Advertisement

ಬೀದರ: ಗ್ರಾಮಸ್ಥರ ಸಮಸ್ಯೆಗಳಿಗೆ ದನಿಯಾದ ಡಿಸಿ

12:48 PM Feb 23, 2021 | Team Udayavani |

ಬೀದರ(ಸಂಗಮ್‌): ಜಿಲ್ಲಾಡಳಿತವೇ ಜನರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ, ಬೇಡಿಕೆಗಳನ್ನು ಪರಿಹರಿಸಬೇಕು. ಆ ಮೂಲಕ ಆಡಳಿತ ವರ್ಗಕ್ಕೆ ಚುರುಕು ಮುಟ್ಟಿಸಲು ರಾಜ್ಯ ಸರ್ಕಾರ ರೂಪಿಸಿರುವ “ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ’ ಮಹತ್ವಕಾಂಕ್ಷಿ ಕಾರ್ಯಕ್ರಮ ಸೋಮವಾರ ಕಮಲನಗರ ತಾಲೂಕಿನ ಸಂಗಮ್‌ ಗ್ರಾಮದಲ್ಲಿ ನೆರವೇರಿತು. ಡಿಸಿ ರಾಮಚಂದ್ರನ್‌ ಆರ್‌. ಅವರು ಗ್ರಾಮ ವಾಸ್ತವ್ಯದ ಮೂಲಕ ಗ್ರಾಮಸ್ಥರ ಸಮಸ್ಯೆಗಳಿಗೆ ದನಿಯಾದರು.ಗ್ರಾಮಕ್ಕೆ ಆಗಮಿಸಿದ ಡಿಸಿ ರಾಮಚಂದ್ರನ್‌ ಅವರನ್ನು ಗ್ರಾಮಸ್ಥರು, ಅಧಿ ಕಾರಿಗಳು ಸ್ವಾಗತಿಸಿದರು.

Advertisement

ವೇದಿಕೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದಿಸುವ ಪ್ರಯತ್ನ ಮಾಡಿದರೆ, ಉಳಿದವುಗಳನ್ನು ಕಾಲಮಿತಿಯೊಳಗೆ ಪರಿಹರಿಸುವ ಆಶ್ವಾಸನೆ ನೀಡಿದರು.

ಮಧ್ಯಾಹ್ನ ಮಕ್ಕಳು ಸೇರಿ ಗ್ರಾಮಸ್ಥರ ಜತೆ ಸಂವಾದ ನಡೆಸಿದರು. ಜಿಪಂ ಸಿಇಒ ಜಹೀರಾ ನಸಿಮ್‌ ಮತ್ತು ಸಹಾಯಕ ಆಯುಕ್ತೆ ಗರೀಮಾ ಪನ್ವಾರ ಸಾಥ್‌
ನೀಡಿದರು. ಶಿಕ್ಷಣವು ಮಹಿಳೆಯರ ಸಂಸ್ಕಾರ ಮತ್ತು ಆರ್ಥಿಕ ಬಲವರ್ಧನೆಗೆ ಪ್ರೇರಣಾ ಶಕ್ತಿಯಾಗಿ ಕೆಲಸ ಮಾಡುತ್ತದೆ. ಹಾಗಾಗಿ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಒತ್ತು
ಕೊಡಬೇಕು. ಪಾಲಕರು ಹೆಣ್ಣು-ಗಂಡು ಎಂಬ ಭೇದಭಾವ ಮಾಡದೇ ಕಡ್ಡಾಯವಾಗಿ ಶಿಕ್ಷಣ ಕಲ್ಪಿಸಿ  ಅವರ ಭವಿಷ್ಯ ರೂಪಿಸಬೇಕು ಎಂದು ಗ್ರಾಮಸ್ಥರಲ್ಲಿ
ಮನವಿ ಮಾಡಿದ ಡಿಸಿ ರಾಮಚಂದ್ರನ್‌, ಶಾಲೆ ಪುನರಾರಂಭ ಹಿನ್ನಲೆ ಜಿಲ್ಲೆಯಾದ್ಯಂತ ಮರಳು ಶಾಲೆಗೆ ಅಭಿಯಾನ ಆರಂಭಿಸಬೇಕು ಎಂದು ಸೂಚಿಸಿದರು.

ಗರೀಮಾ ಪನ್ವಾರ್‌ ಮಾತನಾಡಿದರು. ಪ್ರೊಬೆಷನರಿ ಐ.ಎ.ಎಸ್‌ ಅಧಿಕಾರಿಗಳಾದ ವೆಂಕಟಲಕ್ಷ್ಮೀ, ಅಶ್ವಿ‌ನ್‌, ತಹಶೀಲ್ದಾರ್‌ ರಮೇಶಕುಮಾರ ಪೆದ್ದೆ, ಜಂಟಿ ಕೃಷಿ
ನಿರ್ದೇಶಕಿ ತಾರಾಮಣಿ ಜಿ.ಎಚ್‌, ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅ ಧಿಕಾರಿಗಳು, ಗ್ರಾಮದ ಮುಖಂಡರಾದ ಶಶಿ ಪಾಟೀಲ, ಅಶೋಕ ಪಾಟೀಲ ಇದ್ದರು.

ಸಾರಾಯಿ ಮುಕ್ತ ಮಾಡಿ
ಗ್ರಾಮ ವಾಸ್ತವ್ಯದ ವೇಳೆ ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟದ ವಿರುದ್ಧ ಸಿಡಿದಿದೆದ್ದ ಘಟನೆ ನಡೆಯಿತು. ಮದ್ಯ ಸೇವನೆ ಮಡಿ ಯುವಕರು ಸೇರಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಡಿಸಿ ಎದುರು ಅಳಲು ತೋಡಿಕೊಂಡರಲ್ಲದೇ ನಮ್ಮೂರಿಗೆ ಸಾರಾಯಿ ಬೇಡವೇ ಬೇಡ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿವೈಎಸ್‌ಪಿ ದೇವರಾಜ್‌, ಗ್ರಾಮವನ್ನು ಸಾರಾಯಿ ಮುಕ್ತ ಮಾಡುತ್ತೇವೆ, ಅಕ್ರಮ ಸಾರಾಯಿಗೆ ಇಂದೇ ಕಡಿವಾಣ ಹಾಕುತ್ತೇವೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next