Advertisement

ಸ್ಮಶಾನ ಭೂಮಿ ಕೊರತೆ : ಕದ್ದು ಮುಚ್ಚಿ ಸರ್ಕಾರ ಜಾಗದಲ್ಲಿ ಅಂತ್ಯಸಂಸ್ಕಾರ

07:38 AM Sep 17, 2022 | Team Udayavani |

ಬೀದರ್ : ಸ್ಮಶಾನ ಭೂಮಿ ಕೊರತೆ ಹಿನ್ನಲೆ ಮೃತ ವ್ಯಕ್ತಿಯ ಶವವನ್ನು ತಡ ರಾತ್ರಿಯವರೆಗೆ ಕಾದು ಸರ್ಕಾರಿ ಜಾಗವೊಂದರಲ್ಲಿ ಕದ್ದು ಮುಚ್ಚಿ ಶವ ಸಂಸ್ಕಾರ ಮಾಡಿರುವ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಧನ್ನೂರ್ (ಎಚ್) ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

Advertisement

ಹೃದಯಾಘಾತದಿಂದ ಶುಕ್ರವಾರ ದಲಿತ ಸಮಾಜದ ಶಿವರಾಜ ಬಾಲಾಜಿ ವಾಘಮಾರೆ (೪೫) ಎಂಬುವರು ನಿಧನರಾಗಿದ್ದು, ಮೃತರಿಗೆ ಸ್ವಂತ ಜಮೀನಿಲ್ಲ. ಮತ್ತೊಂದೆಡೆ ಸಮಾಜದವರಿಗೆ ಸ್ಮಶಾನ ಭೂಮಿಯೂ ಇಲ್ಲ.‌ ಹೀಗಾಗಿ ಮೃತನ ಅಂತ್ಯ ಕ್ರಿಯೆಗೆ ದೊಡ್ಡ ಸಮಸ್ಯೆಯಾಗಿತ್ತು. ಸಂಜೆವರೆಗೆ ಕಾದು ಗ್ರಾಮದ ಹೊರ ವಲಯಲ್ಲಿನ ಅರಣ್ಯ ಇಲಾಖೆಯ ‌ಜಾಗದಲ್ಲಿ ಕದ್ದು ಮುಚ್ಚಿ ಸುಡಲಾಗಿದೆ.

ಗ್ರಾಮದಲ್ಲಿ ದಲಿತ ಸಮಾಜದವರು ಯಾರಾದರೂ ಮೃತಪಟ್ಟರೆ ಅವರವರ ಸ್ವಂತ‌ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಜಮೀನು ಇಲ್ಲದವರಿಗೆ‌ ಯಾರಾದರೂ ಮೃತರಾದರೆ, ಸತ್ತ ದು:ಖಕ್ಕಿಂತ ಮಣ್ಣು ಮಾಡುವ‌ ಚಿಂತೆಯೇ ಹೆಚ್ಚಾಗುತ್ತಿದೆ. ಸತ್ತ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಘನತೆ, ಗೌರವದಿಂದ ಮಾಡಬೇಕಾದ ಸ್ಥಳದಲ್ಲಿ ಕದ್ದು, ಮುಚ್ಚಿ ಅಂತ್ಯ ಸಂಸ್ಕಾರ ಮಾಡಬೇಕಾದ ದುಸ್ಥಿತಿ ಎದುರಾಗಿದೆ‌ ಎಂದು‌ ‘ಉದಯವಾಣಿ’ ಗೆ ಗೋಳು ತೋಡಿಕೊಂಡಿದ್ದಾರೆ.

ಶ್ರೀದೇವಿ ಕುಂದನ್, ಸ್ಮಶಾನ ಭೂಮಿಗಾಗಿ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ದಲಿತರಿಗೆ ‌ಸ್ಮಶಾನ ಭೂಮಿ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಉಕ್ರೇನ್‌ನಿಂದ ಬಂದ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳಿಗೆ ಪೋರ್ಟಲ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next