Advertisement

ಬಿಜೆಪಿ ಕೋಟೆಯಲ್ಲಿ ಯಾರತ್ತ ಜನ ಒಲವು?

12:55 PM Apr 20, 2019 | Naveen |

ಔರಾದ: ಸುಡುವ ಬೆಂಕಿಯಂತಹ ಬಿಸಿಲಿನ ನಡುವೆಯೂ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಕಾವು ಹೆಚ್ಚಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ತುರುಸಿನ ಪೈಪೋಟಿ ಏರ್ಪಟ್ಟಿದೆ.

Advertisement

ಮಹಾರಾಷ್ಟ್ರ ಹಾಗೂ ತೆಲಂಗಾಣ ಗಡಿಗೆ ಅಂಟಿಕೊಂಡಿರುವ ಔರಾದ್‌ ಬಿಜೆಪಿಯ ಭದ್ರಕೋಟೆ ಎಂದು ಗುರುತಿಸಿಕೊಂಡಿದೆ. ಹಾಲಿ ಶಾಸಕ ಪ್ರಭು ಚವ್ಹಾಣ ಈ ಕ್ಷೇತ್ರದಿಂದ ಹ್ಯಾಟ್ರಿಕ್‌ ಬಾರಿಸಿದ್ದಾರೆ. ಅಲ್ಲದೆ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಕೂಡ ಔರಾದ ಕ್ಷೇತ್ರದವರಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಔರಾದ ಕ್ಷೇತ್ರದಲ್ಲಿ ಹೆಚ್ಚು ಮತಗಳು ಸಿಗಬಹುದೆಂಬ ಲೆಕ್ಕಾಚಾರ ಬಿಜೆಪಿಯವರದಾಗಿದೆ. ಆದರೆ, ಔರಾದ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಕೂಡ ತಳ್ಳಿಹಾಕುವಂತೆ ಇಲ್ಲ. ಈ ಚುನಾವಣೆ ಬಿಜೆಪಿಗೆ ಅಗ್ನಪರೀಕ್ಷೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ಔರಾದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಬ್ಬರಕ್ಕೇನೂ ಕೊರತೆ ಇಲ್ಲ. ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌, ಮುಖಂಡರಾದ ಭೀಮಸೇನರಾವ್‌ ಸಿಂಧೆ, ಮೀನಾಕ್ಷಿ ಸಂಗ್ರಾಮ, ವಿಜಯಕುಮಾರ ಕೌಡಿಯಾಳ್‌ ಮುಂತಾದವರು ಕ್ಷೇತ್ರದಲ್ಲಿ ಬೀಡುಬಿಟ್ಟಿದ್ದು, ಕಾಂಗ್ರೆಸ್‌ ಅಭ್ಯರ್ಥಿಯ ಕೈ ಬಲಪಡಿಸಲು ಟೊಂಕ ಕಟ್ಟಿ ನಿಂತಿದ್ದಾರೆ. ಶತಾಯಗತಾಯ ಕಾಂಗ್ರೆಸ್‌ಗೆ ಹೆಚ್ಚಿನ ಲೀಡ್‌ ನೀಡುವ
ತವಕದಲ್ಲಿ ಕಾಂಗ್ರೆಸ್‌ ಮುಖಂಡರು ಇದ್ದಾರೆ. ಅಲ್ಲದೆ, ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ್‌ ಖಂಡ್ರೆ ತಾಯಿ ತವರೂರು ಕೂಡ ಇದೇ ಕ್ಷೇತ್ರದ ನಾಗೂರ(ಬಿ) ಆಗಿದೆ. ಹಾಗಾಗಿ, ಖಂಡ್ರೆ ಅವರು ಕ್ಷೇತ್ರದೊಂದಿಗೆ ಅಗಾಧ ನಂಟು ಹೊಂದಿದ್ದಾರೆ. ಅದೇ ರೀತಿ, ಬಿಜೆಪಿ ಅಭ್ಯರ್ಥಿ ಭಗವಂತ್‌ ಖೂಬಾ ಅವರ ಸ್ವಕ್ಷೇತ್ರ ಇರುವ ಕಾರಣ ಪೈಪೋಟಿ ತೀವ್ರಗೊಂಡಿದೆ. ಔರಾದ ತಾಲೂಕಿನಲ್ಲಿ ಅತೀ ಹೆಚ್ಚು ಲಿಂಗಾಯತ ಮತದಾರರಿದ್ದಾರೆ.

ಲಿಂಗಾಯತ ಸಮುದಾಯದ ಮುಖಂಡರು ಎರಡೂ ಪಕ್ಷಗಳಲ್ಲಿದ್ದಾರೆ. ಅಭ್ಯರ್ಥಿಗಳಿಬ್ಬರು ಒಂದೇ ಸಮುದಾಯಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಯಾರಿಗೆ ಹೆಚ್ಚಿನ ಜನರು ಬೆಂಬಲ ನೀಡುತ್ತಾರೆ ಎಂಬುದನ್ನು ಯಾರೂ ಸುಳಿವು ನೀಡುತ್ತಿಲ್ಲ.
ಸರ್ಜಿಕಲ್‌ ಸ್ಟ್ರೈಕ್‌ ವಿಷಯಗಳು ಬಿಜೆಪಿಗೆ ವರವಾಗಲಿವೆ ಎಂಬ ನಂಬಿಕೆ ಬಿಜೆಪಿಯವರಾಗಿದೆ.

ಅಲ್ಲದೆ ಯುವಕರು ದೇಶ ಸುಭದ್ರವಾಗಿ ಇಡುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್‌ ಆರೋಪ ಮಾಡುತ್ತಿರುವ ರಫೆಲ್‌ ಹಗರ ಇಲ್ಲಿನ ಜನರಿಗೆ ಹೆಚ್ಚಾಗಿ ಗೊತ್ತಿಲ್ಲ. ದಿನಕಳೆದಂತೆ ಪ್ರಚಾರದ ಅಬ್ಬರ ಕೂಡ ಹೆಚ್ಚಾಗುತ್ತಿದ್ದು, ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರು
ಮನೆ-ಮನೆಗೆ ಭೇಟಿ ನೀಡಿ ತಮ್ಮ ಪಕ್ಷಕ್ಕೆ ಮತ ಹಾಕಿ ಎಂದು ಹೇಳುತ್ತಿರುವುದು ಸಾಮಾನ್ಯವಾಗಿದೆ.

Advertisement

ಚುನಾವಣೆ ಬಂದಾಗಲಷ್ಟೇ ರಾಜಕೀಯ ಪಕ್ಷಗಳ ಮುಖಂಡರು ಕ್ಷೇತ್ರಕ್ಕೆ ಭೇಟಿ ಕೊಡುತ್ತಾರೆ. ನಮ್ಮ ಸಮಸ್ಯೆಗೆ ಸ್ಪಂದಿಸುವುದಿಲ್ಲ
ಎಂಬುದು ಬಹುತೇಕ ಹಳ್ಳಿಗಳ ಜನರ ಪ್ರಮುಖ ಆರೋಪವಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಪೌರಾಡಳಿತ ಸಚಿವರಾಗಿದ ಈಶ್ವರ ಖಂಡ್ರೆ ಔರಾದ ಪಟ್ಟಣ ಪಂಚಾಯತನ್ನು ಮೇಲ್ದರ್ಜೆಗೆ ಏರಿಸಿ
ಪುರಸಭೆ ಮಾಡುವಂತೆ ಮನವಿ ಮಾಡಿದರೂ ಕ್ಯಾರೆ ಅಂದಿಲ್ಲ ಎಂಬುದು ಖಂಡ್ರೆ ಮೇಲಿರುವ ಗುರುತರ ಆರೋಪ. ಇನ್ನು ಬಿಜೆಪಿ ಅಭ್ಯರ್ಥಿ ತಮ್ಮ ಐದು ವರ್ಷಗಳ ಆಡಳಿತಾವ ಧಿಯಲ್ಲಿ ತವರು ತಾಲೂಕಿನ ಜನರ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ ಎಂಬ ಮಾತುಗಳು ಜನರಿಂದ ಕೇಳಿಬರುತ್ತಿವೆ.

ಕ್ಷೇತ್ರದಲ್ಲಿ ನೀರಾವರಿ ಸಮಸ್ಯೆ ಪ್ರಮುಖವಾಗಿದೆ. ಯುವಕರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲಿ ಇರದ ಕಾರಣ ಯುವಕರು ಬೇರೆ ಊರುಗಳ ಕಡೆ
ಮುಖ ಮಾಡಿದ್ದಾರೆ. ಅಮರೇಶ್ವರ ಮಹಾದ್ವಾರ, ಬೀದರ ನಾಂದೇಡ ಅಂತಾರಾಜ್ಯ ಹೆದ್ದಾರಿ ಅಭಿವೃದ್ಧಿ ಕಂಡಿಲ್ಲ ಎನ್ನುತ್ತಾರೆ ಜನರು.

Advertisement

Udayavani is now on Telegram. Click here to join our channel and stay updated with the latest news.

Next