Advertisement
ಸಾಕಷ್ಟು ಸಿನಿಮಾಗಳು ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಅಣಿಯಾಗಿವೆ. ಇವೆಲ್ಲವೂ ಚಿತ್ರಮಂದಿರ ತೆರೆಯಲು ಕಾಯುತ್ತಿರೋದು ಸುಳ್ಳಲ್ಲ. ಆದರೆ, ಈಗ ಚಿತ್ರಮಂದಿರ ತೆರೆಯುವ ದಿನ ಹತ್ತಿರಬರುತ್ತಿರುವುದರಿಂದ ಸಿನಿಪ್ರೇಮಿಗಳ ಜೊತೆ ಚಿತ್ರೋದ್ಯಮಿಗಳು ಕೂಡಾ ಖುಷಿಯಾಗಿದ್ದಾರೆ. ಚಿತ್ರಮಂದಿರ ತೆರೆಯೋದೇನೋ ಖುಷಿಯ ವಿಚಾರ. ಆದರೆ, ಪ್ರೇಕ್ಷಕರು ಕೊರೊನಾ ಭಯ ಬಿಟ್ಟುಒಮ್ಮೆಲೇ ಚಿತ್ರಮಂದಿರಕ್ಕೆ ಬರುತ್ತಾರಾ ಎಂಬ ಪ್ರಶ್ನೆಯೂಇದೆ. ಅದಕ್ಕೆ ಉದಾಹರಣೆಯಾಗಿ ಈಗಾಗಲೇಆರಂಭವಾಗಿರುವ ಕೆಲವು ಕ್ಷೇತ್ರಗಳಲ್ಲಿ ನೀರಸ ಪ್ರತಿಕ್ರಿಯೆ ಇದೆ. ಮೆಟ್ರೋ ಓಡಾಟ ಆರಂಭವಾಗಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಿಲ್ಲ… ಹೀಗೆಯೇ ಚಿತ್ರಮಂದಿರಕ್ಕೂ ಪ್ರೇಕ್ಷಕ ಬರಲು ಹಿಂದೇಟು ಹಾಕಿದರೆ ಹೇಗೆ ಎಂಬ ಅನುಮಾನ ಹಾಗೂ ಭಯ ಕೂಡಾ ಕಾಡುತ್ತಿದೆ.
Related Articles
Advertisement
ಸಿನಿಮಾ ಬಿಡುಗಡೆ ಬಗ್ಗೆ ನಾನುಈಗಲೇ ಏನೂ ಹೇಳಲು ಆಗೋದಿಲ್ಲ. ಏಕೆಂದರೆ ನಾವು ಸಿನಿಮಾ ಮಾಡಿರೋದು ಜನರಿಗೆ. ಜನ ಚಿತ್ರಮಂದಿರಕ್ಕೆ ಧೈರ್ಯವಾಗಿ ಬಂದು ಸಿನಿಮಾ ನೋಡುವಂತಾಗಬೇಕು. ಆಗನಾನು ಕೂಡಾ ನನ್ನ ಸಿನಿಮಾವನ್ನು ಬಿಡುಗಡೆ ಮಾಡುತ್ತೇನೆ.–ಸೂರಪ್ಪ ಬಾಬು, ನಿರ್ಮಾಪಕ (ಕೋಟಿಗೊಬ್ಬ -3)
ಈ ವರ್ಷ ನಮ್ಮ ಸಂಸ್ಥೆಯ ಒಂದಾದರೂ ಸಿನಿಮಾ ಬಿಡುಗಡೆಯಾಗಲಿದೆ. ಈಗಾಗಲೆ “ಭೀಮಸೇನಾ ನಳಮಹಾರಾಜ’, “ಟೆನ್’ ಚಿತ್ರಗಳು ಸಿದ್ಧವಾಗಿವೆ. ಶರಣ್ ನಾಯಕರಾಗಿರುವ “ಅವತಾರ್ ಪುರುಷ’ದ ಬಾಕಿ ಉಳಿದಿರುವ ಚಿತ್ರೀಕರಣ ಆರಂಭವಾಗುತ್ತಿದೆ. ಈ ಚಿತ್ರವನ್ನು ಡಿಸೆಂಬರ್ ಕೊನೆಯವಾರದಲ್ಲಿ ಬಿಡುಗಡೆ ಮಾಡುವ ಆಲೋಚನೆ ಇದೆ. ಡಿಸೆಂಬರ್ ನಮಗೆ ಲಕ್ಕಿ. –ಪುಷ್ಕರ್, ನಿರ್ಮಾಪಕ ( ಅವತಾರ್ ಪುರುಷ)
ನಮ್ಮ ಬ್ಯಾನರ್‌ನ ಎರಡು ಚಿತ್ರಗಳಲ್ಲಿ ಒಂದು ಚಿತ್ರವಂತೂ ಈ ವರ್ಷ ಬಿಡುಗಡೆಯಾಗೋದು ಪಕ್ಕಾ. “ಯುವರತ್ನ’ ಈ ವರ್ಷವೇಬಿಡುಗಡೆಯಾಗಬಹುದು. “ಕೆಜಿಎಫ್ 2′ ಬಗ್ಗೆ ಈಗಲೇ ಹೇಳ್ಳೋದು ಕಷ್ಟ. ಏಕೆಂದರೆ ಅದು ಐದು ಭಾಷೆಗಳಲ್ಲಿ ತೆರೆಕಾಣುತ್ತಿರುವುದರಿಂದ ಆ ಬಗ್ಗೆ ಈಗಲೇ ಹೇಳ್ಳೋದು ಕಷ್ಟ. – ಕಾರ್ತಿಕ್, ನಿರ್ಮಾಪಕ, ಹೊಂಬಾಳೆ ಫಿಲಂಸ್
ನಮ್ಮ “ಸಲಗ’ ಚಿತ್ರ ರೆಡಿ ಇದೆ.ರಿಲೀಸ್ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಆ್ಯಕ್ಟೀವ್ ಪ್ರೊಡ್ನೂಸರ್ ಸಭೆ ಮಾಡಿ, ಆ ಬಳಿಕ ನಿರ್ಧರಿಸುತ್ತೇನೆ. –ಕೆ.ಪಿ.ಶ್ರೀಕಾಂತ್, ನಿರ್ಮಾಪಕ (ಸಲಗ)
ನಮ್ಮ “ವಿಷ್ಣುಪ್ರಿಯಾ’ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮಾತ್ರ ಬಾಕಿ. ಎಲ್ಲವೂ ಅಂದುಕೊಂಡಂತೆ ಆದರೆ ಈ ವರ್ಷ ರಿಲೀಸ್ ಮಾಡುತ್ತೇವೆ.–ಕೆ.ಮಂಜು, ನಿರ್ಮಾಪಕ (ವಿಷ್ಣುಪ್ರಿಯಾ)
– ರವಿಪ್ರಕಾಶ್ ರೈ