ತೆಕ್ಕಟ್ಟೆ: ದಸರಾ ರಜೆ ಮುಗಿದು ಬಿಸಿಯೂಟ ಸಹಿತ ಶಾಲೆ ಆರಂಭಿಸುವುದಾಗಿ ಸರಕಾರ ಘೋಷಿಸಿದ ಬೆನ್ನಲ್ಲೇ ತಾಲೂಕಿನ ಬಿದ್ಕಲ್‌ಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 6ನೇ ತರಗತಿಯಿಂದ 10ನೇ ತರಗತಿಯ ವರೆಗೆ ಪ್ರೌಢಶಾಲಾ ವಿಭಾಗದಲ್ಲಿ 364 ವಿದ್ಯಾರ್ಥಿಗಳು ಹಾಗೂ ಪ್ರಾಥಮಿಕ ವಿಭಾಗದಲ್ಲಿ 120 ವಿದ್ಯಾರ್ಥಿಗಳು ಅ.21 ರಂದು ಬಿಸಿಯೂಟವನ್ನು ಸವಿದರು.
ಇದನ್ನೂ ಓದಿ:ವಿಪಕ್ಷಗಳ ಟೀಕೆಗಳಿಗೆ ಲಸಿಕೆ ಮೂಲಕ ಉತ್ತರ ನೀಡಿದ್ದೇವೆ: ಕಟೀಲ್
ಹಾಲು ಉಕ್ಕುಸಿ ಬಿಸಿಯೂಟದ ಅಡುಗೆ ಆರಂಭ : ಧಾರ್ಮಿಕ ನಂಬಿಕೆಯಂತೆ ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕಟ್ಟಡದಲ್ಲಿ ಬಿಸಿಯೂಟ ಆರಂಭಿಸುವ ಅಡುಗೆ ಒಲೆಗಳಿಗೆ ಪೂಜೆ ಮಾಡಿ, ನಂತರ ಹಾಲು ಉಕ್ಕುಸಿ ಬಿಸಿಯೂಟದ ಅಡಿಗೆ ಆರಂಭಿಸುತ್ತಿರುವ ದೃಶ್ಯ ಕಂಡು ಬಂದಿದ್ದು , ಶಾಲೆಯ 6ನೇ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 176 ವಿದ್ಯಾರ್ಥಿಗಳು ಬಿಸಿಯೂಟದ ಜತೆಗೆ ವಿಶೇಷವಾಗಿ ಪಾಯಸವನ್ನು ಸವಿದು ಸಂಭ್ರಮಿಸಿದರು
ವರದಿ: ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ