Advertisement
ನಗರದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ತೋಟಗಾರಿಕೆ ಇಲಾಖೆಯ “ಜೇನು ಮೇಳ’ ಜೇನು ಪ್ರದರ್ಶನ-ಮಾರಾಟ ಮೇಳ ಹಾಗೂ ಜೇನು ಕೃಷಿ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜೇನು ನಿಸರ್ಗದತ್ತವಾಗಿ ಸಿಗುವಂಥದ್ದು. ಇದನ್ನು ವೃದ್ಧಿ ಮಾಡಿ ಲಾಭ ಮಾಡಿಕೊಳ್ಳುವುದು ಮನುಷ್ಯರ ಕೆಲಸ ಎಂದು ಸಲಹೆ ನೀಡಿದರು.
Related Articles
Advertisement
ತೋಟಗಾರಿಕೆ ಇಲಾಖೆಯಿಂದಲೂ ಜೇನು ಸಾಕಾಣಿಕೆದಾರರಿಗೆ ನೆರವು ನೀಡಲಾಗುತ್ತಿದೆ. ರೈತರು ಯಾವುದೇ ಹಿಂಜರಿಕೆ ಇಲ್ಲದೇ ಇಲಾಖೆ ಸೌಲಭ್ಯ ಪಡೆದು ಜೇನು ಸಾಕಾಣಿಕೆ ಆರಂಭಿಸಬೇಕು ಎಂದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ|ಸುನೀಲಕುಮಾರ.ಎನ್.ಎಂ ಮಾತನಾಡಿ, ಜೇನಿನ ಪ್ರಬೇಧಗಳು, ಜೇನು ಸಾಕಾಣಿಕೆ ವಿಧಾನಗಳು ಹಾಗೂ ಜೇನಿನ ಲಾಭದ ಕುರಿತು ವಿವರಣೆ ನೀಡಿದರು. ಮೊದಲಿಗೆ ಎರಡು ಪೆಟ್ಟಿಗೆಗಳಿಂದ ಜೇನು ಸಾಕಾಣಿಕೆ ಆರಂಭಿಸುವುದು ಸೂಕ್ತ. ಅನುಭವದ ಆಧಾರದ ಮೇಲೆ ಪೆಟ್ಟಿಗೆ ವಿಸ್ತರಿಸಿಕೊಳ್ಳಬಹುದು ಎಂದು ತಿಳಿಸಿದರು. ಬೆಂಗಳೂರಿನ ಜೇನು ಪೆಟ್ಟಿಗೆ ತಯಾರಕರು ಮತ್ತು ವಿತರಕರಾದ ಇಂದುಶೇಖರ್ ಹಾಗೂ ಜಿಲ್ಲೆಯ ವಿವಿಧ ರೈತರು ಜೇನು ಸಾಕಾಣಿಕೆ ಕುರಿತು ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ಜೇನು ಕೃಷಿಕ ಡಾ| ಮಲ್ಲಿಕಾರ್ಜುನ ಎಮ್ಮೆ, ತೋಟಗಾರಿಕೆ ಇಲಾಖೆಯ ವಿಷಯ ತಜ್ಞ ವಿಜಯಕುಮಾರ ರೇವಣ್ಣನವರ್ ಸೇರಿದಂತೆ ರೈತರು ಉಪಸ್ಥಿತರಿದ್ದರು. ಹಿರಿಯ ಸಹಾಯಕ ನಿರ್ದೇಶಕ ಶಿವಪುತ್ರ ಶಂಭು ನಿರೂಪಿಸಿದರು. ಜೇನು ಮೇಳದ ಪ್ರಯುಕ್ತ ತೋಟಗಾರಿಕೆ ಕಚೇರಿ ಆವರಣದಲ್ಲಿ ಜೇನು ಪ್ರದರ್ಶನ ಮತ್ತು ಮಾರಾಟ ನಡೆಯಿತು.