Advertisement
ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಸಿಡ್ನಿ ಸಿಕ್ಸರ್ ಆರಂಭಕಾರ ಜೇಮ್ಸ್ ವಿನ್ಸ್ ಅವರ ಅಮೋಘ 95 ರನ್ ಪರಾಕ್ರಮದಿಂದ 6 ವಿಕೆಟಿಗೆ 188 ರನ್ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಪರ್ತ್ ಸ್ಕಾರ್ಚರ್ 9 ವಿಕೆಟಿಗೆ 161 ರನ್ ಗಳಿಸಿ ಶರಣಾಯಿತು.
16ನೇ ಓವರ್ ತನಕ ಕ್ರೀಸಿಗೆ ಅಂಟಿಕೊಂಡ ಜೇಮ್ಸ್ ವಿನ್ಸ್ ಮುಂದೆ ಶತಕ ಬಾರಿಸುವ ಉತ್ತಮ ಅವಕಾಶ ವೊಂದಿತ್ತು. ಆದರೆ ಐದೇ ರನ್ನಿನಿಂದ ಇದನ್ನು ಕಳೆದು ಕೊಂಡರು. 60 ಎಸೆತ ಎದುರಿಸಿದ ವಿನ್ಸ್ 10 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ ಸಿಡ್ನಿಯ ದೊಡ್ಡ ಮೊತ್ತಕ್ಕೆ ಕಾರಣರಾದರು. ವಿನ್ಸ್ ಹೊರತುಪಡಿಸಿದರೆ 20 ರನ್ ಮಾಡಿದ ಡೇನಿಯಲ್ ಕ್ರಿಸ್ಟಿಯನ್ ಅವರದೇ ಹೆಚ್ಚಿನ ಗಳಿಕೆ.
ಪರ್ತ್ ತಂಡದ ಚೇಸಿಂಗ್ ಭರ್ಜರಿ ಯಾಗಿಯೇ ಇತ್ತು. ಆರಂಭಿಕರಾದ ಲಿಯಮ್ ಲಿವಿಂಗ್‌ಸ್ಟೋನ್ (45) ಮತ್ತು ಕ್ಯಾಮರಾನ್ ಬಾನ್‌ಕ್ರಾಫ್ಟ್ (30) ಓವರಿಗೆ ಹತ್ತರ ಸರಾಸರಿಯಲ್ಲಿ ರನ್ ಪೇರಿಸುತ್ತ ಸಾಗಿದರು. 4.5 ಓವರ್‌ಗಳಿಂದ 45 ರನ್ ಬಾರಿಸಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಸಿಡ್ನಿ ಬೌಲರ್ ಸಂಪೂರ್ಣ ಮೇಲುಗೈ ಸಾಧಿಸಿದರು.
Related Articles
Advertisement
ಸಂಕ್ಷಿಪ್ತ ಸ್ಕೋರ್ ಸಿಡ್ನಿ ಸಿಕ್ಸರ್-6 ವಿಕೆಟಿಗೆ 188 (ವಿನ್ಸ್ 95, ಕ್ರಿಸ್ಟಿಯನ್ 20, ಸಿಲ್ಕ್ ಔಟಾಗದೆ 17, ಟೈ 29ಕ್ಕೆ 2, ರಿಚರ್ಡ್
ಸನ್ 45ಕ್ಕೆ 2). ಪರ್ತ್ ಸ್ಕಾರ್ಚರ್-9 ವಿಕೆಟಿಗೆ 161 (ಲಿವಿಂಗ್‌ಸ್ಟೋನ್ 45, ಬಾನ್‌ಕ್ರಾಫ್ಟ್ 30, ಹಾರ್ಡಿ 26, ಡ್ವಾ ರ್ಶಿಯಸ್ 37ಕ್ಕೆ 3, ಬರ್ಡ್ 14ಕ್ಕೆ 2, ಕ್ರಿಸ್ಟಿಯನ್ 25ಕ್ಕೆ 2). ಪಂದ್ಯಶ್ರೇಷ್ಠ: ಜೇಮ್ಸ್ ವಿನ್ಸ್. ಸರಣಿಶ್ರೇಷ್ಠ: ಜೋಶ್ ಫಿಲಿಪ್.