Advertisement

ಕೋವಿಡ್ ಕೈಮೀರಿದರೆ ಆಡಳಿತ ಸಿದ್ಧವಿರಲಿ

03:33 PM Apr 10, 2020 | Naveen |

ಬೀದರ: ವಿವಿಧ ದೇಶಗಳಲ್ಲಿ ಕೋವಿಡ್  ಸೋಂಕು ತೀವ್ರವಾಗಿ ವ್ಯಾಪಿಸುವುದನ್ನು ನೋಡುತ್ತಿದ್ದೇವೆ. ಹೀಗಾಗಿ ಮೂರರಿಂದ ಆರು ತಿಂಗಳ ಅವಧಿವರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಿಸಿ ಪರಿಸ್ಥಿತಿ ಕೈ ಮೀರಿದರೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲು ಸಿದ್ಧವಾಗಿರಬೇಕು ಎಂದು ಶಾಸಕ ಈಶ್ವರ ಖಂಡ್ರೆ ಸಲಹೆ ನೀಡಿದರು.

Advertisement

ಕೋವಿಡ್  ಮುಂಜಾಗ್ರತೆ ಕುರಿತಂತೆ ನಗರದಲ್ಲಿ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಇದ್ದರಷ್ಟೇ ಆಗದು. ವೆಂಟಿಲೇಟರ್‌ ಬಳಿಕೆ ಬಗ್ಗೆ, ವೈದ್ಯರು ಮತ್ತು ಸಿಬ್ಬಂದಿಗೆ ತುರ್ತು ಪರಿಸ್ಥಿತಿಯಲ್ಲಿ ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವುದರ ಬಗ್ಗೆ ತರಬೇತಿ ನೀಡಬೇಕು. ಕನಿಷ್ಠ 20000 ಪಿಪಿಇ ಕಿಟ್‌ಗಳು, ಅವಶ್ಯಕ ವೆಂಟಿಲೇಟರ್‌ಗಳು ಮತ್ತು ಆರೋಗ್ಯ ಸಿಬ್ಬಂದಿಗೆ ಎರಡು ಲಕ್ಷ ತ್ರಿಬಲ್‌ ಲೇಯರ್‌ ಮಾಸ್ಕ್ಗಳನ್ನು ಸ್ಟಾಕ್‌ ಮಾಡಿಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಜಿಲ್ಲೆಯಲ್ಲಿನ ಕಡುಬಡವರಿಗೆ ಸಾಕಾಗುವಷ್ಟು ಆಹಾರ ಧಾನ್ಯ ನೀಡಿ ಅವರು ಹೊರಹೋಗದಂತೆ ನೋಡಿಕೊಳ್ಳಿ. ನಿರಾಶ್ರಿತರು, ಭಿಕ್ಷುಕರನ್ನು ಗುರುತಿಸಿ ಊಟ ಕೊಡಿ. ಜನ್‌ಧನ್‌ ಯೋಜನೆಯಡಿ 500 ರೂ. ಗಳನ್ನು ಎಲ್ಲರ ಖಾತೆಗೂ ಹಾಕುವಂತಾಗಬೇಕು. ಗ್ಯಾಸ್‌ ಸಿಲಿಂಡರ್‌ ಎಲ್ಲರಿಗೂ ಸರಿಯಾದ ಅವಧಿಗೆ ತಲುಪಬೇಕು. ಹಿರಿಯ ನಾಗರಿಕರಿಗೆ 1000 ರೂ. ಮಾಸಾಶನ ತುರ್ತಾಗಿ ಹಾಕಬೇಕು. ಕಲ್ಲಂಗಡಿ, ದ್ರಾಕ್ಷಿ ಮತ್ತು ತೊಗರಿ ಖರೀದಿ ಮಾಡಿ ರೈತರಿಗೆ ಹಣ ಕೊಡಬೇಕು ಎಂದು ಶಾಸಕರು ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.

ಕಾರ್ಡ್‌ ಇರದವರಿಗೂ ಪಡಿತರ: ಜಿಲ್ಲೆಯಲ್ಲಿ ತೊಂದರೆಗೊಳಗಾದ ಬಡ, ಕಾರ್ಮಿಕರಿಗೆ ಪ್ರಾಮಾಣಿಕವಾಗಿ ಆಹಾರ ಧಾನ್ಯ ತಲುಪಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ ಹೇಳಿದರು. ಸ್ಲಂನಲ್ಲಿರುವ ಬಡವರು ಮತ್ತು ಲಾಕ್‌ಡೌನ್‌ ಕಾರಣ ಕೆಲಸ ಕಳೆದುಕೊಂಡು ಜಿಲ್ಲೆಗೆ ಬಂದು ತಾಂಡಾ ಮತ್ತು ಮತ್ತಿತರ ಕಡೆ ನೆಲೆಯೂರಿದವರಿಗೆ ಕಾರ್ಡ್‌ ಕೇಳದೇ ಅಂತವರಿಗೆ ರೇಷನ್‌ ವಿತರಿಸಿ ಎಂದು ಶಾಸಕ ನಾರಾಯಣ ರಾವ್‌ ಧ್ವನಿಗೂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next