ಬೆಂಗಳೂರು: ದಲಿತ ಸಮಾಜ ಒಗ್ಗಟ್ಟಾಗಿ ಸೇರಬೇಕಿದೆ. ಈ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೂಲತಃ ದಲಿತ ಸಮುದಾಯ ಕಾಂಗ್ರೆಸ್ ಪರವಾಗಿದೆ. ರಾಜಕೀಯ ಕಾರಣಗಳಿಗೆ ಗುಂಪುಗಳಾಗಿ ವಿಂಗಡಣೆಯಾಗಿದೆ. ಹಾಗಾಗಿ ನಾನು, ಪರಮೇಶ್ವರ್ ಒಟ್ಟಾಗಿ ಸೇರಿ ಸಮಾವೇಶ ಆಯೋಜನೆಗೆ ನಿರ್ಧರಿಸಿದ್ದೇವೆ ಎಂದು ಹೇಳಿದರು.
ದೊಡ್ಡ ಮಟ್ಟದಲ್ಲಿ ದಲಿತ ಸಮಾವೇಶ ಆಯೋಜನೆಗೆ ನಿರ್ಧರಿಸಿದ್ದೇವೆ. ಇದರಿಂದ ಕಾಂಗ್ರೆಸ್ ಗೆ ಶಕ್ತಿ ಬರುತ್ತದೆ. ಸಿದ್ದರಾಮಯ್ಯ ಕಾಲದಲ್ಲಿ ಆದ ಯೋಜನೆಗಳು ಬಹಳ ಇದೆ. 25-30 ಸಾವಿರದಷ್ಟು ದೊಡ್ಡ ಮೊತ್ತದ ಅನುದಾನ ಬಜೆಟ್ ನಲ್ಲಿ ನೀಡಲಾಗಿತ್ತು ಎಂದರು.
ಇದನ್ನೂ ಓದಿ:ಪಾಕ್ ಪ್ರವಾಸದಲ್ಲಿ ಊಟದ್ದೇ ಚಿಂತೆ!: ಬಾಣಸಿಗರನ್ನು ಕರೆದೊಯ್ಯಲಿದೆ ಇಂಗ್ಲೆಂಡ್ ಟೆಸ್ಟ್ ತಂಡ
ಈಗ ಬಜೆಟ್ ಗಾತ್ರದ ಆಧಾರದ ಮೇಲೆ 42 ಸಾವಿರ ಕೋಟಿ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಿಡಬೇಕಿತ್ತು. ಇದನ್ನು ಬಿಜೆಪಿ ಸರ್ಕಾರ ಬೇರೆ ಕಡೆ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು.