ನೀಡಿದ್ದಾರೆ.
Advertisement
ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅವರು, ಕೈಗಾರಿಕೆ ಸ್ಥಾಪನೆ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ಟಂಟಂ, ಆಟೋ ಚಾಲಕರಿಗಾಗಿ ಪ್ರತ್ಯೇಕ ಬಡಾವಣೆ, ನಗರದಕಿಲ್ಲಾ ನಡುಗಡ್ಡೆ ಪ್ರದೇಶದ ಎಲ್ಲ ಮನೆಗಳಿಗೆ ಯೋಗ್ಯ ಪರಿಹಾರ ಹಾಗೂ ಸ್ಥಳಾಂತರ ಮಾಡಲಾಗುವುದು ಎಂದರು.
ಮಾದರಿ ಕ್ಷೇತ್ರವಾಗಿ ನಿರ್ಮಿಸುವುದಾಗಿ ತಿಳಿಸಿದರು. ಹಿರಿಯ ವಕೀಲ ಕೊಪ್ಪ, ಕಳಕಪ್ಪ ಬಾದೋಡಗಿ, ಸಂತೋಷ ಹೊಕ್ರಾಣಿ, ರವಿ ಕುಮಟಗಿ, ಸಂಗನಗೌಡ ಗೌಡರ, ಅಶೋಕ ಮುತ್ತಿನಮಠ, ರಾಜು ಗೌಳಿ ಉಪಸ್ಥಿತರಿದ್ದರು.
Related Articles
ನಾನು ಸುಮಾರು 20 ವರ್ಷದಿಂದ ಬಿಜೆಪಿಯಲ್ಲಿದ್ದೆ. ಬಾಲ್ಯದಿಂದಲೇ ಸಂಘ ಪರಿವಾರದ ಸೇವಕನಾಗಿ, ಎಬಿವಿಪಿ ಕಾರ್ಯಕರ್ತ ಹಾಗೂ ವಿವಿಧ ಜವಾಬ್ದಾರಿ ಹುದ್ದೆಗಳಲ್ಲಿ ಕೆಲಸ ಮಾಡಿರುವೆ. ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ಮುಖ್ಯ ಎಂಬುದು ನಮ್ಮ ಹಿರಿಯರು ಕಲಿಸಿದ್ದಾರೆ. ಅನಿವಾರ್ಯ ಸಂದರ್ಭ ಬಂದಾಗ ಪಕ್ಷವನ್ನೂ ನೋಡದೇ ಸೇವೆ ಮಾಡಿ ಎಂದೂ ಹೇಳಿಕೊಟ್ಟಿದ್ದಾರೆ. ಬಾಗಲಕೋಟೆಯಲ್ಲಿ ಹಾಲಿ ಶಾಸಕರ ವರ್ತನೆ, ಅಗೌರವ ಹೆಚ್ಚಾಗಿದೆ.
ಪಕ್ಷ ಬಿಡಲು ಕಣ್ಣೀರು ಬರುತ್ತಿದೆ. ಆದರೂ, ಅನಿವಾರ್ಯವಾಗಿದೆ. ಬಿಜೆಪಿಯ ಎಲ್ಲ ಜವಾಬ್ದಾರಿಗಳಿಗೆ ರಾಜಿನಾಮೆ ನೀಡಿ, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ಅವರಿಗೆ ಬೆಂಬಲ ನೀಡುತ್ತಿದ್ದೇನೆ. ಶಾಸಕರು, ನಮ್ಮಂತಹ ಸಣ್ಣ ಕಾರ್ಯಕರ್ತರೊಂದಿಗೆ ಏಕೆ ಪೈಪೋಟಿ ಮಾಡುತ್ತಾರೆ ಗೊತ್ತಿಲ್ಲ. ನಾಯಕರಿಗೆ ಕಾರ್ಯಕರ್ತರು ಬೇಕೋ, ಕಾರ್ಯಕರ್ತರಿಗೆ ನಾಯಕರು ಬೇಕೋ ಎಂಬುದು ತಿಳಿಯದಾಗಿದೆ. ನನ್ನ ಪ್ರಕಾರ, ನಾಯಕರಿಗೆ ಕಾರ್ಯಕರ್ತರೇ ಅಗತ್ಯ. ಇದನ್ನು ಹಾಲಿ ಶಾಸಕರು ಅರಿಯದೇ, ಪ್ರತಿ ಹಂತದಲ್ಲೂ ಅಗೌರವ ತೋರುತ್ತಾರೆ.
-ವಿರುಪಾಕ್ಷಿ ಅಮೃತಕರ, ಬಿಜೆಪಿ ತೊರೆದ ಯುವ ಮುಖಂಡ
Advertisement
ಐದು ವರ್ಷಕ್ಕೊಮ್ಮೆಫೋನ್ ಮಾಡ್ತಾರೆ
ಹಲವು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿದ್ದೆ. ಒಮ್ಮೆ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆಯಾಗಿ, ಸಧ್ಯ ರಾಜ್ಯ ಪರಿಷತ್ ಸದಸ್ಯೆಯಾಗಿದ್ದೆ. ಆದರೆ, ಇಲ್ಲಿನ ಶಾಸಕರ ದಬ್ಟಾಳಿಕೆ, ಅಹಂಕಾರದಿಂದ ಬೇಸತ್ತು ಹೋಗಿದ್ದೇವೆ. ಸದ್ಯ ಪಕ್ಷದ ಬಾಗಲಕೋಟೆಯಲ್ಲಿ ತತ್ವ ಸಿದ್ಧಾಂತ ಉಳಿದಿಲ್ಲ. ಅವರ ಗೆಲುವಿಗೆ ಪ್ರತಿ ಚುನಾವಣೆಯಲ್ಲೂ ಹಳ್ಳಿ
ಹಳ್ಳಿ ತಿರುಗಿದ್ದೇನೆ. ಶಾಸಕರ ಪತ್ನಿ ರಾಜೇಶ್ವರಿ ಮೇಡಂ ಅವರು ಐದು ವರ್ಷಕ್ಕೊಮ್ಮೆ ಪ್ರಚಾರಕ್ಕೆ ಬರಲು ಮಾತ್ರ ಫೋನ್ ಮಾಡುತ್ತಾರೆ. ಉಳಿದ ಸಮಯದಲ್ಲಿ ನಮ್ಮ ನೋವು ಕೇಳುವವರು ಯಾರೂ ಇಲ್ಲ. ಸಾಮಾನ್ಯ ಕಾರ್ಯಕರ್ತರಿಗೆ ಯಾವುದೇ ಕೆಲಸ ಮಾಡಿಕೊಡುವ ಬದಲು ಪ್ರೀತಿ-ವಿಶ್ವಾಸ-ಗೌರವದಿಂದ ಮಾತಾಡಬೇಕು. ಆದರೆ, ಬಾಗಲಕೋಟೆಯಲ್ಲಿ ಅದು ಉಳಿದಿಲ್ಲ. ಹೀಗಾಗಿ ಬಿಜೆಪಿ ತೊರೆದು, ಪಕ್ಷೇತರ ಅಭ್ಯರ್ಥಿ ಪರವಾಗಿ ಬೆಂಬಲ ನೀಡಿದ್ದೇನೆ.
-ಕಲಾವತಿ ರಾಜೂರ, ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಜೆಸಿಬಿ ಸದ್ದಿಗೆ ವ್ಯಾಪಾರಸ್ಥರು ಭೀತಿ
ಕಳೆದ 2018ರ ಚುನಾವಣೆಯ ವೇಳೆ ನಗರದ ವ್ಯಾಪಾರಸ್ಥರು ತೀವ್ರ ಆತಂಕದಲ್ಲಿ ಇದ್ದರು. ಬಿಜೆಪಿ ಅಭ್ಯರ್ಥಿ
ಗೆದ್ದರೆ ನಮ್ಮ ಅಂಗಡಿ ಮುಂದಿನ ತಗಡು ತೆಗೆಸುತ್ತಾರೆ, ವಿವಿಧ ರೀತಿಯ ಕಿರಿಕಿರಿ ಕೊಡುತ್ತಾರೆ ಎಂದು ತಟಸ್ಥರಾಗಿದ್ದರು. ಆಗ ನಾನು, ಅವರನ್ನು ವ್ಯಾಪಾರಸ್ಥರ ಬಳಿ ಕರೆದುಕೊಂಡು ಹೋಗಿ ಮಾತನಾಡಿಸಿದ್ದೆ. ನಿಮ್ಮ ವ್ಯಾಪಾರಕ್ಕೆ ಯಾವುದೇ ತೊಂದರೆ ಕೊಡಲ್ಲ ಅಂದರು. ಎಲ್ಲ ವ್ಯಾಪಾರಸ್ಥರು ಅವರನ್ನು ಗೆಲ್ಲಿಸಿದೇವು. ಆದರೆ, ಗೆದ್ದ ಒಂದೇ ವರ್ಷಕ್ಕೆ ಜೆಸಿಬಿ ಕಳುಹಿಸಿ ಪತ್ರಾಸ್ ತಗೆಸಿದರು. ಅಂಗಡಿಯೊಳಗೆ ಮೆಣಸಿನಕಾಯಿ, ಬೆಲ್ಲ ಮುಂತಾದ ವಸ್ತು ಇಟ್ಟು ಮಾರಾಟ ಮಾಡಲು ಆಗಲ್ಲ. ಹೀಗಾಗಿ ಎದುರು ಪತ್ರಾಸ್ ಹಾಕಿರುತ್ತಾರೆ. ಆದರೆ, ಶಾಸಕರು, ಮಾನವೀಯತೆ ತೋರದೇ ಎಲ್ಲವೂ ಕೆಡವಿ ಹಾಕಿದರು. ಈ ರೀತಿ ಬಹಳ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ನೊಂದು ಬಿಜೆಪಿ ಬಿಡಬೇಕಾಯಿತು.
-ಕಳಕಪ್ಪ ಬಾದೋಡಗಿ, ಬಿಜೆಪಿ ತೊರೆದ ಹಿರಿಯ
ಕಾರ್ಯಕರ್ತ ಸಂತ್ರಸ್ತರ ಮನೆ ಕೆಡವಬಾರದು
ನಾವೂ ಕೂಡ ಸಂತ್ರಸ್ತರು, ಪರಿಹಾರ ಪಡೆದರೂ 10 ವರ್ಷ ಹಳೆಯ ಮನೆಯಲ್ಲೇ ಇದ್ದೇವು. ಪರಿಹಾರ ಕೊಟ್ಟ,
ಮನೆ ಕೆಡವಿದರೆ ಅವರು ಎಲ್ಲಿರಬೇಕು. ಪರಿಹಾರ ಪಡೆದ ಸಂತ್ರಸ್ತರು ತಂದೆ ಮಾಡಿದ ಸಾಲ ತೀರಿಸಿ, ನವನಗರದಲ್ಲಿ
ಮನೆ ಕಟ್ಟಿಕೊಳ್ಳಲು ಬೇಗ ಆಗಲ್ಲ. ಇದ್ಯಾವುದನ್ನೂ ಲೆಕ್ಕಸಿದೇ ಜೆಸಿಬಿ ಹಚ್ಚಿ ಮನೆ ಕೆಡವುದು ಮಾನವೀಯ ಧರ್ಮವಲ್ಲ. ನಾವು ಅಧಿಕಾರಕ್ಕೆ ಬಂದರೆ ಯಾವ ಮನೆ, ಅಂಗಡಿ ಮುಂದಿನ ತಗಡು ಯಾವುದೇ ಕೆಡವಲ್ಲ. ಸಧ್ಯ ಕೆಂಪು ರಸ್ತೆಯ ಮುಚಖಂಡಿ ಕ್ರಾಸ್‌ನ ಜನ ಇಂತಹ ಭಯದಲ್ಲೇ ಬದುಕುತ್ತಿದ್ದಾರೆ.
-ಮಲ್ಲಿಕಾರ್ಜುನ ಚರಂತಿಮಠ, ಪಕ್ಷೇತರ ಅಭ್ಯರ್ಥಿ