ಬೀದರ್: ರಾಜ್ಯದ ಮದರಸಾಗಳಲ್ಲಿ ಕನ್ನಡ ಕಲಿಕೆಗಾಗಿ ಪ್ರಾಧಿಕಾರದಿಂದ ಯೋಜನೆ ರೂಪಿಸಿರುವುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾದ ಅದ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ. ಅದರಂತೆ ವಾರದಲ್ಲಿ ಮೂರು ದಿನ ಕನ್ನಡ ಪಾಠ ನಡೆಸಲು ಸಿದ್ಧತೆ ನಡೆಸಲಾಗುತ್ತಿದ್ದು ಆಗಸ್ಟ್ ಎರಡನೇ ವಾರದಲ್ಲಿ ಚಾಲನೆ ನೀಡಲಿದ್ದೇವೆ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರಾಯೋಗಿಕ ಜಿಲ್ಲೆಗಳಾಗಿ ಕಲ್ಬುರ್ಗಿ, ವಿಜಯನಗರ, ರಾಯಸೂರು ಮತ್ತು ಕಲಾಸಿಪಾಳ್ಯದ ಮದರಸಾಗಳಲ್ಲಿ ಆರಂಭ ಮಾಡಲಾಗುತ್ತಿದ್ದು. ಸುಲಭ ಕನ್ನಡದ ಪಠ್ಯವನ್ನೇ ನಾನು ಸಿದ್ಧಪಡಿಸಿದ್ದೇನೆ. ಮುಸ್ಲಿಮ್ ಬಾಂಧವರಲ್ಲೇ ಇರುವ ಒಳ್ಳೆಯ ಬರಹಗಾರರಿಗೆ ತರಬೇತಿ ಕೊಟ್ಟು, ಅವರಿಂದ ತರಗತಿ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿರುವ ಶತಮಾನ ಕಂಡ ಖಾಸಗಿ ಶಾಲೆಗಳ ಅಭಿವೃದ್ಧಿಗೆ ಪ್ರಾಧಿಕಾರ ಯೋಜನೆ ಸಿದ್ಧಪಡಿಸುತ್ತಿದೆ. 150ಕ್ಕಿಂತ ಹೆಚ್ಚು ಶಾಲೆಗಳಿದ್ದು, ಸರ್ಕಾರ ಸಿಆರ್.ಎಸ್ ಅನುದಾನ, ಸ್ಥಳೀಯ ದಾನಿಗಳಿಂದ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಿ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಜಾರಿಗೆ ತಂದಿರುವ 371 (ಜೆ) ಕಾಯ್ದೆಯಿಂದ ಈ ಪ್ರದೇಶ ಸಾಕಷ್ಟು ಅಭಿವೃದ್ಧಿಯಾಗುತ್ತದೆ. ಗಡಿಯಾಚೆಗಿರುವ ಕನ್ನಡಿಗರಿಗೂ ಕಾಯ್ದೆಯ ಸವಲತ್ತುಗಳು ಸಿಗಬೇಕು. ಈ ದಿಸೆಯಲ್ಲಿ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಇಲ್ಲವಾದರೆ ಗಡಿ ರಾಜ್ಯಗಳಲ್ಲಿ ನೆಲೆಸಿರುವ ಕನ್ನಡಿಗರು ಅನಾಥರಾಗುತ್ತಾರೆ ಎಂದರು.
ಇದನ್ನೂ ಓದಿ: Belagavi: ನೀಟ್ ಹಗರಣದ ಮತ್ತೊಂದು ಪ್ರಕರಣ ಬೆಳಕಿಗೆ: ಆರೋಪಿ ಬಂಧನ