Advertisement

Bidar; ಯುವಕನಿಂದ ಅಪ್ರಾಪ್ತ ವಯಸ್ಕಳ ರೇಪ್

11:47 PM Apr 20, 2024 | Team Udayavani |

ಬೀದರ್ :ರಾಜ್ಯದಲ್ಲಿ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ಭಾರಿ‌ ಸದ್ದು ಮಾಡುತ್ತಿರುವ ಬೆನ್ನಲ್ಲೆ ಜಿಲ್ಲೆಯಲ್ಲಿಯೂ ಅನ್ಯ ಕೋಮಿನ ಯುವಕನೊಬ್ಬ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಪ್ರೇಮದಾಟದಲ್ಲಿ ಪುಸಲಾಯಿಸಿ ಅತ್ಯಾಚಾರ ಮಾಡಿದ ಪ್ರಕರಣ ವರದಿಯಾಗಿದೆ.

Advertisement

ಜಿಲ್ಲೆಯ ಹಳ್ಳಿಖೇಡ್ (ಬಿ) ಗ್ರಾಮದ ಲೈಕ್ ಮೈನೊದ್ದಿನ್ ಅಲಿ(20) ಎಂಬಾತ ಅನ್ಯ ಧರ್ಮದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಸಂಬಂಧ ಬೆಳೆಸಿ‌ದ ಆರೋಪ ಇದ್ದು, ಇದೀಗ‌ ಪ್ರಕರಣ ಠಾಣೆ ಮೆಟ್ಟಲೇರಿದ್ದು, ಯುವಕನನ್ನು‌ ಪೊಲೀಸರು‌ ವಶಕ್ಕೆ ಪಡೆದಿದ್ದಾರೆ.

ಲೈಕ್ ಅಲಿ ತನ್ನ ಅಕ್ಕನ ಊರಿನ ಮನೆಯ ಎದುರಿನ ಹುಡುಗಿ ಜತೆಗೆ ಲವ್ ಮಾಡಿದ್ದಾನೆ. ಶನಿವಾರ ಅಪ್ರಾಪ್ತ ಹುಡುಗಿಯನ್ನು ನಗರದ ತನ್ನ ಬಾಡಿಗೆಯ ರೂಂಗೆ ಕರೆದುಕೊಂಡು ಹೋಗುವ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನನ್ನ ಮಗಳಿಗೆ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಅಪ್ರಾಪ್ತ ಬಾಲಕಿ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಮಹಿಳಾ ಠಾಣೆಯಲ್ಲಿ ಪೋಕ್ಸೋ ಸೇರಿ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next