Advertisement
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲ್ ಎನ್ನುವುದು ಪ್ರಜಾತಂತ್ರ ವ್ಯವಸ್ಥಗೆ ಮಾಡುವ ಅಪಚಾರ. ಒಂದರ್ಥದಲ್ಲಿ ಪ್ರಜಾತಂತ್ರ ಹಾಗೂ ಜನಾದೇಶವನ್ನೇ ಅಪಹರಣ ಮಾಡುವ ಅಪಾಯಕಾರಿ ಬೆಳವಣಿಗೆ. ಇಂಥ ದುಸ್ಥಿತಿಗೆ ರಾಜ್ಯ ವಿಧಾನಸಬೆ ಚುನಾವಣೆ ಮೂಲಕವೇ ರಾಷ್ಟ್ರ ಮಟ್ಟದಲ್ಲಿ 2024 ರಲ್ಲಿ ಪ್ರಜಾಪ್ರಭುತ್ವ ರಕ್ಷಣೆಗೆ ನಾಂದಿ ಹಾಡಬೇಕು ಎಂದು ಕೋರಿದರು.
Related Articles
Advertisement
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರೆ ದಂಗೆಯಾಗುತ್ತವೆ ಎನ್ನುವ ಗೃಹ ಸಚಿವ ಅಮಿತ್ ಶಾ, ಮಣಿಪುರ ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇದ್ದರೂ ಹಿಂಸಾಚಾರ ತಡೆಯಲು ಏಕೆ ಸಾಧ್ಯವಾಗಿಲ್ಲ. ಅಲ್ಲಿನ ಡಬಲ್ ಎಂಜಿನ್ ಸರ್ಕಾರ ಏನು ಮಾಡುತ್ತಿದೆ ಎಂದು ಕುಟುಕಿದರು.
ಭ್ರಷ್ಟಾಚಾರ ಎನ್ನುವುದು ಮಹಾರೋಗ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಕ್ಷಣ ಭ್ರಷ್ಟಾಚಾರ ನಿಂತುಬಿಡುತ್ತದೆ ಎಂದು ನಾನು ಹೇಳಲಾರೆ. ಆದರೆ ಭ್ರಷ್ಟಾಚಾರ ಮಾತ್ರವಲ್ಲ ದುರಾಡಳಿತದ ವಿರುದ್ಧ ಸರ್ಕಾರಕ್ಕೆ ಚಾಟಿ ಬೀಸುವಲ್ಲಿ ಹಿರಿಯರ ತಂಡವೊಂದು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಇದೀಗ ಆರ್ಎಸ್‍ಎಸ್ ಹಿಡಿತದಲ್ಲೂ ಇಲ್ಲ. ವಾಜಪೇಯಿ, ಅಡ್ವಾಣಿ ಅವರ ಕಾಲದಲ್ಲಿ ಬಿಜೆಪಿ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದ್ದದ್ದು, ಇದೀಗ ಮಾಯವಾಗಿದ್ದು, ಆರ್‍ಎಸ್‍ಎಸ್ ಮಾನ ವಹಿಸಿದ್ದೇಕೆ ಎಂದು ಪ್ರಶ್ನಿಸಿದರು.
ಒಂದು ನಿರ್ದಿಷ್ಟ ಪಕ್ಷವನ್ನು ವೀರೋಧಿಸಿದವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸುವ ಮಟ್ಟಕ್ಕೆ ಆಡಳಿತ ವ್ಯವಸ್ಥೆ ಪ್ರಜಾಸತ್ತೆಯನ್ನು ಕಳೆದುಕೊಂಡಿದೆ. ಇಡಿ, ಐಟಿ, ಸಿಬಿಐ ಹೀಗೆ ರಾಷ್ಟ್ರೀಯ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ತನಿಖೆಯ ಹೆಸರಿನಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಆಡಿತ ವಿರೋಧಿ ಅಲೆ ಜೋರಾಗಿರುವ ಹಂತದಲ್ಲಿ ಕಾಂಗ್ರೆಸ್ ಭಜರಂಗದಳ ನಿಷೇಧ ಪ್ರಸ್ತಾಪಿಸಿದ್ದೇ ದೊಡ್ಡ ತಪ್ಪು ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ಸಲಹೆಗಾರನಲ್ಲ ಎಂದು ಸ್ಪಷ್ಟಪಡಿಸಿದ ಸುಧೀಂದ್ರ ಕುಲಕರ್ಣಿ, ಆದರೆ ರಾಹುಲ್ ಒಳ್ಳೆ ಹೃದಯವಂತ ಎಂದು ಶ್ಲಾಘಿಸಿದರು.
ನಾನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನವನು. ಅಥಣಿಗೆ ಹೊಂದಿಕೊಂಡಿರುವ ಬಬಲೇಶ್ವರ ಕ್ಷೇತ್ರದಲ್ಲಿ ನೀರಿನ ದುಸ್ಥಿತಿ ಹೇಳತೀರದಾಗಿತ್ತು. ಇಂಥ ದಯನೀಯ ಸ್ಥಿತಿಯ ನೆಲಕ್ಕೆ ನೀರಾವರಿ ಕ್ರಾಂತಿ ಮಾಡಿರುವ ಎಂ.ಬಿ.ಪಾಟೀಲ ಈ ಭಾಗದ ವಿಕಾಸ ಶಿಲ್ಪಿ. ಅವರನ್ನು ಗೆಲ್ಲಿಸುವ ಮೂಲಕ ಬಬಲೇಶ್ವರ ಕ್ಷೇತ್ರದ ಜನರು ಪಾಟೀಲ ಅವರಿಗೆ ಇನ್ನೂ ಹೆಚ್ಚಿನ ಅವಕಾಶ, ಅಧಿಕಾರ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.