ಬೀದರ್: ಜಿಲ್ಲೆಯಲ್ಲಿ ಬುಧವಾರ ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತಗೆ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದ್ದು, ಮಧ್ಯಾಹ್ನ 2 ರವರೆಗೆ ಶೇ. 54.16 ರಷ್ಟು ಮತದಾನ ದಾಖಲಾಗಿದೆ.
ಬೆಳಗಿನ 8 ಗಂಟೆಗೆ ಮತದಾನ ಆರಂಭಗೊಂಡಿದ್ದು, ಮಧ್ಯಾಹ್ನದ ವೇಳೆಗೆ ಮತದಾನ ಬಿರುಸು ಗೊಂಡಿದೆ. ಶಿಕ್ಷಕರು ಮತ್ತು ಪದವೀಧರರು ಮತಗಟ್ಟೆಗೆ ತೆರಳಿ, ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಮತ ಕೇಂದ್ರಗಳ ಹೊರಗೆ ವಿವಿಧ ಪಕ್ಷಗಳ ಏಜೆಂಟರ್ ರು ಪೆಂಡಾಲ್ ಹಾಕಿ ಕುಳಿತಿದ್ದು ಮತದಾರರಿಗೆ ತಮ್ಮ ಅಭ್ಯರ್ಥಿಗಳ ಪರ ಕೊನೆ ಹಂತದ ಮನವೊಲಿಕೆ ಪ್ರಯತ್ನ ಕಂಡುಬಂತು.
ಬೀದರ್ ಜಿಲ್ಲೆಯಲ್ಲಿ ಒಟ್ಟು 4926 ಮತದಾರರಿದ್ದು, ಅದರಲ್ಲಿ ಪುರುಷ ಮತದಾರರು 3433. ಮಹಿಳಾ ಮತದಾರರು 1493 ಸೇರಿದ್ದಾರೆ.
ಇದನ್ನೂ ಓದಿ:ಮಾರುತಿ, ಹ್ಯುಂಡೈ ಮಾರುಕಟ್ಟೆಯ ಚೇತರಿಕೆ; ಟಾಟಾ ಕಾರು ಭರ್ಜರಿ ಬುಕ್ಕಿಂಗ್
ಜಿಲ್ಲೆಯಲ್ಲಿ ಒಟ್ಟು 34 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬೀದರ್ ತಾಲೂಕಿನಲ್ಲಿ 8, ಭಾಲ್ಕಿ ತಾಲೂಕಿನಲ್ಲಿ 7, ಔರಾದ್ ತಾಲೂಕಿನಲ್ಲಿ 6, ಬಸವಕಲ್ಯಾಣದಲ್ಲಿ 6, ಹುಮನಾಬಾದ್ ತಾಲೂಕಿನಲ್ಲಿ 7 ಮತಗಟ್ಟೆಗಳು ಇವೆ. ಒಂದು ಸಾವಿರಕ್ಕಿಂತ ಹೆಚ್ಚಿನ ಮತದಾರರು ಇರುವ ಕಾರಣಕ್ಕೆ ಬೀದರ ತಹಸೀಲ್ ಕಚೇರಿಯಲ್ಲಿ ಒಂದು ಹೆಚ್ಚುವರಿ ಮತಗಟ್ಟೆ- 42 (A) ಸ್ಥಾಪಿಸಲಾಗಿದೆ.