ಬೀದರ್: ಬೀದರ್ ನ ಪ್ರತಿಷ್ಠಿತ ನರ್ಚರ್ ಕೋಚಿಂಗ್ ಸೆಂಟರ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ರವಿವಾರ ದಾಳಿ ನಡೆಸಿದ್ದಾರೆ.
ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸದೆ ವಂಚನೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಪ್ರತಿ ವಿದ್ಯಾರ್ಥಿಗಳಿಂದ 36 ಸಾವಿರ ರೂ. ಶುಲ್ಕ ಪಡೆಯುವ ಈ ಕೇಂದ್ರ ಪುಸ್ತಕ, ಡ್ರೆಸ್ ಗಳನ್ನ ಮಾರುಕಟ್ಟೆಗಿಂತ ಎರಡು ಪಟ್ಟು ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಪಾಲಕರು ದೂರು ನೀಡಿದ್ದರು.
ಆದಾಯ ತೆರಿಗೆ ಇಲಾಖೆ ಆಯುಕ್ತ ಮಹೇಶ್ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಅಧಿಕಾರಿಗಳು ದಾಖಲೆಗಳನ್ನು ವಶ ಪಡಸಿಕೊಂಡಿದ್ದಾರೆ. ವಾರದಲ್ಲಿ ತೆರಿಗೆ ಪಾವತಿಗೆ ಗಡುವು ನೀಡಲಾಗಿದೆ.
ಪ್ರತಿ ಕೋಚಿಂಗ್ ಸೆಂಟರ್ ಗಳು ಕಡ್ಡಾಯವಾಗಿ ಜಿಎಸ್.ಟಿ ನೋಂದಣಿ ಮಾಡಿಸಿ ಸರ್ಕಾರಕ್ಕೆ ಸೂಕ್ತ ತೆರಿಗೆ ಪಾವತಿಸಬೇಕು. ಇಲ್ಲವಾದಲ್ಲಿ ಜಿಎಸ್.ಟಿ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.