Advertisement

ಹೈ.ಕ.ದತ್ತ ಮುಖಂಡರು; ಪ್ರಚಾರ ಅಬ್ಬರ

10:51 AM Apr 20, 2019 | Naveen |

ಬೀದರ: ಏ.23ರಂದು ನಡೆಯಲಿರುವ ಲೋಕಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ರವಿವಾರ ಸಂಜೆ ತೆರೆ ಬೀಳಲಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿವೆ.
ರಾಜ್ಯದ 14 ಕಡೆಗಳಲ್ಲಿ ಈಗಾಗಲೇ ಮತದಾನ ನಡೆದಿದ್ದು, ಆ ಭಾಗದ ರಾಜಕೀಯ ಮುಖಂಡರು ಹೈದ್ರಾಬಾದ ಕರ್ನಾಟಕದ ಕಡೆಗೆ ಮುಖ ಮಾಡಿದ್ದಾರೆ.

Advertisement

ಬೀರದ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌-ಬಿಜೆಪಿಗಳ ಮಧ್ಯೆ ಜಿದ್ದಾಜಿದ್ದು ಏರ್ಪಟಿದೆ. ಇಷ್ಟುದಿನಗಳ
ಕಾಲ ಎರಡು ಪಕ್ಷದ ಮುಖಂಡರು ದಕ್ಷಿಣ ಕರ್ನಾಟದ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದು, ಇದೀಗ ಬೀದರ್‌ ಕ್ಷೇತ್ರಕ್ಕೂ ಆಗಮಿಸಿದ್ದಾರೆ. ಬೀದರ್‌ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 22 ಅಭ್ಯರ್ಥಿಗಳು ಸ್ಪರ್ಧೆ ನಡೆಸಿದ್ದು, ರಾಷ್ಟ್ರೀಯ ಪಕ್ಷಗಳಂತೆ ಸ್ವತಂತ್ರ ಅಭ್ಯರ್ಥಿಗಳು ಪ್ರಚಾರ ಜೋರಾಗಿದೆ. ನಾಯಕರ ಭೇಟಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಪರ ಕಾಂಗ್ರೆಸ್‌ ಪಕ್ಷದ ದಂಡೇ ಆಗಮಿಸುತ್ತಿದೆ.

ಈಗಾಗಲೇ ಸಚಿವರಾದ ಯು.ಟಿ. ಖಾದರ್‌, ಮಾಜಿ ಸಭಾಪತಿ ವಿ.ಆರ್‌. ಸುದರ್ಶನ್‌, ಸಚಿವೆ ಜಯಮಾಲಾ, ಮಾಜಿ ಸಚಿವ
ರಾಮಲಿಂಗರೆಡ್ಡಿ, ಸಿಎಂ ಇಬ್ರಾಹೀಮ್‌ ಸೇರಿದಂತೆ ಅನೇಕರು ಆಗಮಿಸಿ ಪ್ರಚಾರದಲ್ಲಿ ತೊಡಗಿದ್ದಾರೆ. ಈಶ್ವರ ಖಂಡ್ರೆ ಅವರನ್ನು
ಗೆಲ್ಲಿಸಲು ರಸ್ತೆಗೆ ಇಳಿದು ಮತಯಾಚನೆ ನಡೆಸಿದ್ದಾರೆ. ಅದೇ ರೀತಿ ಬಿಜೆಪಿ ಪ್ರಮುಖರು ಕೂಡ ಭಗವಂತ ಖೂಬಾ ಪರ ಪ್ರಚಾರಕ್ಕೆ
ಆಗಮಿಸಲಿದ್ದಾರೆ. ಮೊದಲಿಗೆ ಪ್ರಧಾನಿ ಮೋದಿ ಹಾಗೂ ಯೋಗಿ ಆಗಮಿದಲ್ಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಕೊನೆ ಕ್ಷಣದಲ್ಲಿ ಆ ಇಬ್ಬರ ಕಾರ್ಯಕ್ರಮ ರದ್ದಾಗಿದ್ದು, ಇದೀಗ ಪಕ್ಷದ ಪ್ರಚಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರುಳಿಧರಾವ್‌ ಹಾಗೂ ಆರ್‌.ಅಶೋಕ ಜಿಲ್ಲೆಗೆ ಭೇಟಿ ನೀಡಿ ಪ್ರಚಾರ ನಡೆಸಲಿದ್ದಾರೆ.

ಪ್ರಚಾರದ ಭರಾಟೆ: ಮತದಾನಕ್ಕೆ ಮೂರುದಿಗಳು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳು ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚಾರ ನಡೆಸಿದ್ದಾರೆ. ಕ್ಷಣದ ಸಮಯ ಕೂಡ
ವ್ಯರ್ಥಮಾಡದೆ ಪ್ರಚಾರದಲ್ಲಿ ಧುಮುಕಿದ್ದಾರೆ. ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೊರಡುವ ನಾಯಕರು ಹತ್ತಾರು ಗ್ರಾಮಗಳಿಗೆ ಭೇಟಿ
ನೀಡಿ ಮತಯಾಚನೆ ಮಾಡುತ್ತಿದ್ದಾರೆ. ಅಲ್ಲದೆ, ಬಿಸಿಲಿನ ಝಳ ಲೆಕ್ಕಿಸದೆ ವಿವಿಧೆಡೆ ಈಶ್ವರ ಖಂಡ್ರೆ-ಭಗವಂತ ಖೂಬಾ ಇಬ್ಬರು ರೋಡ್‌ ಶೋಗಳನ್ನು ನಡೆಸುತ್ತಿದ್ದಾರೆ. ರಾತ್ರಿ ಮನೆಗೆ ಬರುವ ನಾಯಕರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜತೆಗೆ ಚರ್ಚೆಗಳನ್ನು ನಡೆಸಿ ಚುನಾವಣೆಯ ತಂತ್ರಗಾರಿಕೆ ಹೆಣೆಯುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಎರಡು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತಲ್ಲೀನರಾಗಿದ್ದಾರೆ.

ಪರ-ವಿರೋಧ ಘೊಷಣೆ: ಲೋಕಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್‌-ಬಿಜೆಪಿ ಎರಡು ಪಕ್ಷದ ಕಾರ್ಯಕರ್ತರು
ಪರ-ವಿರೋಧ ಘೋಷಣೆಗಳನ್ನು ಕೂಗುವ ವಾಡಿಕೆ ಶುರು ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮಾಜಿ ಶಾಸಕ ಅಶೋಕ ಖೇಣಿ, ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಹಾಗೂ ಅವರ ಪತ್ನಿ ಡಾ| ಗೀತಾ ಖಂಡ್ರೆ ಸೇರಿದಂತೆ ಇತರೆ ನಾಯಕರು ಪ್ರಚಾರ ನಡೆಸುವ ಸಂದರ್ಭದಲ್ಲಿ ಮೋದಿ ಘೊಷಣೆಯನ್ನು ಕೂಗಿದ್ದಾರೆ. ಹಾಗಂತ ಕಾಂಗ್ರೆಸ್‌ ಕಾರ್ಯಕರ್ತರು ಕೂಡ ಚೌಕಿದಾರ್‌ ಚೋರ ಹೈ ಎಂದು ಉತ್ತರ ನೀಡಿ ಘೊಷಣೆಗಳನ್ನು ಕೂಗುತ್ತಿದ್ದು, ಎರಡು ಪಕ್ಷದ ಮುಖಂಡರಿಗೆ ಈ ಬೆಳವಣಿಗೆ ಮುಜುಗರ ಆಗುವಂತೆ ಮಾಡಿದೆ.

Advertisement

ವಾಕ್‌ ಸಮರ
ಪ್ರಚಾರ ಅಬ್ಬರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ, ಬಿಜೆಪಿ
ಅಭ್ಯರ್ಥಿ ಭಗವಂತ ಖೂಬಾ ಅವರ ಮಧ್ಯೆ ವಾಕ್‌ ಸಮರ ತಾರಕಕ್ಕೇರಿದೆ. ಏಕ ವಚನದ ಮಾತುಗಳ ಪ್ರಹಾರ
ನಡೆಸುವ ಮೂಲಕ ನೆರೆದ ಜನರಲ್ಲಿ ಕಿಚ್ಚು ಹಚ್ಚುವಂತೆ ಮಾಡುತ್ತಿದ್ದಾರೆ. ಇಬ್ಬರೂ ನಾಯಕರು ಟೊಂಕ ಕಟ್ಟಿ ಕ್ಷೇತ್ರ ಸುತ್ತುತ್ತಿದ್ದಾರೆ. ಇಬ್ಬರೂ ಅಭ್ಯರ್ಥಿಗಳು ಭರವಸೆಗಳ
ಮಹಾಪೂರವನ್ನೇ ಹರಿಸುತ್ತಿದ್ದಾರೆ. ಆದರೆ, ಕಡೆಗೆ ಮತದಾರನ ತೀರ್ಪು ಅಂತಿಮವಾಗಲಿದೆ

„ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next