Advertisement

ಬಸವಣ್ಣನವರ ಸಪ್ತಸೂತ್ರಗಳೇ ಜಗತ್ತು ಬದಲಿಸಬಲ್ಲವು

05:14 PM Apr 28, 2019 | Naveen |

ಬೀದರ: ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಹೇರಳವಾಗಿ ಸಿಗುತ್ತವೆ. ಬಸವಣ್ಣನವರ ಸಪ್ತಸೂತ್ರಗಳೇ ಈ ಜಗತ್ತನ್ನು ಬದಲಾಯಿಸಬಲ್ಲವು ಎಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ| ಸಿ.ಸೋಮಶೇಖರ ಹೇಳಿದರು.

Advertisement

ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಸಂಘ ಹಾಗೂ ಕದಂಬ ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಡೆದ ‘ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು’ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶರಣರು ಸ್ವಾರ್ಥಕ್ಕಾಗಿ ಎಂದೂ ಬದುಕಲಿಲ್ಲ, ಜನ ಬದುಕಲಿ ಜಗ ಬದುಕಲಿ ಎಂಬ ತಾತ್ವಿಕ ನೆಲೆಗಟ್ಟಿನ ಮೇಲೆ ತಮ್ಮ ಜೀವನ ಸವೆಸಿ ಸರ್ವರನ್ನೂ ಇಂಬಿಟ್ಟುಕೊಂಡು ಸರ್ವರನ್ನೂ ಮುಕ್ತಿಯ ಪಥಕ್ಕೆ ಕೊಂಡೊಯ್ದವರು. ದೇವನೊಬ್ಬನೇ, ಮನುಜರೆಲ್ಲರೂ ಒಂದೇ ಎಂಬ ವಿಶ್ವಭ್ರಾತೃತ್ವದ ಸಂದೇಶ ಸಾರಿ, ಜಾತಿ ವರ್ಣ ವರ್ಗರಹಿತವಾದ ಕಲ್ಯಾಣ ರಾಜ್ಯ ಕಟ್ಟಲು ಹಗಲಿರುಳು ಪ್ರಯತ್ನಿಸಿದವರು ಬಸವಾದಿ ಶರಣರು ಎಂದು ವಿವರಿಸಿದರು.

ವಚನಗಳಲ್ಲಿ ಜೀವದ್ರವ್ಯವಿದೆ. ತನು, ಮನ, ಧನವನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸಬೇಕು ಎಂಬುದು ಶರಣರ ಆಶಯವಾಗಿದೆ. ವಚನ ಸಾಹಿತ್ಯದಲ್ಲಿರುವ ಮಾನವೀಯ ಮೌಲ್ಯಗಳನ್ನು ಸರ್ವರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಈಗ ಜಾಗತಿಕ ಮಟ್ಟದಲ್ಲಿರುವ ಅಂಧಶ್ರದ್ಧೆ, ಸ್ತ್ರೀ ಶೋಷಣೆ, ಭಯೋತ್ಪಾದನೆ ಮುಂತಾದವುಗಳನ್ನು ಸುಲಭವಾಗಿ ಹೋಗಲಾಡಿಸಬಹುದು ಎಂದರು.

ಡಾ| ಜಗನ್ನಾಥ ಹೆಬ್ಟಾಳೆ, ಕರ್ನಾಟಕ ಸಾಹಿತ್ಯ ಸಂಘ ಟ್ರಸ್ಟ್‌(ರಿ)ನ ಅಧ್ಯಕ್ಷ ಶಂಕರರಾವ್‌ ಹೊನ್ನಾ, ಪತ್ರಕರ್ತರಾದ ಶಿವಶರಣಪ್ಪ ವಾಲಿ, ಪ್ರೊ| ಎಸ್‌.ಬಿ. ಬಿರಾದಾರ, ಪಿ.ಸಂಗಪ್ಪ ಇಂಜಿನಿಯರ್‌, ಸಂಘದ ಉಪಾಧ್ಯಕ್ಷ ಶಂಕ್ರೆಪ್ಪಾ ರಾಂಪೂರೆ, ಮಲ್ಲಮ್ಮಾ ಸಂತಾಜಿ, ಡಾ| ಸಾವಿತ್ರಿಬಾಯಿ ಹೆಬ್ಟಾಳೆ, ಸುನಿತಾ ಕೂಡ್ಲಿಕರ್‌, ಮಹಾನಂದ ಮಡಕಿ, ಮಹಾರುದ್ರ ಡಾಕುಳಗಿ, ಸಂಜೀವಕುಮಾರ ಸ್ವಾಮಿ, ಶಿವಶರಣಪ್ಪ ಗಣೇಶಪುರ, ಡಾ| ರಾಜಕುಮಾರ ಹೆಬ್ಟಾಳೆ, ಮೀರಾ ಖೇಣಿ, ಎಸ್‌.ಬಿ. ಕುಚಬಾಳ, ನಿಜಲಿಂಗಪ್ಪ ತಗಾರೆ ಹಾಗೂ ಅನೇಕರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next