Advertisement

Bidar; ಪತ್ನಿ ಜತೆ ಅನೈತಿಕ ಸಂಬಂಧ‌:ಯುವಕನ ಮರ್ಮಾಂಗಕ್ಕೆ ಕತ್ತರಿ ಹಾಕಿದ ಪತಿ!!

08:34 PM Sep 20, 2024 | Team Udayavani |

ಬೀದರ್: ಪತ್ನಿಯ ಜತೆ ಅನೈತಿಕ ಸಂಬಂಧ‌ ಹೊಂದಿದ್ದ ಯುವಕನ ಮರ್ಮಾಂಗ ಕತ್ತರಿಸಲು ವ್ಯಕ್ತಿಯೊಬ್ಬ ಯತ್ನಿಸಿದ  ಘಟನೆ ತಾಲೂಕಿನ ಬಂಬುಳಗಿ‌ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ‌ ಸುನೀಲ್ (28) ಎಂಬಾತ ಹಲ್ಲೆಗೊಳಗಾಗಿ‌  ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಗುರುವಾರ(ಸೆ19) ಮಹಿಳೆಯ ಜತೆ ಆಕೆಯ ಮನೆಯಲ್ಲಿ ಸಿಕ್ಕಿ ಬಿದ್ದಿರುವ ಯುವಕನಿಗೆ‌ ಪತಿ ರಾತ್ರಿಯಿಡಿ‌ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದು, ಮರ್ಮಾಂಗವನ್ನು ಕತ್ತರಿ ಮೂಲಕ ಘಾಸಿಗೊಳಿಸಿ ಕತ್ತರಿಸಲು ಪ್ರಯತ್ನ ಮಾಡಿದ್ದಾನೆ.

ಚಿಟಗುಪ್ಪ ಪೊಲೀಸರು ಕೃತ್ಯ ಎಸಗಿದ ವ್ಯಕ್ತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next