Advertisement

ಅಧ್ಯಕ್ಷ ಗಾದಿಗೇರಲು ಅರ್ಹರ ಪೈಪೋಟಿ

05:54 PM Mar 17, 2020 | Suhan S |

ರಾಮನಗರ: ತಾಲೂಕಿನ ಬಿಡದಿ ಪುರಸಭೆ ಎರಡನೇ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ಪಟ್ಟಿ ಪ್ರಕಟವಾಗಿದೆ. ಬೆನ್ನಲ್ಲೆ ರಾಜಕರಣ ಗರಿಗೆದರಿದೆ. ಅಧ್ಯಕ್ಷ ಸ್ಥಾನ ಬಿಸಿಎಂ (ಎ) ವರ್ಗಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.

Advertisement

14 ತಿಂಗಳುಗಳ ಬಳಿಕ ಮೀಸಲು ಪಟ್ಟಿ ಪ್ರಕಟ: 2015ರಲ್ಲಿ ಬಿಡದಿ ಗ್ರಾಮ ಪಂಚಾಯಿತಿ ಯನ್ನು ಸರ್ಕಾರ ಮೇಲ್ದರ್ಜೆಗೇರಿಸಿ ಪುರಸಭೆ ರಚನೆಯಾಗಿದೆ. 23 ವಾರ್ಡ್‌ಗಳನ್ನು ರಚಿಸಿಲಾಗಿದೆ. 2016ರ ಮೇನಲ್ಲಿ ನಡೆದ ಚುನಾವಣೆಯಲ್ಲಿ 12 ಮಂದಿ ಜೆಡಿಎಸ್‌ ಮತ್ತು 11 ಕಾಂಗ್ರೆಸ್‌ ಸದಸ್ಯರು ಗೆಲುವು ಸಾಧಿಸಿದ್ದರು. ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆಗೆ ಮತ್ತು ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಮೊದಲ ಅವಧಿ 2018ರ ಡಿಸೆಂಬರ್‌ 20ಕ್ಕೆ ಮುಕ್ತಾಯವಾಗಿದೆ.

ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿ ಮಾಡಿ ಸರ್ಕಾರ ಆದೇಶ ಮಾಡಿತು. ಆದರೆ ಕೆಲವರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ಎಲ್ಲ ಗೊಂದಲಗಳು ಪರಿಹಾರಗೊಂಡಿದ್ದು, 14 ತಿಂಗಳ ನಂತರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಗಳಿಗೆ ಮೀಸಲು ಅಧಿಕೃತವಾಗಿದೆ. ಬೆನ್ನಲ್ಲೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಆಕಾಂಕ್ಷಿಗಳು ಪುಟಿದೆದ್ದಿದ್ದಾರೆ. ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಕೊರೊನಾ ವೈರಸ್‌ ಆತಂಕದ ನಡುವೆಯೂ ರಾಜಕರಣ ಗರಿಗೆದರಿದೆ.

ಸಂಕೀರ್ಣ ರಾಜಕರಣ: 2018ರಲ್ಲಿ ಬಿಡದಿ ಪುರಸಭೆಗೆ ಚುನಾವಣೆ ನಡೆದ ವೇಳೆ ಹಾಲಿ ಶಾಸಕ ಎ. ಮಂಜುನಾಥ್‌ ಕಾಂಗ್ರೆಸ್‌ನಲ್ಲಿದ್ದರು. ಮಾಜಿ ಶಾಸಕ ಎಚ್‌.ಸಿ. ಬಾಲ ಕೃಷ್ಣ ಜೆಡಿಎಸ್‌ನಲ್ಲಿದ್ದರು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಬ್ಬರು ನಾಯಕರು ತಮ್ಮ ಪಕ್ಷ ನಿಷ್ಠೆ ಬದಲಿಸಿದ್ದರಿಂದ ಬಿಡದಿ ಪುರಸಭೆಯಲ್ಲಿಯೂ ಎರಡೂ ಪಕ್ಷಗಳ ಸದಸ್ಯರು ತಮ್ಮ ನಿಷ್ಠೆ ಬದಲಿಸಿದ್ದಾರೆ. ಸದ್ಯ 6 ಕಾಂಗ್ರೆಸ್‌, ಜೆಡಿಎಸ್‌ ಕಡೆಗೆ ಮತ್ತು 3 ಜಡಿಎಸ್‌ ಸದಸ್ಯರು ಕಾಂಗ್ರೆಸ್‌ ಜೊತಗಿದ್ದಾರೆ. ಬಿಡದಿ ಪುರಸಭೆ ರಾಜಕರಣ ಸಂಕೀರ್ಣವಾಗಿದ್ದು, ಅಧ್ಯಕ್ಷ ಸ್ಥಾನ ಯಾವ ಪಕ್ಷದ ತಕ್ಕೆಗೆ ಬೀಳಲಿದೆ ಎಂಬ ಕುತೂಹಲ ಮನೆ ಮಾಡಿದೆ.

ಜೆಡಿಎಸ್‌ನಲ್ಲಿ ಬಂಡಾಯದ ವಾಸನೆ!: ಜೆಡಿಎಸ್‌ ನಿಷ್ಠಾವಂತರಾಗಿದ್ದರೂ ತಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದು ಮುನಿಸಿ ಕೊಂಡಿರುವ ಕೆಲವು ಸದಸ್ಯರು ಬಂಡಾಯ ಏಳುವ ಲಕ್ಷಣಗಳು ಕಾಣಿಸಿವೆ. ಹೀಗಾಗಿ ಪಕ್ಷದಲ್ಲಿ ಸದಸ್ಯರು ಬಂಡಾಯ ಏಳುವ ಸಾಧ್ಯತೆ ಗಳು ಹೆಚ್ಚಿವೆ ಎನ್ನಲಾಗಿದೆ. ಪುರಸಭೆಯನ್ನು ಜೆಡಿಎಸ್‌ ತಕ್ಕೆಯಲ್ಲೇ ಉಳಿಸಿಕೊಳ್ಳುವ ಪ್ರಯಾಸವನ್ನು ಶಾಸಕ ಎ.ಮಂಜು ಪಡಬೇಕಾಗಿದೆ. ಸದ್ಯದ ಇಂತಹ ಬಂಡಾಯದ ಲಾಭವನ್ನು ಪಡೆದುಕೊಳ್ಳುವಲ್ಲಿ ಪರಿಸ್ಥಿತಿ ಲಾಭ ಪಡೆಯಲು ಮಾಜಿ ಶಾಸಕರು ತಮ್ಮ ಪ್ರಭಾವ ಬೀರಬಹುದು ಎನ್ನಲಾಗಿದೆ. ಕಾಂಗ್ರೆಸ್‌ ಪ್ರಮುಖರು ಜಿಲ್ಲೆಯಲ್ಲಿ ಇನ್ನು ಒಪ್ಪಂದದ ರಾಜಕರಣ ಇಲ್ಲ ಎಂದು ಹೇಳಿದ್ದಾರೆ.

Advertisement

ಹೀಗಾಗಿ ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಮತ್ತು ಮಾಜಿ ಸಚಿವ ಡಿಕೆಶಿ ಅಭಿಪ್ರಾಯಗಳು ಏನಾಗ ಬಹುದು ಎಂಬ ಕುತೂಹಲ ಜಿಲ್ಲೆಯಲ್ಲಿ ಮನೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next