Advertisement
ತಾಲೂಕಿನ ಕಾಂಗ್ರೆಸ ಭದ್ರಕೋಟೆ ಆಗಿರುವ ಗಡಿ ಪ್ರದೇಶದ ಕುಂಚಾವರಂ, ಶಾದೀಪುರ, ವೆಂಕಟಾಪುರ, ಸುತ್ತಮುತ್ತ ಇರುವ ತಾಂಡಾಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಸಿಗಲಿವೆ ಎನ್ನುವ ಮಾತುಗಳು ಕಾರ್ಯಕರ್ತರಿಂದ ಕೇಳಿ ಬರುತ್ತಿವೆ. ಚಿಂಚೋಳಿ ವಿಧಾನಸಭೆ ಮತಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿ ಶಾಸಕರಾದ ನಂತರ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಮಾಜಿ ಶಾಸಕ ಡಾ|ಉಮೇಶ ಜಾಧವ ಬಂಜಾರಾ ಸಮಾಜದ ತಾಪಂ ಮತ್ತು ಗ್ರಾ.ಪಂ ಸದಸ್ಯರಿಗೆ ಹಾಗೂ ಅಲ್ಲಿನ ಸಮಾಜದ ಮುಖಂಡರಿಗೆ ಬೀದರ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಮತ ಹಾಕುವಂತೆ ಮೊಬೈಲ್ ಮೂಲಕ ಸಂಪರ್ಕಿಸಿ ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕುಂಚಾವರಂ ಗಡಿಭಾಗದಲ್ಲಿ ಸ್ವಲ್ಪಮಟ್ಟಿಗೆ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಸಿಗಲಿವೆ ಎನ್ನುವ ಲೆಕ್ಕಾಚಾರ ಹಾಕಲಾಗುತ್ತಿದೆ.
Related Articles
Advertisement
ತಾಲೂಕಿನಲ್ಲಿ ಬೀದರ ಲೋಕಸಭೆ ಚುನಾವಣಾ ಫಲಿತಾಂಶದ ಜೊತೆಗೆ ಕಲಬುರಗಿ ಲೋಕಸಭೆ ಚುನಾವಣೆ ಫಲಿತಾಂಶವೂ ಕುತೂಹಲಕಾರಿ ಆಗಿದೆ. ತಾಲೂಕಿನ ಪ್ರತಿ ಗ್ರಾಮಗಳ ಚಹಾ ಹೋಟೆಲ್, ಮದ್ಯದ ಅಂಗಡಿ, ದಾಬಾಗಳಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಭರ್ಜರಿಯಾಗಿ ನಡೆಯುತ್ತಿವೆ.
ಚಿಂಚೋಳಿ: ಎರಡು ನಾಮಪತ್ರ ಸಲ್ಲಿಕೆಕಲಬುರಗಿ: ಚಿಂಚೋಳಿ(ಪ.ಜಾ) ವಿಧಾನಸಭೆ ಕ್ಷೇತ್ರಕ್ಕೆ ಮೇ 19 ರಂದು ನಡೆಯುವ ಉಪಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಎರಡನೇ ದಿನ ಒಬ್ಬ ಅಭ್ಯರ್ಥಿಯಿಂದ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚಿಂಚೋಳಿ(ಪ.ಜಾ) ಕ್ಷೇತ್ರದ ಚುನಾವಣಾಧಿಕಾರಿ ಸೋಮಶೇಖರ ತಿಳಿಸಿದ್ದಾರೆ. ದೀಪಕ ಗಂಗಾರಾಮ ಕಟಕದೊಂಡ ಅವರು ಹಿಂದುಸ್ತಾನ ಜನತಾ ಪಕ್ಷದಿಂದ ಒಂದು ನಾಮಪತ್ರ ಹಾಗೂ ಬಹುಜನ ಸಮಾಜ ಪಕ್ಷದಿಂದ ಒಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೆ ಏ.29 ಕೊನೆದಿನವಾಗಿದ್ದು, ಏ.30ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಮೇ 2ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ. ಈ ವರೆಗೆ ಒಟ್ಟು ಇಬ್ಬರು ಅಭ್ಯರ್ಥಿಗಳಿಂದ ಮೂರು ನಾಮಪತ್ರ ಸಲ್ಲಿಸಿದಂತಾಗಿದೆ ಎಂದು ತಿಳಿಸಿದ್ದಾರೆ. ಶಾಮರಾವ ಚಿಂಚೋಳಿ