Advertisement
ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ವೀರ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ವಿಶ್ವದಲ್ಲೇ ಅಕ್ಕಮಹಾದೇವಿ ವ್ಯಕ್ತಿತ್ವ ಅಪರೂಪವಾದದ್ದು. ಅವರ ಸಂದೇಶ ವಿಶ್ವಮಾನ್ಯವಾಗಿದೆ. ಬದುಕಿನಲ್ಲಿ ಏನೇ ಏರಿಳಿತಗಳು ಬಂದರೂ ಸಮಾಧಾನಿಯಾಗಿರಬೇಕೆಂಬ ಅಕ್ಕನ ಸಂದೇಶ ಪ್ರತಿಜೀವಿಗೆ ಆತ್ಮಸ್ಥೈರ್ಯ ತುಂಬುತ್ತದೆ. ಅಂದಿನ ಕಾಲದಲ್ಲಿ ಮಹಿಳೆಯರು ನಾಲ್ಕು ಗೋಡೆಯಲ್ಲಿ ಬಂಧಿಯಾಗಿದ್ದರು. ಅಂತಹ ಸಂದರ್ಭದಲ್ಲಿ ಬಸವಾದಿ ಶರಣರು ಮಹಿಳೆಯರಿಗೂ ಎಲ್ಲರಂತೆ ಕಾಯಕ ಮಾಡಿ ಬದುಕುವ ಹಕ್ಕಿದೆ ಎಂದು, ಕಾಯಕ ತತ್ವ ತಿಳಿಸಿ, ಜನಮಾನಸಕ್ಕೆ ತಂದು, ಮಹಿಳಾ ಸ್ವಾತಂತ್ರ್ಯ ಕಲ್ಪಿಸಿದರು ಎಂದು ಹೇಳಿದರು.
ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಶ್ರೀ ಮಹಾಲಿಂಗ ಸ್ವಾಮಿಗಳು ನಾಟಕ ಪ್ರದರ್ಶನದ ನೇತೃತ್ವ ವಹಿಸಿದ್ದರು.ನಾಗಮ್ಮ ಬಸವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೇವೇಳೆ ಹಂಸಕವಿ ದಂಪತಿಯಿಂದ ಶ್ರೀಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ತೆಲಂಗಾಣ ರಾಜ್ಯದ ಕಲಾವಿದ ಯಜ್ಞರಿಗೆ ಶ್ರೀಮಠದಿಂದ ಸನ್ಮಾನಿಸಲಾಯಿತು. ಗೀತಾ ನಿಜಲಿಂಗಪ್ಪ ಗಂಗಾಪಾಟೀಲ ಅನುಭಾವ ನುಡಿ ನುಡಿದರು. ವಿದ್ಯಾವತಿ ಸೋಮನಾಥಪ್ಪ ಅಷ್ಟೂರೆ ಬಸವಗುರುಪೂಜೆ ನಡೆಸಿಕೊಟ್ಟರು. ಅಕ್ಕನಬಳಗದ ಶರಣೆಯರಿಂದ ತೊಟ್ಟಿಲು ಕಾರ್ಯಕ್ರಮ ನಡೆಯಿತು. ಪಾರ್ವತಿ ಧೂಮ್ಮನಸೂರೆ, ಶುಭಾಂಗಿ, ಸರಸ್ವತಿ ಸ್ವಾಮಿ ಅವರಿಂದ ವಚನ ಪಠಣ ಮತ್ತು ಗಾಯನ ನಡೆಯಿತು.
Related Articles
Advertisement