Advertisement

ಮತದಾನ ಶೇ. 2.65 ಜಿಗಿತ

04:04 PM Apr 25, 2019 | Team Udayavani |

ಬೀದರ: ಬೀದರ ಲೋಕಸಭೆ ಕ್ಷೇತ್ರದಲ್ಲಿ ಕಳೆದ ಚುನಾವಣೆಗೆ ಹೋಲಿಸಿದರೆ 1,72,949 ಮತದಾರರ ಸಂಖ್ಯೆ ಹೆಚ್ಚಿದರೂ ಕೂಡ ನಿಗದಿತ ಪ್ರಮಾಣದಲ್ಲಿ ಮತದಾನ ನಡೆದಿಲ್ಲ. ಅಲ್ಲದೆ, ಹೆಚ್ಚಿನ ಮತದಾನ ಆಗಬೇಕು ಎಂಬ ನಿಟ್ಟಿನಲ್ಲಿ ಸ್ವೀಪ್‌ ಸಮಿತಿ ಜಿಲ್ಲೆಯಾದಂತ ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ನಡೆಸಿದರೂ ನಿಗದಿತ ಫಲ ನೀಡಿಲ್ಲ.

Advertisement

ಭಾರೀ ಪ್ರಮಾಣದ ಏರಿಕೆ ಇಲ್ಲ: ಕಳೆದ ಲೊಕಸಭೆ ಚುನಾವಣೆಯಲ್ಲಿ ಅಂಚೆ ಮತದಾನ ಬಿಟ್ಟು 9,59,045 ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಅದೇ ರೀತಿ 2019 ಲೋಕಸಭೆ ಚುನಾವಣೆಯಲ್ಲಿ ಒಟ್ಟು, 11,10,035 ಮತದಾರರು ಹಕ್ಕು ಚಲಾಯಿಸಿದ್ದು, ಕಳೆ ಚುನಾವಣೆಗೆ ಹೋಲಿಕೆ ಮಾಡಿದರೆ ಬರೋಬ್ಬರಿ 1,50,990 ಹೆಚ್ಚಿನ ಮತದಾರರು ಮತ ಚಲಾಯಿಸಿದ್ದಾರೆ. ಹಾಗಂತ ಶೇಕಡಾವಾರು ಮತದಾನದಲ್ಲಿ ಭಾರೀ ಪ್ರಮಾಣದ ಏರಿಕೆ ಕಂಡುಬಂದಿಲ್ಲ.

6,63,876 ದೂರ ಉಳಿದ ಮತದಾರರು: ಕಳೆದ ಚುನಾವಣೆಗೆ ಹೋಲಿಸಿದರೆ ಶೇ. 2.65 ಹೆಚ್ಚಿನ ಮತದಾನ ಆಗಿದೆ. ಆದರೂ ಕೂಡ 6,63,876 ಮತದಾರರು ಮತದಾನದಿಂದ ದೂರ ಉಳಿದಿದ್ದಾರೆ.

ಚಿಂತನೆ ಮೂಡಿಸಿದ ಮತದಾನ:ಪುರುಷ 5,75,199, ಮಹಿಳಾ 5,34,825 ಮತ್ತು ಇತರೆ 11 ಜನ ಲೋಕಸಭೆ ಚುನಾವಣೆಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಈ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಿಸಬೇಕಾದರೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡುವುದು ಅತ್ಯಗತ್ಯ ಎಂಬುವುದು ಜನ ಸಾಮಾನ್ಯರಲ್ಲಿ ಮತದಾನ ಮಹತ್ವ ಜನ ಜಾಗೃತಿಯ ವಿವಿಧ ಕಾರ್ಯಕ್ರಮ ನಡೆಸಿದರೂ ಹೆಚ್ಚಿನ ಮತದಾನ ಆಗದಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಯಾವ ಕಾರಣಕ್ಕೆ ಹೆಚ್ಚಿನ ಮತದಾನ ನಡೆದಿಲ್ಲ ಎಂಬುವುದು ತಿಳಿದುಕೊಳ್ಳಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ಕಳೆದ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಿದೆ. ಇನ್ನೂ ಹೆಚ್ಚಿನ ಮತದಾನವಾಗುತ್ತೆ ಎಂಬ ನಿರೀಕ್ಷೆ ಇತ್ತು. ಕಡಿಮೆ ಮತದಾನಕ್ಕೆ ಬೇಸಿಗೆ ಬಿಸಿಲು ಹಾಗೂ ದೂರದ ಉರುಗಳಲ್ಲಿ ಉಳಿದುಕೊಂಡ ಮತದಾರರು ಬಂದು ಮತದಾನ ಮಾಡದಿರುವುದೇ ಕಾರಣವಾಗಿರಬಹುದು. ಸ್ವೀಪ್‌ ತಂಡಗಳಿಂದ ನಡೆಸಿದ ಜನ ಜಾಗೃತಿ ಮೂಲಕ ಈ ಬಾರಿ ವಿಕಲಚೇತನರು ಶೇ.93 ಮತದಾನ ಮಾಡಿದ್ದಾರೆ. ಒಟ್ಟಾರೆ ಶೇ.2ಕ್ಕೂ ಅಧಿಕ ಪ್ರಮಾಣ ಮತದಾನ ಹೆಚ್ಚಾಗಿರುವುದು ಸಂತಸ ತಂದಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಮತದಾನವಾಗಿದೆ.
ಮಹಾಂತೇಶ ಬೀಳಗಿ,
ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರು

Advertisement
Advertisement

Udayavani is now on Telegram. Click here to join our channel and stay updated with the latest news.

Next