Advertisement

ಬೀದರ್‌ ಜಿಲ್ಲಾಸ್ಪತ್ರೆ: 7 ತಿಂಗಳಲ್ಲಿ 148 ಶಿಶುಗಳ ಸಾವು

06:00 AM Aug 24, 2017 | Team Udayavani |

ಬೀದರ್‌: ಇಡೀ ದೇಶವೇ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿನ ಶಿಶುಗಳ ಸರಣಿ ಸಾವಿಗೆ ಮರುಗು ತ್ತಿರುವಾಗಲೇ, ಬೀದರ್‌ನ ಜಿಲ್ಲಾಸ್ಪತ್ರೆ ಯೊಂದರಲ್ಲೇ ಈ ವರ್ಷಾರಂಭದಿಂದ ಜುಲೈ ಅಂತ್ಯದ ವರೆಗೆ 148 ಶಿಶುಗಳು ಜೀವ ಕಳೆದುಕೊಂಡಿವೆ.

Advertisement

ಇದು ಆಸ್ಪತ್ರೆಯ ಮೇಲುಸ್ತುವಾರಿ ಹೊಂದಿರುವ ಬೀದರ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್‌)ಯೇ ನೀಡಿರುವ ಅಂಕಿ ಅಂಶ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಜತೆಗೆ ಅಪೌಷ್ಟಿಕತೆ, ತೂಕ ದಲ್ಲಿ ವ್ಯತ್ಯಾಸ, ಅವಳಿ ಮಕ್ಕಳ ಜನನ ಮತ್ತು ಸೋಂಕು ಸಹಿತ ವಿವಿಧ ಕಾರಣಕ್ಕೆ ಶಿಶುಗಳು ಸಾವಿಗೀಡಾಗಿವೆ.

ಎಷ್ಟೆಷ್ಟು?: ಜನವರಿಯಿಂದ ಜೂನ್‌ ನಡುವಿನ ಏಳು ತಿಂಗಳ ಅವ ಧಿಯಲ್ಲಿ ಬೀದರ್‌ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಟ್ಟು 864 ಮಕ್ಕಳಲ್ಲಿ 148 ಶಿಶುಗಳು ಮೃತಪಟ್ಟಿವೆ. ಜನವರಿಯಲ್ಲಿ ದಾಖ ಲಾದ 136 ಶಿಶುಗಳಲ್ಲಿ 18, ಫೆಬ್ರವರಿ 118ರಲ್ಲಿ 19, ಮಾರ್ಚ್‌ 108ರಲ್ಲಿ 15, ಎಪ್ರಿಲ್‌ 137ರಲ್ಲಿ 19, ಮೇ 146ರಲ್ಲಿ 30, ಜೂನ್‌ 108ರಲ್ಲಿ 19 ಮತ್ತು ಜುಲೆೈ ತಿಂಗಳಲ್ಲಿ 111ರ ಪೆೈಕಿ 28 ಮಕ್ಕಳು ಮೃತಪಟ್ಟಿವೆ ಎಂದು ಬ್ರಿಮ್ಸ್‌ ಬೋಧಕ ಆಸ್ಪತ್ರೆ ಮಾಹಿತಿ ನೀಡಿದೆ.
ಜನಿಸಿದ ಮಗುವಿನ ತೂಕ 2 ಕೆ.ಜಿ. ಗಿಂತ ಅ ಧಿಕವಾಗಿರಬೇಕು. ತೂಕ ದಲ್ಲಿ ವ್ಯತ್ಯಾಸ ಮತ್ತು ಬೆಳವಣಿಗೆ ಸರಿಯಾಗಿ ಆಗದಿರುವುದು ಮಕ್ಕಳ ಸಾವಿಗೆ ಕಾರಣ. ಪೌಷ್ಟಿಕಾಂಶದ ಕೊರತೆ, ಎಳೆ ವಯಸ್ಸಿನಲ್ಲೇ ಗರ್ಭ ಧರಿಸುವುದು ತಾಯಂದಿರ ಜತೆಗೆ ಶಿಶುಗಳನ್ನೂ ಸಾವಿನ ಮನೆಗೆ ತಳ್ಳುತ್ತಿದೆ. ಇನ್ನು ಕೆಲವೊಮ್ಮೆ ವೈದ್ಯರ ನಿರ್ಲಕ್ಷ éದ ಆರೋಪಗಳು ಕೇಳಿ ಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next