ಮುಂಬೈ: ಭಾರತೀಯ ಜನತಾ ಪಕ್ಷಕ್ಕೆ ಭಾರೀ ಹಿನ್ನಡೆ ಎಂಬಂತೆ ಮಹಾರಾಷ್ಟ್ರದ ಬಿಜೆಪಿ ಹಿರಿಯ ಮುಖಂಡ ಏಕ್ ನಾಥ್ ಖಡ್ಸೆ ಬುಧವಾರ(ಅಕ್ಟೋಬರ್ 21, 2020) ಪಕ್ಷವನ್ನು ತ್ಯಜಿಸಿ ಎನ್ ಸಿಪಿಗೆ ಸೇರ್ಪಡೆಯಾಗಿರುವುದಾಗಿ ವರದಿ ತಿಳಿಸಿದೆ.
ಏಕ್ ನಾಥ್ ಖಡ್ಸೆ 35 ವರ್ಷಗಳ ಕಾಲ ಭಾರತೀಯ ಜನತಾ ಪಕ್ಷದಲ್ಲಿದ್ದರು. ಇಂದು ಬಿಜೆಪಿಗೆ ಗುಡ್ ಬೈ ಹೇಳಿರುವ ಖಾಡ್ಸೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಾಗಿ ಎನ್ ಸಿಪಿ ಮುಖಂಡ, ಮಹಾರಾಷ್ಟ್ರ ಸಚಿವ ಜಯಂತ್ ಪಾಟೀಲ್ ಘೋಷಿಸಿದ್ದಾರೆ.
“ಏಕ್ ನಾಥ್ ಖಡ್ಸೆ ಅವರು ಮಹಾರಾಷ್ಟ್ರದಲ್ಲಿ ಹಲವು ವರ್ಷಗಳ ಕಾಲ ಬಿಜೆಪಿ ಪಕ್ಷ ಕಟ್ಟಲು ಶ್ರಮಿಸಿದ್ದರು. ಆದರೆ ಖಡ್ಸೆ ಅವರು ಬಿಜೆಪಿಗೆ ರಾಜೀನಾಮೆ ನೀಡಿರುವುದಾಗಿ ಮಾಹಿತಿ ನೀಡುತ್ತಿದ್ದು, ಅವರನ್ನು ಎನ್ ಸಿಪಿಗೆ ಸೇರ್ಪಡೆಗೊಳಿಸಲು ನಿರ್ಧರಿಸಿದ್ದೇವೆ. ಅವರು ಶುಕ್ರವಾರ (ಅಕ್ಟೋಬರ್ 23, 2020) ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಪಾಟೀಲ್ ತಿಳಿಸಿರುವುದಾಗಿ ಎನ್ ಎನ್ ಐ ವರದಿ ತಿಳಿಸಿದೆ.
ಇದನ್ನೂ ಓದಿ:ದೀರ್ಘ ಕಾಲದ ಆರೋಗ್ಯ ಸಮಸ್ಯೆ ನಿವಾರಣೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಶುಂಠಿ
ಸುಮಾರು 35 ವರ್ಷಗಳ ಕಾಲ ಬಿಜೆಪಿಯಲ್ಲಿದ್ದ ಏಕ್ ನಾಥ್ ಖಡ್ಸೆ ಅವರು ಪಕ್ಷವನ್ನು ತೊರೆದಿದ್ದು, ಶುಕ್ರವಾರ ಎನ್ ಸಿಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಎನ್ ಸಿಪಿ ಪಕ್ಷ ಸೇರ್ಪಡೆ ದಿನದಂದು ಖಡ್ಸೆ ಅವರ ಜತೆ ಹಲವಾರು ಕಾರ್ಯಕರ್ತರು, ಅಭಿಮಾನಿಗಳು ಕೂಡಾ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಿದರು.