Advertisement

ದೇಶದಲ್ಲಿ ಎರಡು ಪ್ರಧಾನಿ ಹುದ್ದೆ ಸೃಷ್ಟಿಗೆ ಬಿಜೆಪಿ ಬಿಡಲ್ಲ

01:25 PM Apr 21, 2019 | Team Udayavani |

ಬೀದರ: ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನ ಮಂತ್ರಿ ಬೇಕು ಎಂದು ಅಲ್ಲಿನ ನ್ಯಾಷನಲ್‌ ಕಾನ್ಫೆರೆನ್ಸ್‌ ಪಕ್ಷದ ಉಮರ್‌ ಅಬ್ದುಲ್‌ ಹೇಳುತ್ತಿದ್ದರೂ ಕೂಡ ರಾಹುಲ್‌ ಗಾಂಧಿ  ಹಾಗೂ ಕುಮಾರಸ್ವಾಮಿ ಯಾಕೆ ಮೌನ ವಹಿಸಿದ್ದಾರೆ ಎಂದು ಬಿಜೆಪಿಯ ಕರ್ನಾಟಕ ಉಸ್ತುವಾರಿ ಮುರುಳಿಧರರಾವ್‌ ಪ್ರಶ್ನಿಸಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಮೌನ ವಹಿಸುವ ಪಕ್ಷಗಳು ದೇಶದಲ್ಲಿ ಇಬ್ಬರು ಪ್ರಧಾನ ಮಂತ್ರಿಗಳು ಬೇಕು ಎನ್ನುತ್ತಿದ್ದಾರೆ ಎಂದರ್ಥ. ಈ ಬಗ್ಗೆ ಯಾರೂ ಸ್ಪಷ್ಟವಾದ ಉತ್ತರ ನೀಡುತ್ತಿಲ್ಲ. ದೇಶದಲ್ಲಿ ಎರಡು
ಪ್ರಧಾನ ಮಂತ್ರಿ ಹುದ್ದೆಗಳನ್ನು ಸೃಷ್ಟಿಸಲು ಬಿಜೆಪಿ ಬಿಡುವುದಿಲ್ಲ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 80 ಸ್ಥಾನ ಗೆದ್ದಿರುವ ಕಾಂಗ್ರೆಸ್‌ ಪಕ್ಷ, 37 ಸ್ಥಾನ ಗೆದ್ದಿರುವ ಜೆಡಿಎಸ್‌ ಪಕ್ಷಕ್ಕೆ ಶರಣಾಗಿದೆ. ಕಾರಣ ಲೋಕಸಭೆ ಚುನಾವಣೆಯಲ್ಲಿ ರಾಹುಲ್‌ ಗಾಂಧಿ  ಅವರನ್ನು ಪ್ರಧಾನಿ ಮಾಡಬೇಕು ಎಂಬ ಉದ್ದೇಶವನ್ನು ಮೈತ್ರಿ ಪಕ್ಷದವರು ಹೊಂದಿದ್ದಾರೆ. ಆದರೆ, ಸದ್ಯ ಮೈತ್ರಿ ಪಕ್ಷದಲ್ಲಿ ಗೊಂದಲ ಉಂಟಾಗಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮೈತ್ರಿ ಸರ್ಕಾರ ಮುರಿದು ಬೀಳುತ್ತದೆ. ಮತ್ತೆ ಬಿಜೆಪಿ ಅ ಧಿಕಾರಕ್ಕೆ ಬರುತ್ತದೆ ಎಂದರು.

ದೇಶಕ್ಕೆ ಮಹಾಘಟಬಂಧನ್‌ ಸರ್ಕಾರ ಬೇಕಾಗಿಲ್ಲ. ಘಟಬಂಧನ್‌ ಸರ್ಕಾರ ನೋಡಬೇಕಾದರೆ ಕರ್ನಾಟಕಲ್ಲಿನ ಸರ್ಕಾರ ನೋಡಬೇಕು. ಎರಡು ಪಕ್ಷಗಳ ಮಧ್ಯದಲ್ಲಿ ಹೊಂದಾಣಿಕೆಯೇ ಇಲ್ಲ. ಇಂಥ ಸರ್ಕಾರ ಕೇಂದ್ರದಲ್ಲಿ ಬೇಕಾಗಿಲ್ಲ. ಈ ಬಾರಿ ಮೋದಿ
ಸುನಾಮಿ ಬರುತ್ತಿದೆ. ದೇಶಕ್ಕೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಸಂಶಯವಿಲ್ಲ. ಘಟಬಂಧನ್‌ನ ಎಲ್ಲಾ ಪಕ್ಷಗಳು ಒಂದು ಕಡೆ
ಆದರೆ, ಬಿಜೆಪಿ ಒಂದು ಕಡೆಯಾಗಿದೆ. ದೇಶದ
ಜನರು ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಿದ್ದಾರೆ.

ಕಳೆದ ಚುನಾವಣೆಯ ಫಲಿತಾಂಶದ ದಾಖಲೆಯನ್ನು ನಾವೇ ಮುರಿದು ಹೆಚ್ಚು ಸ್ಥಾನ ಗೆದ್ದು ಹೊಸ ದಾಖಲೆ ಮಾಡಲಿದ್ದೇವೆ ಎಂದರು.

ಅಭಿವೃದ್ಧಿಗೆ ಒತ್ತು: ಐದು ವರ್ಷಗಳಲ್ಲಿ ಮೋದಿ ಸರ್ಕಾರ ಉತ್ತಮ ಆಡಳಿತ ನೀಡಿದೆ. ದೇಶದಲ್ಲಿ ಅತಿ ಹೆಚ್ಚು ಹೆದ್ದಾರಿಗಳು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಬೀದರ್‌ ಜಿಲ್ಲೆಗೂ ಕೂಡ ಹೆದ್ದಾರಿ, ಹೊಸ ರೈಲುಗಳು ಸೇರಿದಂತೆ ಅನೇಕ ಯೋಜನೆಗಳು
ಅನುಷ್ಠಾನಗೊಂಡಿವೆ. ಈ ಭಾಗದ ಜನರಿಗೆ ಅನುಕೂಲಕರವಾಗಿದೆ. ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ ಹಿರಿಮೆ ನಮ್ಮ ಸರ್ಕಾರಕ್ಕೆ
ಇದೆ ಎಂದರು.

Advertisement

ಕಾಂಗ್ರೆಸ್‌ ಮುಕ್ತ: ನಿರಂತರ ಅಧಿ ಕಾರದಲ್ಲಿ ಇದ್ದ
ಕಾಂಗ್ರೆಸ್‌ ಪಕ್ಷದಿಂದ ಉತ್ತರ ಕರ್ನಾಟಕ ಅಭಿವೃದ್ಧಿ
ಕಂಡಿಲ್ಲ. ಈ ಬಾರಿ ಉತ್ತರ ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತ ಮಾಡಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಕನಿಷ್ಟ 22ಕ್ಕೂ ಅಧಿಕ
ಸ್ಥಾನಗಳು ಬಿಜೆಪಿ ಪಾಲಾಗಲಿವೆ. ಈ ಹಿಂದೆ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅನೇಕ ಯೋಜನೆಗಳನ್ನು ಅನುಷ್ಠಾನ
ಮಾಡಿದ್ದು, ಉತ್ತರ ಕರ್ನಾಟಕ ಅಭಿವೃದ್ಧಿಗೆ ಹೆಚ್ಚು
ಒತ್ತು ನೀಡುವುದಾಗಿ ತಿಳಿಸಿದರು.

ಧರ್ಮ ರಾಜಕಾರಣ: ಚುನಾವಣೆಗಳು ಬಂದಾಗ ಕಾಂಗ್ರೆಸ್‌ ಧರ್ಮ ರಾಜಕೀಯ ಶುರು ಮಾಡುತ್ತದೆ. ಲಿಂಗಾಯತ ಧರ್ಮವನ್ನು ಚರ್ಚೆಗೆ ತರುತ್ತದೆ. ಒಬ್ಬ ಮಂತ್ರಿ ಲಿಂಗಾಯತ ಪ್ರತ್ಯೇಕ ಧರ್ಮದ ಹೇಳಿಕೆ ಕುರಿತು ಕ್ಷಮೆ ಕೇಳಿದರೆ, ಇನ್ನೊಬ್ಬ ಸಚಿವ ಆ ವಿಷಯದಲ್ಲಿ ನೀವೇಕೆ ಮಾತಾಡುತ್ತೀರಿ. ಅದು ನಮ್ಮ ವೈಯಕ್ತಿಕ ಹೋರಾಟ ಎಂದು ಹೇಳುತ್ತಾರೆ.
ರಾಜಕೀಯದಲ್ಲಿ ಧರ್ಮ ಬಳಸುವುದು ಸೂಕ್ತ ಅಲ್ಲ ಎಂದರು.

ಪಕ್ಷದ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಚುನಾವಣಾ ಉಸ್ತುವಾರಿ ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ, ಈಶ್ವರಸಿಂಗ್‌ ಠಾಕೂರ್‌, ಬಾಬುವಾಲಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next