ನವದೆಹಲಿ: ರಿಜಿಸ್ಟರ್ ಮ್ಯಾರೇಜ್ ಆಕಾಂಕ್ಷಿಗಳಿಗೆ ದೆಹಲಿ ಹೈ ಕೋರ್ಟ್ ಸಿಹಿಸುದ್ದಿ ಕೊಟ್ಟಿದೆ.
“ವಿಡಿಯೊ ಕಾನ್ಫರೆನ್ಸ್ ಮೂಲಕ ಜೋಡಿ ಹಾಜರಿದ್ದು, ಮದು ವೆಗಳ ನೋಂದಣಿ ಮಾಡಿಕೊಳ್ಳಬಹುದು’ ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ.
ಅಮೆರಿಕದ ಎನ್‌ಆರ್‌ಐ ಜೋಡಿಯೊಂದು 2001ರಲ್ಲಿ ವಿವಾ ಹವಾಗಿತ್ತು. ಕೋವಿಡ್ ಪರಿಸ್ಥಿತಿ ಕಾರಣ ಭಾರತಕ್ಕೆ ಬರಲು ಸಾಧ್ಯವಿಲ್ಲ ದಿರುವುದರಿಂದ, ಆನ್ ಲೈನ್ ಮೂಲಕ ತಮ್ಮ ವಿವಾಹವನ್ನು ನೋಂದಾಯಿಸಲು ಅವಕಾಶ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾ.ರೇಖಾ ಪಲ್ಲಿ ಅವರು ಅರ್ಜಿದಾರರ ಹಾದಿ ಸುಗಮಗೊಳಿಸಿದ್ದು, “ದೈಹಿಕ ಉಪ ಸ್ಥಿತಿ ಕಡ್ಡಾಯ ಎಂಬ ಕಾನೂನು ನಾಗರಿಕರ ಹಕ್ಕುಗಳಿಗೆ ಅಡ್ಡಿಯಾಗಬಾರದು’ ಎಂದು ಅಭಿ ಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ:ಮೇಕೆ ಸಾಕಾಣಿಕೆ ಯಲ್ಲಿ ಕಡಿಮೆ ಬಂಡವಾಳ ಹಾಕಿ ಅಧಿಕ ಲಾಭ ಗಳಿಸುವುದು ಹೇಗೆ ?
ಕೋರ್ಟ್ ಹೇಳಿದ್ದೇನು?: “ನೋಂದಾಯಿತ ವಿವಾಹಗಳಿಗೆ ಜೋಡಿಗಳ ದೈಹಿಕ ಉಪಸ್ಥಿತಿ ಕಡ್ಡಾಯವಲ್ಲ. ವರ್ಚುವಲ್ ಕ್ರಮಗಳನ್ನು ಅನುಸರಿಸುವುದರಿಂದಲೂ ವಿಡಿಯೊ ಸಾಕ್ಷಿ ಗಳನ್ನು ಸುಲಭವಾಗಿ ಸಂಗ್ರಹಿಸಿಡಲು ಸಾಧ್ಯವಿದೆ. ದೈಹಿಕ ಉಪಸ್ಥಿತಿಗೆ ಅಂಜುವ ಪಕ್ಷದವರಿಗೆ ವರ್ಚುವಲ್ ಹಾಜರಾತಿ ನಿಯಮ ಉತ್ತೇಜನ ತುಂಬಲಿದೆ. ಭವಿಷ್ಯದ ರಿಜಿಸ್ಟರ್ ಮ್ಯಾರೇಜ್‌ಗಳ ತೊಡಕುಗಳನ್ನು ನಿಯಂತ್ರಿಸಲು ಇದು ಸಹ ಕಾರಿ’ ಎಂದು ಅಭಿಮತ ಸೂಚಿಸಿದ್ದಾರೆ.