Advertisement
‘ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಸೆಟ್ಟೇರಿದ ದಿನದಿಂದ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಸಿನಿಮಾವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್ ಪ್ರಸ್ತುತಪಡಿಸುತ್ತಿದೆ. ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಪ್ರಮೋಟ್ ಮಾಡಿ, ಟೀಸರ್, ಟ್ರೇಲರ್ ನಿಂದ ಗಮನ ಸೆಳೆದ ಸಿನಿಮಾ ತಂಡಕ್ಕೆ ರಮ್ಯಾ ಕೋರ್ಟ್ ವಿಚಾರ ಹಿನ್ನೆಡೆಯಾಗಿತ್ತು.
Related Articles
Advertisement
ಪ್ರೋಮೋ ಶೂಟ್ ನಲ್ಲಿ ಮಾತ್ರ ನನ್ನ ದೃಶ್ಯ ಬಳಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಟ್ರೇಲರ್ ನಲ್ಲಿ ನನ್ನ ದೃಶ್ಯವನ್ನು ಅನುಮತಿಯಿಲ್ಲದೆ ಬಳಸಲಾಗಿದೆ. ಸಿನಿಮಾದಲ್ಲಿ ನನ್ನ ದೃಶ್ಯವನ್ನು ಬಳಸಬಾರದು. ಯೂಟ್ಯೂಬ್ ಸೇರಿದಂತೆ ಇತರ ಮಾಧ್ಯಮಗಳಲ್ಲಿ ಈಗಾಗಲೇ ಪ್ರಸಾರವಾಗಿರುವ ವಿಡಿಯೋವನ್ನು ತೆಗೆದುಹಾಕಬೇಕು. ನನಗೆ ಇದರಿಂದ ನಷ್ಟವಾಗಿದೆ. ಇದರಿಂದ 1 ಕೋಟಿ ರೂ. ಪರಿಹಾರವನ್ನು ನೀಡುವಂತೆ ನೋಟಿಸ್ ನಲ್ಲಿ ಒತ್ತಾಯಿಸಿದ್ದು, ತನ್ನ ದೃಶ್ಯವನ್ನು ಸಿನಿಮಾದಲ್ಲಿ ಬಳಸಬಾರದು ಎಂದು ರಮ್ಯಾ ಹೇಳಿದ್ದರು.