ಬೀದರ: ಗಡಿ ಜಿಲ್ಲೆ ಬೀದರನಲ್ಲಿ ತುರ್ತು ಚಿಕಿತ್ಸೆಗಾಗಿ ನೆರವಾಗುವ ಆಂಬ್ಯುಲೆನ್ಸ್‌ಗಳು ವೆಂಟಿಲೇಟರ್ (ಕೃತಕ ಉಸಿರಾಟ)ಗಳ ವ್ಯವಸ್ಥೆ ಇಲ್ಲದೇ ಅಪಾಯಕಾರಿ ಸ್ಥಿತಿಯಲ್ಲಿವೆ. ಹಾಗಾಗಿ ರೋಗಿಗಳ ಜೀವಕ್ಕೆ ಕವಚ ಆಗಬೇಕಾದ ಅಂಬ್ಯುಲೆನ್ಸ್‌ಗಳೇ ಒಮ್ಮೊಮ್ಮೆ ಪ್ರಾಣಕ್ಕೆ ಕಂಟಕ ಆಗುತ್ತಿವೆ.
Advertisement
ಇದು ಆಶ್ಚರ್ಯ ಎನಿಸಿದರೂ ಸತ್ಯ. ಜಿಲ್ಲೆಯಲ್ಲಿ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಅಂಬ್ಯುಲೆನ್ಸ್ ಗಳಲ್ಲಿ ಸಾಕಷ್ಟು ದೋಷಗಳು ಮಾತ್ರವಲ್ಲ ಕೃತಕ ಉಸಿರಾಟದ ವ್ಯವಸ್ಥೆ ಸಹ ಇಲ್ಲ. ಹಾಗಾಗಿ ರೋಗಿಗಳು ಆಸ್ಪತ್ರೆಗೆ ದಾಖಲು ಆಗುವವರೆಗೆ ಆಂಬ್ಯುಲೆನ್ಸ್‌ನಲ್ಲಿ ತಮ್ಮ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿದೆ. ಆಂಬ್ಯುಲೆನ್ಸ್‌ಗಳ ನಿರ್ವಹಣೆಗಾಗಿ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದರೂ ಸಹ ಆಂಬ್ಯುಲೆನ್ಸ್ ಗಳ ಪರಿಸ್ಥಿತಿ ಮಾತ್ರ ಬದಲಾಯಿಸಿಲ್ಲ. ಈಗಲೂ ಓಬಿರಾಯನ ಕಾಲದ ವಾಹನಗಳ ಮೇಲೆ ಅವಲಂಬಿಸಿ ರೋಗಿಗಳಲ್ಲಿ ಆತಂಕ ಹೆಚ್ಚಿಸಿದೆ.
Related Articles
Advertisement
ಎಲ್ಲೆಲ್ಲಿವೆ ಅಂಬುಲೆನ್ಸ್‌ಗಳು ಆರೋಗ್ಯ ಇಲಾಖೆಯಿಂದ ಬೀದರ ಜಿಲ್ಲೆಯಲ್ಲಿ ಒಟ್ಟು 41 ಅಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ ಹುಮನಾಬಾದ ತಾಲೂಕು 13, ಔರಾದ 11, ಭಾಲ್ಕಿ 8, ಬಸವಕಲ್ಯಾಣ 5 ಮತ್ತು ಬೀದರ 4 ವಾಹನಗಳು ಸೇರಿವೆ. ಇನ್ನೂ ಆರೋಗ್ಯ ಕವಚ ಆಂಬ್ಯುಲೆನ್ಸ್‌ಗಳು ಬೀದರ ತಾಲೂಕಿನಲ್ಲಿ 4 ಸೇರಿದಂತೆ ಜಿಲ್ಲೆಯಲ್ಲಿ 19 ವಾಹನಗಳು ಇವೆ.
ಆಧುನಿಕ ಅಂಬ್ಯುಲೆನ್ಸ್‌ಗಳಿಗೆ ಪ್ರಸ್ತಾವನೆ ಬೀದರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಂಬ್ಯುಲೆನ್ಸ್‌ಗಳು ಹಳೆ ಕಾಲದ್ದಾಗಿದ್ದು, ವೆಂಟಿಲೇಟರ್ ವ್ಯವಸ್ಥೆ ಅಳವಡಿಸಲಾಗಿಲ್ಲ. ಬ್ರಿಮ್ಸ್ ಆಸ್ಪತ್ರೆ ವಾಹನದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಇದೆ. ಜಿಲ್ಲೆಯ ಪ್ರತಿ ತಾಲೂಕಿಗೊಂದು ಅತ್ಯಾಧುನಿಕ ಆಂಬ್ಯುಲೆನ್ಸ್‌ಗಳನ್ನು ಖರೀದಿಸಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಮಂಜೂರಾಗಲಿದೆ.ಡಾ| ವಿ.ಜಿ ರೆಡ್ಡಿ,
ಡಿಎಚ್‌ಒ, ಬೀದರ