Advertisement
ಪ್ರತಿ ವರ್ಷ ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೊನೆಯ ಎರಡು ಸ್ಥಾನಕ್ಕೆ ಅಂಟಿಕೊಳ್ಳುತ್ತಿದ್ದ ಬೀದರ್ ನಿರಾಶೆ ಮೂಡಿಸುತ್ತಿತ್ತು. ಆದರೆ, ಈ ಬಾರಿ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಯ ಪಿಯು ಫಲಿತಾಂಶದ ಸಾಧನೆ ಅಚ್ಚರಿ ಮೂಡಿಸಿದೆ. ಕಳೆದ ವರ್ಷ ಶೇ. 55.75 ರಷ್ಟು ಅಂಕಗಳೊಂದಿಗೆ 30ನೇ ಸ್ಥಾನದಲ್ಲಿದ್ದ ಬೀದರ್ ಶೇ. 8.86ರಷ್ಟು ಹೆಚ್ಚುವರಿ ಅಂಕಗಳೊಂದಿಗೆ ಶೇ. 64.61 ರಷ್ಟು ಫಲಿತಾಂಶ ಬಂದಿದ್ದು, ಜಿಲ್ಲಾವಾರು ಫಲಿತಾಂಶದಲ್ಲಿ 18ನೇ ಸ್ಥಾನಕ್ಕೆ ಏರಿಕೆ ಕಂಡಿದೆ.
ಈ ಬಾರಿ ಜಿಲ್ಲೆಯಲ್ಲಿ ಪರೀಕ್ಷೆ ಬರೆದಿದ್ದ 14285 ವಿದ್ಯಾರ್ಥಿಗಳಲ್ಲಿ 9229 ಮಕ್ಕಳು ಉತ್ತೀರ್ಣರಾಗಿದ್ದಾರೆ. ಪ್ರತಿ ಸಲದಂತೆ ಗ್ರಾಮೀಣ ಪ್ರದೇಶದ ಪರೀಕ್ಷಾರ್ಥಿಗಳೇ ಮೇಲುಗೈ ಸಾಧಿಸಿದ್ದಾರೆ. ನಗರ ಪ್ರದೇಶದ ಒಟ್ಟು 11,373 ಮಕ್ಕಳು ಹಾಜರಾಗಿದ್ದು, ಅದರಲ್ಲಿ 7101 (ಶೇ. 62.44) ಮಕ್ಕಳು ಪಾಸಾಗಿದ್ದರೆ, ಗ್ರಾಮೀಣ ಪ್ರದೇಶದ 2912 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2128 (ಶೇ. 73.08) ಮಕ್ಕಳು ತೇರ್ಗಡೆಯಾಗಿದ್ದಾರೆ. ಇನ್ನೂ ವಿಭಾಗವಾರುದಲ್ಲಿ ವಿಜ್ಞಾನ ವಿಭಾಗಕ್ಕೆ ಶೇ. 75.65 ರಷ್ಟು ಫಲಿತಾಂಶ ಬಂದಿದ್ದರೆ, ಕಲಾ ವಿಭಾಗ ಶೇ. 48.24 ಮತ್ತು ವಾಣಿಜ್ಯ ವಿಭಾಗಕ್ಕೆ ಶೇ. 54.81 ರಷ್ಟು ಫಲಿತಾಂಶ ಇದೆ. ಪರೀಕ್ಷೆ ಬರೆ ವಿಜ್ಞಾನ ವಿಭಾಗದ 7951 ಮಕ್ಕಳಲ್ಲಿ 6015 ಜನ ಉತ್ತೀರ್ಣರಾಗಿದ್ದರೆ ಕಲಾ ವಿಭಾಗ 3922ರಲ್ಲಿ 1892 ಪರೀಕ್ಷಾರ್ಥಿ ಹಾಗೂ ವಾಣಿಜ್ಯ ವಿಭಾಗದಲ್ಲಿ 2412 ರಲ್ಲಿ 1322 ಮಕ್ಕಳು ತೇರ್ಗಡೆಯಾಗಿದ್ದಾರೆ.
Related Articles
Advertisement
ಜಿಲ್ಲೆಯಲ್ಲಿ ಫಲಿತಾಂಶದ ಏರಿಳಿತ…ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಪಿಯು ಫಲಿತಾಂಶದಲ್ಲಿ ಏರಿಳಿತ ಕಂಡಿದೆ. 2010-11ರಲ್ಲಿ ಶೇ. 45ರಷ್ಟು, 2011-12ರಲ್ಲಿ ಶೇ. 40.32ರಷ್ಟು, 2012- 13ರಲ್ಲಿ ಶೇ. 44.24ರಷ್ಟು, 2013-14ರಲ್ಲಿ ಶೇ. 44.95ರಷ್ಟು, 2015ರಲ್ಲಿ ಶೇ. 54.4, 2016ರಲ್ಲಿ ಶೇ. 52.07, 2017ರಲ್ಲಿ ಶೇ. 42.05, 2018ರಲ್ಲಿ ಶೇ. 52.63 ಮತ್ತು 2019ರಲ್ಲಿ ಶೇ. 55.78ರಷ್ಟು ಅಂಕ ಪಡೆದಿತ್ತು. ಈ ಬಾರಿ ಶೇ. 8.86ರಷ್ಟು ಅಂಕ ಹೆಚ್ಚಿಸಿಕೊಂಡು ಸಾಧನೆ ಮಾಡಿದೆ. ಪಿಯುಸಿಯಲ್ಲಿ ಬೀದರ್ ಜಿಲ್ಲೆಗೆ ಉತ್ತಮ ಫಲಿತಾಂಶ ಬಂದಿದ್ದು, ಇದಕ್ಕೆ ಯೋಜನಾ ಬದ್ಧ ಕಾರ್ಯಕ್ರಮ, ತಂಡದ ಪರಿಶ್ರಮದ ಫಲವೇ ಕಾರಣ. ಫಲಿತಾಂಶದಲ್ಲಿ ಸುಧಾರಣೆ ನಿರೀಕ್ಷೆ ಇತ್ತು. ಆದರೆ, ಜಿಲ್ಲಾವಾರು ಪಟ್ಟಿಯಲ್ಲಿ ೧೮ನೇ ಸ್ಥಾನಕ್ಕೆ ಜಿಗಿಯುತ್ತದೆ ಅಂದುಕೊಂಡಿರಲಿಲ್ಲ. ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಅಭಿನಂದನೆಗಳು. – ರಮೇಶ ಬೇಜಗಂ, ಡಿಡಿಪಿಯು, ಬೀದರ್