Advertisement

ಪಿಯು ಫಲಿತಾಂಶದಲ್ಲಿ ಅಲ್ಪ ಏರಿಕೆ

10:13 AM Apr 26, 2019 | Naveen |

ಬೀದರ: ಜಿಲ್ಲೆಯ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶದಲ್ಲಿ ಶೇ.3.03ರಷ್ಟು ಹೆಚ್ಚಳವಾಗಿದ್ದೂ ಕೂಡ ಶೈಕ್ಷಣಿಕ ಸುಧಾರಣೆ ಆಗುತ್ತಿಲ್ಲ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಉತ್ತಮ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ ಅನೇಕ ಪಾಲಕರು ತಮ್ಮ ಮಕ್ಕಳಿಗೆ ಬೇರೆ ಜಿಲ್ಲೆಗಳಲ್ಲಿ ಶಿಕ್ಷಣ ಕೊಡಿಸಲು ಮುಂದಾಗುತ್ತಿದ್ದಾರೆ.

Advertisement

ಪ್ರಸಕ್ತ ಸಾಲಿನಲ್ಲಿ ಜಿಲ್ಲೆ ಶೇ.55.78ರಷ್ಟು ಫಲಿತಾಂಶ ಪಡೆದುಕೊಂಡು 30ನೇ ಸ್ಥಾನ ಪಡೆದಿದೆ. 2014ರ ಪರೀಕ್ಷೆಯಲ್ಲಿ ಶೇ.52.75, 2015ರಲ್ಲಿ ಶೇ.54.4, 2016ರಲ್ಲಿ ಶೇ.52.07, 2017ರಲ್ಲಿ ಶೇ. 42.05, 2018ರಲ್ಲಿ ಶೇ.52.63 ಫಲಿತಾಂಶ ಪಡೆದುಕೊಂಡಿತ್ತು. ಪ್ರತಿ ವರ್ಷ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ ವಿಭಿನ್ನ ಪ್ರಯತ್ನಗಳನ್ನು ಮಾಡಿದರೂ ಕೂಡ ಶೇ.60ಕ್ಕೂ ಅಧಿಕ ಫಲಿತಾಂಶ ಪಡೆಯುವಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ವಿಫಲವಾಗುತ್ತಿದೆ. ಆದರೆ, ಅಧಿಕಾರಿಗಳ ಪ್ರಕಾರ ಕಳೆದ ಸಾಲಿನ ಫಲಿತಾಂಶಕ್ಕೆ ಹೋಲಿಸಿದರೆ ಉತ್ತಮ ಸಾಧನೆ ಆಗಿದೆ. ಇದೇ ರೀತಿ ಮುಂದಿನ ಸಾಲಿನಲ್ಲಿ ಕೂಡ ಫಲಿತಾಂಶ ಪ್ರಮಾಣ ಹೆಚ್ಚಿಸುವುದಾಗಿ ಡಿಡಿಪಿಯು ಮಲ್ಲಿಕಾರ್ಜು ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿನ ಒಟ್ಟಾರೆ 14,713 ವಿದ್ಯಾರ್ಥಿಗಳು ಪಿಯು ಪರೀಕ್ಷೆ ಬರೆದಿದ್ದು, ಈ ಪೈಕಿ 8,207 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕಲಾ ವಿಭಾಗದ ಒಟ್ಟು 4,604 ವಿದ್ಯಾರ್ಥಿಗಳ ಪೈಕಿ 2,124 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದ ಒಟ್ಟು 2,608 ವಿದ್ಯಾರ್ಥಿಗಳ ಪೈಕಿ 1,319 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ವಿಜ್ಞಾನ ವಿಭಾಗ ಒಟ್ಟಾರೆ 7,501 ವಿದ್ಯಾರ್ಥಿಗಳ ಪೈಕಿ 4,704 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ನಗರ ಪ್ರದೇಶದ ಒಟ್ಟಾರೆ 11,788 ವಿದ್ಯಾರ್ಥಿಗಳ ಪೈಕಿ 6,357 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಗ್ರಾಮೀಣ ಭಾಗದ 2,925 ವಿದ್ಯಾರ್ಥಿಗಳ ಪೈಕಿ 1,850 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಜಿಲ್ಲೆಯಲ್ಲಿನ ಒಟ್ಟು 24 ಸರ್ಕಾರಿ ಕಾಲೇಜುಗಳ ಪೈಕಿ 11 ಸರ್ಕಾರಿ ಕಾಲೇಜುಗಳಿಗೆ ಶೇ.50ಕ್ಕೂ ಕಡಿಮೆ ಫಲಿತಾಂಶ ಬಂದಿದೆ. ಈ ಈ ಪೈಕಿ ಕೂಡ ನಾಲ್ಕು ಕಾಲೇಜುಗಳು ಶೇ.20ರಿಂದ 30ರಷ್ಟು ಫಲಿತಾಂಶ ಪಡೆದಿವೆ. ಅನುದಾನಿತ ಒಟ್ಟು 41 ಕಾಲೇಜುಗಳ ಪೈಕಿ 12 ಕಾಲೇಜು ಶೇ.50ಕ್ಕೂ ಅಧಿಕ ಫಲಿತಾಂಶ ಪಡೆದರೆ, 28 ಕಾಲೇಜುಗಳಿಗೆ ಶೇ.50ಕ್ಕೂ ಕಡಿಮೆ ಫಲಿತಾಂಶ ಬಂದಿದೆ. ಈ ಪೈಕಿ 10 ಕಾಲೇಜುಗಳು ಶೇ.3ರಿಂದ 30ರ ವರೆಗೆ ಫಲಿತಾಂಶ ಪಡೆದಿವೆ. ಅನುದಾನ ರಹಿತ 12 ಕಾಲೇಜು ಶೇ.8ರಿಂದ ಶೇ.30 ಫಲಿತಾಂಶ, 20 ಕಾಲೇಜುಗಳು ಶೇ.30ರಿಂದ 50ರಷ್ಟು ಫಲಿತಾಂಶ ಪಡೆದಿವೆ. 32 ಕಾಲೇಜುಗಳು ಶೇ.50ಕ್ಕೂ ಅಧಿಕ ಫಲಿತಾಂಶ ಪಡೆದಿವೆ.

ಸರ್ಕಾರಿ ಕಾಲೇಜುಗಳ ಫಲಿತಾಂಶ: ಬಸವಕಲ್ಯಾಣ ತಾಲೂಕಿನ ಮಂಠಾಳ ಸರ್ಕಾರಿ ಕಾಲೇಜು ಶೇ.84.21 ಫಲಿತಾಂಶ ಪಡೆದು ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹುಮನಾಬಾದ ತಾಲೂಕಿನ ಬೇಮಳಖೇಡ ಸರ್ಕಾರಿ ಕಾಲೇಜು ಶೇ.82.61 ಫಲಿತಾಂಶ ಪಡೆದು ದ್ವಿತಿಯ ಸ್ಥಾನ ಪಡೆದಿದ್ದು, ಹಳ್ಳಿಖೇಡ(ಕೆ) ಸರ್ಕಾರಿ ಕಾಲೇಜು ಶೇ. 81.82 ಫಲಿತಾಂಶ ಪಡೆದು ಮೂರನೇ ಸ್ಥಾನದಲ್ಲಿದೆ.

Advertisement

ತಾಳಮಡಗಿ ಸರ್ಕಾರಿ ಕಾಲೇಜು ಶೇ.81.82, ನಿರ್ಣಾ ಸರ್ಕಾರಿ ಕಾಲೇಜು ಶೇ. 73.81, ಔರಾದ ತಾಲೂಕಿನ ಠಾಣಾಕುಸುನೂರ್‌ ಶೇ.70.59, ಬೀದರ ತಾಲೂಕಿನ ಮಂದಕನಳ್ಳಿ ಕಾಲೇಜು ಶೇ.70.27, ಭಾಲ್ಕಿ ತಾಲೂಕಿ ಹಲರ್ಬಗಾ ಕಾಲೇಜು ಶೇ.70, ಮುಡಬಿ ಸರ್ಕಾರಿ ಕಾಲೇಜು ಶೇ.68.75, ಮನ್ನಳ್ಳಿ ಸರ್ಕಾರಿ ಕಾಲೇಜು 60.76, ಚಿಟಗುಪ್ಪ ಬಾಲಕಿಯರ ಸರ್ಕಾರಿ ಕಾಲೇಜು ಶೇ.58.24, ಮೇಹಕರ್‌ ಸರ್ಕಾರಿ ಕಾಲೇಜು ಶೇ.57.14, ಹಾಲಹಳ್ಳಿ(ಕೆ) ಶೇ.52.38 ಹಾಗೂ ದುಬಲಗುಂಡಿ ಸರ್ಕಾರಿ ಕಾಲೇಜು ಶೇ.50 ಫಲಿತಾಂಶ ಪಡೆದುಕೊಂಡಿವೆ.

ಶೇ.50ಕ್ಕೂ ಕಡಿಮೆ: ಬಸವಕಲ್ಯಾಣ ಸರ್ಕಾರಿ ನೀಲಾಂಬಿಕಾ ಕಾಲೇಜು ಶೇ.42.47, ಕಮಠಾಣ ಸರ್ಕಾರಿ ಕಾಲೇಜು ಶೇ.41.94, ಬಸವಕಲ್ಯಾಣ ಸರ್ಕಾರಿ ಬಾಲಕರ ಕಾಲೇಜು ಶೇ. 33.33, ಬೀದರ ಸರ್ಕಾರಿ ಬಾಲಕಿಯರ ಕಾಲೇಜು ಶೇ. 33.20, ಬೀದರ್‌ ಸರ್ಕಾರಿ ಬಾಲಕರ ಕಾಲೇಜು ಶೇ.33.33, ಔರಾದ ಸರ್ಕಾರಿ ಕಾಲೇಜು ಶೇ.32.43, ಹುಮನಾಬಾದ ಸರ್ಕಾರಿ ಬಾಲಕರ ಕಾಲೇಜು ಶೇ.29.01, ಹುಮನಾಬಾದ ಬಾಲಕಿಯರ ಕಾಲೇಜು ಶೇ.27.08, ಭಾಲ್ಕಿ ಸರ್ಕಾರಿ ಕಾಲೇಜು ಶೇ.26.13, ಚಿಟಗುಪ್ಪ ಸರ್ಕಾರಿ ಕಾಲೇಜು ಶೇ.21.43 ಫಲಿತಾಂಶ ಪಡೆದುಕೊಂಡಿದ್ದಾರೆ.

ಅನುದಾನಿತ ಕಾಲೇಜುಗಳ ಫಲಿತಾಂಶ: ಹುಮನಾಬಾದ ರಾಮ ಮತ್ತು ರಾಜ ಕಾಲೇಜು ಶೇ.85.02 ಫಲಿತಾಂಶ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಬಿದರ್‌ ಸಿದ್ದಾರ್ಥ ಕಾಲೇಜು ಶೇ.79.74 ಫಲಿತಾಂಶ ಹೊಂದಿ ದ್ವಿತಿಯ ಸ್ಥಾನ ಪಡೆದಿದೆ. ಬಸವಕಲ್ಯಾಣ ಡಾ|ಅಂಬೇಡ್ಕರ್‌ ಕಾಲೇಜು ಶೇ.79.63 ಫಲಿತಾಂಶ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದೆ.

ಔರಾದ ತಾಲೂಕಿನ ಕೌಠ ಗ್ರಾಮದ ಹರಳಯ್ಯ ಕಾಲೇಜು ಶೇ.74.36, ಬೀದರ್‌ ಕರ್ನಾಟಕ ಕಾಲೇಜು ಶೇ.73.18, ಹಳ್ಳಿಖೇಡ(ಬಿ) ಡಾ| ಅಂಬೇಡ್ಕರ್‌ ಕಾಲೇಜು ಶೇ.70.18, ಬೀದರ ಜಿ.ಗೌರಶೆಟ್ಟಿ ಕಾಲೇಜು ಶೇ.67.61, ಭಾಲ್ಕಿ ಅಕ್ಕಮಹಾದೇವಿ ಕಾಲೇಜು ಶೇ.65.22, ಬೀದರ ಪನಾಲಾಲ್ ಹೀರಾಲಾಲ ಕಾಲೇಜು ಶೇ.64, ಔರಾದ ಅಮರೇಶ್ವರ ಕಾಲೇಜು ಶೇ.53.98 ಫಲಿತಾಂಶ ಪಡೆದಿವೆ.

ಶೇ.50ಕ್ಕೂ ಕಡಿಮೆ: ಕಮಲನಗರ ಶಾಂತಿವರ್ಧಕ ಕಾಲೇಜು ಶೇ.49.49, ನಳಂದಾ ಕಾಲೇಜು ಶೇ.48.15, ಭಾಲ್ಕಿ ಸಿ.ಬಿ. ಕಾಲೇಜು ಶೇ.47.13, ಭಾಲ್ಕಿ ಶಿವಾಜಿ ಕಾಲೇಜು ಶೇ.45.77, ರಾಜೇಶ್ವರ ಸತ್ಯಶ್ರಯ್ಯ ಕಾಲೇಜು ಶೇ.43.33, ಭಾಲ್ಕಿ ಎಂಆರ್‌ಎ ಕಾಲೇಜು ಶೇ.42.86, ಬೀದರ ಅಕ್ಕಮಹಾದೇವಿ ಕಾಲೇಜು ಶೇ.40, ಎಸ್‌.ಎಲ್. ಮಕಠಾಣೆ ಕಾಲೇಜು ಶೇ.38.45, ಕುಂಬರವಾಡಾ ಕೆಎಲ್ಇ ಕಾಲೇಜು ಶೇ.38.30, ಬಸವಕಲ್ಯಾಣ ವಿವೇಕಾನಂದ ಕಾಲೇಜು ಶೇ.37.93, ಬೀದರ ಅಲ್-ಅಮೀನ್‌ ಕಾಲೇಜು ಶೇ.36.63, ಚಿಟಗುಪ್ಪ ಸಿಇಎಸ್‌ ಕಾಲೇಜು ಶೇ.36.36, ಭಾಲ್ಕಿ ಶಾಂತಿನಿಕೇತನ ಕಾಲೇಜು ಶೇ.35.48, ಮನ್ನಾಎಖೆಳ್ಳಿ ಸಿಇಎಸ್‌ ಕಾಲೇಜು ಶೇ.33.91, ಚಿಟಗುಪ್ಪ ಎಸ್‌.ಎಸ್‌. ಗೌರಿಬಾಯಿ ಕಾಲೇಜು ಶೇ.33.33, ಬೀದರ್‌ ಆರ್‌ಆರ್‌ಕೆ ಶೇ.30.71, ಕಮಲನಗರ ಪ್ರಿಯದರ್ಶಿನಿ ಕಾಲೇಜು ಶೇ.30.56, ಹುಲಸೂರ ಎಸ್‌ಪಿಕೆ ಕಾಲೇಜು ಶೇ.30, ಬೀದರ ಎಂಆರ್‌ಎ ಕಾಲೇಜು ಶೇ.27.78, ನಿಟ್ಟೂರ್‌ ಕಾಲೇಜು ಶೇ.27.59, ಹುಮನಾಬಾದ ಎಸ್‌ವಿಇಟಿ ಕಾಲೇಜು ಶೇ.27.27, ಚಿಟಗುಪ್ಪ ಜೆಪಿಎಸ್‌ ಕಾಲೇಜು ಶೇ.21.74, ಲಾಡಗೇರಿ ಡಾ| ಅಂಬೇಡ್ಕರ್‌ ಕಾಲೇಜು ಶೇ.20, ಬೀದರ ಎನ್‌.ಎಫ್‌. ಕಾಲೇಜು ಶೇ.19.05.

ಅನುದಾನ ರಹಿತ ಕಾಲೇಜು: ಸಂತಪೂರ‌ ಸಿದ್ರಾಮೇಶ್ವರ ಕಾಲೇಜು ಜಿಲ್ಲೆಯಲ್ಲಿ ಶೇ.100 ಫಲಿತಾಂಶ ಪಡೆದು ಪ್ರಥಮ ಸ್ಥಾನ ಗಳಿಸಿದೆ. ಬೀದರ ಸಪ್ತಗಿರಿ ಕಾಲೇಜು ಶೇ.96.92 ಫಲಿತಾಂಶ ಪಡೆದು ದ್ವೀತಿಯ ಸ್ಥಾನ ಪಡೆದಿದ್ದು, ಕಡ್ಯಾಳ ಡಾ| ಸಿ.ಬಿ. ಗುರುಕುಲ ಕಾಲೇಜು ಶೇ.95.81ರಷ್ಟು ಫಲಿತಾಂಶ ಪಡೆದು ಮೂರನೇ ಸ್ಥಾನ ಪಡೆದುಕೊಂಡಿದೆ.

ಭಾಲ್ಕಿ ಡೈಮಂಡ್‌ ಕಾಲೇಜು ಶೇ.95.50, ಬ್ಯಾಲಹಳ್ಳಿ ಬಸವತಿರ್ಥ ಕಾಲೇಜು ಶೇ.95.45, ಬೀದರ ಮಾತೆ ಮಾಣಿಕೇಶ್ವರಿ ಶೇ.94.25, ಹಳ್ಳಿಖೇಡ(ಬಿ) ಬಸವತೀರ್ಥ ವಿದ್ಯಾಪೀಠ ಕಾಲೇಜು ಶೇ.93.45, ಬಸವಕಲ್ಯಾಣ ಸಂಕಲ್ಪ ಕಾಲೇಜು ಶೇ.90.20, ಸಂತಪೂರ ಜೈ ಭವಾನಿ ಕಾಲೇಜು ಶೇ. 87.50, ಮುಚಳಾಂಬ ನಾಗಭೋಷಣ ಕಾಲೇಜು ಶೇ.86.84, ಬೀದರ ಶಾಹೀನ್‌ ಕಾಲೇಜು ಶೇ.86.21, ಶಾಹು ಮಹಾರಾಜ ಕಾಲೇಜು ಶೇ.85.84, ಬಸವಕಲ್ಯಾಣ ಡೈಮಂಡ್‌ ಕಾಲೇಜು ಶೇ.84.76, ಶ್ರೀ ಸಿದ್ದಿವಿನಾಯಕ ಕಾಲೇಜು ಶೇ.80, ಇಕ್ರಾ ಕಾಲೇಜು ಶೇ.80, ಕ್ರೆಸೆಂಟ್ ಕಾಲೇಜು ಶೇ.80 ಸೇರಿದಂತೆ ಇತರೆ ಕಾಲೇಜುಗಳು ಉತ್ತಮ ಫಲಿತಾಂಶ ಪಡೆದುಕೊಂಡಿವೆ.

ಪ್ರಥಮ ಸ್ಥಾನ
ಜಿಲ್ಲೆಯ ಸರ್ಕಾರಿ ಕಾಲೇಜುಗಳ ಪೈಕಿ ಬಸವಕಲ್ಯಾಣ ತಾಲೂಕಿನ ಮಂಠಾಳ ಸರ್ಕಾರಿ ಕಾಲೇಜು ಪ್ರಥಮ, ಅನುದಾನಿತ ಕಾಲೇಜುಗಳ ಪೈಕಿ ಹುಮನಾಬಾದ ರಾಮ ಮತ್ತು ರಾಜ್‌ ಕಾಲೇಜು ಪ್ರಥಮ, ಅನುದಾನ ರಹಿತ ಕಾಲೇಜುಗಳ ಪೈಕಿ ಸಂತಪೂರ‌ ಸಿದ್ರಾಮೇಶ್ವರ ಕಾಲೇಜು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿವೆ.

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next