Advertisement

ರಾಜ್ಯಾದ್ಯಂತ 28 “ವುಮೆನ್‌ ಪೋಸ್ಟ್‌ ಆಫೀಸ್‌’

12:03 PM Mar 19, 2020 | |

ಬೀದರ: ಮಹಿಳಾ ಸಬಲೀಕರಣಕ್ಕಾಗಿ ಭಾರತೀಯ ಮಹಿಳಾ ಬ್ಯಾಂಕ್‌ ಆರಂಭಿಸಿರುವ ಕೇಂದ್ರ ಸರ್ಕಾರ ಇದೀಗ ದೇಶದ ಆಯ್ದ ನಗರಗಳಲ್ಲಿ ಮಹಿಳಾ ಗ್ರಾಹಕರಿಗೆ ಸಂವಹನಕ್ಕೆ ಅನುಕೂಲವಾಗುವಂತೆ ಬೀದರ ಸೇರಿ ರಾಜ್ಯದ 28 ಕಡೆ “ವುಮೆನ್‌ ಪೋಸ್ಟ್‌ ಆಫೀಸ್‌’ಗಳನ್ನು ಆರಂಭಿಸಿದೆ.

Advertisement

ಸಮರ್ಪಕ ಸಂವಹನ ಮಾಧ್ಯಮವಾಗಿರುವ ಅಂಚೆ ಇಲಾಖೆ ಉಳಿಸುವ ದಿಸೆಯಲ್ಲಿ ಅದರ ಸೇವೆಯ ಬೇರುಗಳನ್ನು ವಿಸ್ತರಿಸಲು ಸರ್ಕಾರ ಕ್ರಮ ವಹಿಸುತ್ತಿದ್ದು, ಮಹಿಳಾ ನಿರ್ವಹಣಾ ಅಂಚೆ ಕಚೇರಿ ಇದರ ಭಾಗವಾಗಿದೆ. ಪೂರ್ಣ ಪ್ರಮಾಣದಲ್ಲಿ ಮಹಿಳೆಯರಿಂದಲೇ ಕೂಡಿರುವ ಕಚೇರಿಗಳನ್ನು ತೆರೆಯುವ ಮೂಲಕ ಅಂಚೆ ಇಲಾಖೆ ಸ್ತ್ರೀಯರ ಕಾರ್ಯಕ್ಷಮತೆಗೆ ಅವಕಾಶ ಒದಗಿಸಿದಲ್ಲದೇ ಅವರ ಘನತೆ ಹೆಚ್ಚಿಸಿ ಗಮನ ಸೆಳೆದಿದೆ.

ರಾಜ್ಯದಲ್ಲಿ ಉತ್ತರ ಕರ್ನಾಟಕ ಪ್ರಾದೇಶಿಕ ವಲಯ 14 ಮತ್ತು ದಕ್ಷಿಣ ಕರ್ನಾಟಕದಲ್ಲಿ 13 ಜತೆಗೆ ಬೆಂಗಳೂರು ವಲಯದಲ್ಲಿ 4 ಸೇರಿದಂತೆ ಒಟ್ಟು 31 ಮುಖ್ಯ ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಸದ್ಯ 28 ಆಯ್ದ ನಗರಗಳಲ್ಲಿ ಮಹಿಳಾ ಅಂಚೆ ಕಚೇರಿಗಳನ್ನು ತೆರೆಯಲಾಗಿದೆ.

ಬೀದರನ ಬ್ರಿಮ್ಸ್‌ನಲ್ಲಿರುವ ಉಪ ಕಚೇರಿಯನ್ನೇ “ವುಮೆನ್ಸ್‌ ಅಂಚೆ ಕಚೇರಿ’ಯಾಗಿ ಪರಿವರ್ತಿಸಲಾಗಿದೆ. ಈ ಕಚೇರಿ ಸಹ ಅಂಚೆಯ ಎಲ್ಲ ಸಾಮಾನ್ಯ ಕಚೇರಿಗಳಂತೆಯೇ ಕಾರ್ಯ ನಿರ್ವಹಿಸಲಿದೆ.

ಎಲ್ಲರೂ ಮಹಿಳೆಯರೇ: ವುಮೆನ್ಸ್‌ ಅಂಚೆ ಕಚೇರಿಯಲ್ಲಿ ಎಲ್ಲಾ ಅಧಿಕೃತ ಹುದ್ದೆಗಳು, ಪೋಸ್ಟ್‌ ಮಾಸ್ಟರ್‌ ಉಸ್ತುವಾರಿಗಳಿಂದ ಹಿಡಿದು ಕೌಂಟರ್‌ ನಿರ್ವಾಹಕರ ವರೆಗೆ ಮಹಿಳೆಯರೇ ಕಾರ್ಯನಿರ್ವಹಿಸಲಿದ್ದಾರೆ. ಉಳಿತಾಯ  ಬ್ಯಾಂಕ್‌ ಕೌಂಟರ್‌ಗಳು, ವಿವಿಧೋದ್ದೇಶ ನೋಂದಣಿ ಬುಕಿಂಗ್‌ ಕೌಂಟರ್‌ಗಳು, ಜೀವ ವಿಮೆಗಳು, ಆಧಾರ್‌ ಸೆಂಟರ್‌, ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಮತ್ತು ಖಜಾನೆ ಕೆಲಸ ಸೇರಿದಂತೆ ಎಲ್ಲ ರೀತಿಯ ಕೆಲಸಗಳನ್ನು ಅವರೇ ಮೇಲ್ವಿಚಾರಣೆ-ನಿರ್ವಹಣೆ ಮಾಡಲಿದ್ದಾರೆ.

Advertisement

ಬೀದರ ಮಹಿಳಾ ಅಂಚೆ ಕಚೇರಿಯಲ್ಲಿ ಕೆಲಸ-ಕಾರ್ಯಗಳ ನಿರ್ವಹಣೆ ಹಾಗೂ ಗ್ರಾಹಕರಿಗೆ ಎಲ್ಲ ರೀತಿಯ ಸೇವೆಯನ್ನು ಮಹಿಳೆಯರು ಒದಗಿಸುತ್ತಾರೆ. ಸದ್ಯ ಒಬ್ಬರು ಅಂಚೆ ಪಾಲಕರು (ಪೋಸ್ಟ್‌ ಮಾಸ್ಟರ್‌) ಮತ್ತು ಒಬ್ಬರು ಟಾಕ್‌ ಸೇವಕರ ಹುದ್ದೆ ಇದ್ದು, ಮಹಿಳೆಯರನ್ನೇ ನಿಯೋಜಿಸಲಾಗಿದ್ದು, ಸಿಬ್ಬಂದಿ ತಮ್ಮ ಕಾರ್ಯಭಾರ ಶುರು ಮಾಡಿದ್ದಾರೆ.

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next