Advertisement

ಬೀದರ್: ಕೋವಿಡ್ ಸೋಂಕಿಗೆ ಇಬ್ಬರು ಸಾವು, 52 ಹೊಸ ಸೋಂಕಿತ ಪ್ರಕರಣ ದೃಢ

07:53 PM Aug 05, 2020 | sudhir |

ಬೀದರ್ : ಜಿಲ್ಲೆಯಲ್ಲಿ ಹೆಮ್ಮಾರಿ ಕೋವಿಡ್ ವೈರಾಣು ಆರ್ಭಟ ಮುಂದುವರೆದಿದ್ದು, ಬುಧವಾರ ಮತ್ತೆ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು ಹೊಸದಾಗಿ 52 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

Advertisement

ಔರಾದ ತಾಲೂಕಿನ ಹೊಕ್ರಾಣಾ ಮತ್ತು ಬೋರ್ಗಿ ಗ್ರಾಮದ ವ್ಯಕ್ತಿಗಳು ಮೃತಪಟ್ಟಿದ್ದಾರೆ. 79 ಮತ್ತು 65 ವಯಸ್ಸಿನ ವ್ಯಕ್ತಿಗಳು ತೀವ್ರ ಉಸಿರಾಟ, ಜ್ವರ ಮತ್ತು ಮೈ ಕೈ ನೋವು ಹಿನ್ನಲೆ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇಬ್ಬರಲ್ಲಿಯೂ ಕೋವಿಡ್- 19 ವೈರಸ್ ದೃಢಪಟ್ಟಿತ್ತು.

ಬುಧವಾರ ಜಿಲ್ಲೆಯ ಬೀದರ್ ಮತ್ತು ಔರಾದ ತಾಲೂಕಿನಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿದ್ದರೆ, ಭಾಲ್ಕಿ ತಾಲೂಕಿನಲ್ಲಿ 8, ಬಸವಕಲ್ಯಾಣ ತಾಲೂಕಿನಲ್ಲಿ 7, ಹುಮನಾಬಾದ್ ತಾಲೂಕಿನಲ್ಲಿ 4 ಮತ್ತು ಅನ್ಯ ಜಿಲ್ಲೆ- ರಾಜ್ಯದ 1 ಕೇಸ್ ವರದಿಯಾಗಿವೆ. ಜಿಲ್ಲೆಯಲ್ಲಿ ಇಂದಿನ 52 ಸೋಂಕು ಪ್ರಕರಣಗಳು ಸೇರಿ ಪಾಸಿಟಿವ್ ಸಂಖ್ಯೆ ಈಗ 2614ಕ್ಕೆ ಏರಿಕೆ ಆಗಿವೆ. ಈ ಪೈಕಿ ಒಟ್ಟು 87 ಜನರು ಸಾವಿನ ಕದ ತಟ್ಟಿದ್ದರೆ, 1706 ಜನ ಚಿಕಿತ್ಸೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 817 ಸಕ್ರೀಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಇದುವರೆಗೆ 51,483 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 48,519 ಮಂದಿಯದ್ದು ನೆಗೆಟಿವ್ ಬಂದಿದ್ದು, ಇನ್ನೂ 350 ಜನರ ಪರೀಕ್ಷಾ ವರದಿ ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next