Advertisement

ಬಿಜೆಪಿಗೆ ಬೀದರ ಜಿಪಂ ಆಡಳಿತ ಭಾಗ್ಯ?

04:27 PM Dec 15, 2020 | Suhan S |

ಬೀದರ: ಅವಿಶ್ವಾಸ ಮಂಡನೆಯಿಂದ ತೆರವಾಗಿರುವ ಬೀದರ ಜಿಪಂ ಅಧ್ಯಕ್ಷ-ಉಪಾಧ್ಯಕ್ಷಸ್ಥಾನಕ್ಕೆ ಸೋಮವಾರ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಕಾಂಗ್ರೆಸ್‌ ಉಚ್ಛಾಟಿತ ಸದಸ್ಯರ ಬೆಂಬಲದಿಂದ ಬಿಜೆಪಿಗೆ ಆಡಳಿತ ಭಾಗ್ಯ ಒಲಿದಿದೆ ಎನ್ನಲಾಗಿದೆ. ಚುನಾವಣೆ ಹೈಕೋರ್ಟ್‌ ಪೀಠದ ಆದೇಶಕ್ಕೆ ಒಳಪಟ್ಟಿರುವ ಹಿನ್ನೆಲೆಯಲ್ಲಿಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಫಲಿತಾಂಶ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

Advertisement

ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಮಹಿಳೆ)ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆಮೀಸಲಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾಒಂದು ನಾಮಪತ್ರ ಸಲ್ಲಿಕೆಯಾದ ಹಿನ್ನೆಲೆಯಲ್ಲಿಅವಿರೋಧ ಆಯ್ಕೆ ನಡೆದಿದೆ. ಒಟ್ಟು 33 ಸದಸ್ಯರಪೈಕಿ 24 ಸದಸ್ಯರು ಸಭೆಗೆ ಹಾಜರಾಗಿದ್ದರು. 11ಜನ ಬಿಜೆಪಿ, 11 ಜನ ಕಾಂಗ್ರೆಸ್‌ ಉಚ್ಛಾಟಿತಮತ್ತು 2 ಜೆಡಿಎಸ್‌ ಸದಸ್ಯರು ಇದ್ದರು. ಕಲ್ಬುರ್ಗಿ ಹೈಕೋರ್ಟ್‌ ಪೀಠದ ಆದೇಶದಂತೆ ಪ್ರಾದೇಶಿಕ ಆಯುಕ್ತ ಡಾ| ಎನ್‌.ವಿ ಪ್ರಸಾದ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಫಲಿತಾಂಶದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಡಿ.21ರ ಬಳಿಕ ಘೋಷಣೆ ಆಗುವ ಸಾಧ್ಯತೆ ಇದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತವರು ಜಿಲ್ಲೆಯಲ್ಲೇ ಆಡಳಿತಾರೂಢ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿದೆ. ಹಿಂದಿನ ಅಧ್ಯಕ್ಷೆ ಗೀತಾ ಚಿದ್ರಿ ಮತ್ತು ಉಪಾಧ್ಯಕ್ಷ ಲಕ್ಷ್ಮಣರಾವ್‌ ಬುಳ್ಳಾ ವಿರುದ್ಧನ.23ರಂದು ಅವಿಶ್ವಾಸ ಅಂಗೀಕರಿಸಲಾಗಿದೆ. ಜಿಪಂ 34 ಸದಸ್ಯ ಬಲ ಹೊಂದಿದ್ದು, ಸಂತಪೂರ ಕ್ಷೇತ್ರದ ಸದಸ್ಯರ ನಿಧನದಿಂದ ಈ ಸಂಖ್ಯೆ 33ಕ್ಕೆಇಳಿದಿದೆ. ಕಾಂಗ್ರೆಸ್‌ 19 ಸದಸ್ಯರೊಂದಿಗೆ ಸ್ಪಷ್ಟ ಬಹುಮತ ಹೊಂದಿತ್ತು. ಆದರೆ, ನಂತರದವಿದ್ಯಮಾನಗಳಿಂದಾಗಿ 11 ಕೈ ಸದಸ್ಯರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಸೋಮವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟಿತ 11 ಸದಸ್ಯರು ಮತ್ತು 2 ಜೆಡಿಎಸ್‌ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಅಧ್ಯಕ್ಷ ಸ್ಥಾನ ಹಾಗೂ ಉಚ್ಛಾಟಿತ ಕಾಂಗ್ರೆಸ್‌ ಸದಸ್ಯರೊಬ್ಬರಿಗೆ ಉಪಾಧ್ಯಕ್ಷ ಸ್ಥಾನ ಲಭಿಸಿದೆ ಎನ್ನಲಾಗಿದೆ.

ಚುನಾವಣೆ ನ್ಯಾಯಾಲಯದ ಹೈಕೋರ್ಟ್‌ ಪೀಠದ ಆದೇಶಕ್ಕೆ ಒಳಪಟ್ಟಿರುವುದರಿಂದ ಡಿ.21ರ ಒಳಿಕ ಘೋಷಣೆ ಆಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next