Advertisement

ನಟಿ, ಗಾಯಕಿ ಬಿದಿಶಾ ಬೆಝ್ಬುರ್ಹಾ ನಿಗೂಢ ಸಾವು;ಪತಿ ವಶಕ್ಕೆ

09:43 AM Jul 19, 2017 | |

ಗುರುಗ್ರಾಮ: ಅಸ್ಸಾಂನ ನಟಿ, ಗಾಯಕಿ ಬಿದಿಶಾ ಬೆಝ್ಬುರ್ಹಾ ತನ್ನ ಫ್ಲ್ಯಾಟ್‌ನಲ್ಲಿ ಮಂಗಳವಾರ ರಾತ್ರಿ  ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.  

Advertisement

ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ 27 ರ ಹರೆಯದ ಬಿದಿಶಾ ಶವ ಕಂಡು ಬಂದಿದೆ. ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ನಿಶಿತ್‌‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. 

ಬಿದಿಶಾ ಅಸ್ಸಾಂನ ಟಿವಿ ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು.ಇತ್ತೀಚೆಗೆ ಬಾಲಿವುಡ್‌ ಚಿತ್ರ ಜಗ್ಗಾ ಜಾಸೂಸ್‌ ನ  ಹಾಡಿನಲ್ಲೂ ಕಾಣಿಸಿಕೊಂಡಿದ್ದರು.ಧಾರಾವಾಹಿಗಳಲ್ಲಿ ಹಿನ್ನಲೆ ಗಾಯಕಿಯಾಗಿ ಗುರುತಿಸಿಕೊಂಡಿದ್ದರು. 

ಅಕೌಂಟ್ಸ್‌ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದ ಬಿದಿಶಾ ಗುಜರಾತ್‌ ಮೂಲದ ನಿಶಿತ್‌ನನ್ನು ವಿವಾಹವಾಗಿ ಉದ್ಯೋಗ ನಿಮಿತ್ತ ಗುರುಗ್ರಾಂನಲ್ಲಿ ವಾಸವಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next