾಲಯ ನೀಡಿರುವ ತೀರ್ಪು ಐತಿಹಾಸಿಕ. ಜಾಧವ್ ಕುಟುಂಬ ಸದಸ್ಯರ ಜತೆಗೆ ಮಾತ ನಾಡಿದ್ದೇನೆ. ಅವರು ತೋರಿಸಿದ ಧೈರ್ಯ ನಿಜಕ್ಕೂ ಶ್ಲಾಘನೀಯ.
ಡಾ. ಎಸ್. ಜೈಶಂಕರ್, ವಿದೇಶಾಂಗ ಸಚಿವ ಇದು ಭಾರತಕ್ಕೆ ಸಂದ ಅತಿದೊಡ್ಡ ಗೆಲುವು. ಭವಿಷ್ಯದಲ್ಲೂ ನಾವು ಕಾನೂನು ಹೋರಾಟದಲ್ಲಿ ಜಯ ಗಳಿಸುತ್ತೇವೆ ಮತ್ತು ಜಾಧವ್ ಬಿಡುಗಡೆ ಆಗುತ್ತದೆ ಎಂಬ ವಿಶ್ವಾಸವಿದೆ.
ಮಲಿಕ್, ಎನ್‌ಸಿಪಿ ವಕ್ತಾರ