ಬೀದರ: ಹೈದರಾಬಾದ್‌ನಲ್ಲಿ ನಡೆದ ಪಶು ವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಜಿಲ್ಲಾ ರೆಡ್ಡಿ ಸಮಾಜದಿಂದ ನಗರದಲ್ಲಿ ರವಿವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಕ್ಯಾಂಡಲ್ ಮಾರ್ಚ್ ರ್ಯಾಲಿ ನಡೆಸಿ, ಇಂತಹ ಘಟನೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಹೀನ ಕೃತ್ಯ ಎಸಗಿರುವ ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.
ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸಮಾಜದಲ್ಲಿ ಇಂಥ ಘಟನೆಗಳು ಮರಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ತ್ವರಿತವಾಗಿ ವಿಲೇವಾರಿ ಮಾಡಿ ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿ ಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ರೆಡ್ಡಿ ಸಮಾಜದ ಯುವ ಘಟಕದ ಅಧ್ಯಕ್ಷ ರವಿರೆಡ್ಡಿ ಮೂರುರ್ ನೇತೃತ್ವದಲ್ಲಿ ರ್ಯಾಲಿ ನಡೆಯಿತು. ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಸಂಗ್ರಾಮರೆಡ್ಡಿ, ಕಾರ್ಯದರ್ಶಿ ಗೋಪಾಲ ರೆಡ್ಡಿ, ಪ್ರಮುಖರಾದ ವೆಂಕಟರೆಡ್ಡಿ, ಓಂರೆಡ್ಡಿ, ವೈಜನಾಥ ರೆಡ್ಡಿ ಬೆಳಕೇರಿ, ವಿಜಯರೆಡ್ಡಿ, ಶ್ರೀನಿವಾಸರೆಡ್ಡಿ, ಅಶೋಕ ರೆಡ್ಡಿ, ಗುರುನಾಥರೆಡ್ಡಿ ಚಿಂತಕಿ, ವಿಜಯಕುಮಾರರೆಡ್ಡಿ, ಬಸವರಾಜ
ಕುಡಂಬಲ, ಸಂಜುರೆಡ್ಡಿ, ಧನರಾಜರೆಡ್ಡಿ ಇತರರಿದ್ದರು.