Advertisement
ಬಿಡದಿ ಹೋಬಳಿಯ ಅಬ್ಬನಕುಪ್ಪೆಯಲ್ಲಿ ಟಿಕೆಎಪಿ (ಟಯೋಟಾ ಕಿರ್ಲೋಸ್ಕ ರ್ ಆಟೋ ಪಾರ್ಟ್ಸ್) ವತಿಯಿಂದ ಸುಮಾರು 45ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರು ನೂತನ ಕೊಠಡಿಗಳ ಲೋಕಾರ್ಪಣೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಬಿಡದಿಯಲ್ಲಿರುವ ಕೈಗಾರಿಕೆಗಳ ಸಾಮಾಜಿಕ ಕಾರ್ಯ ರಾಜ್ಯದ ಇತರೆ ಪ್ರದೇಶಗಳ ಕೈಗಾರಿಕೆಗಳಿಗೆ ಮಾದರಿಯಾಗಿದ್ದು, ಇಲ್ಲಿರುವ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗಾವಕಾಶ ನೀಡುವುದರ ಜೊತೆಗೆ ಶೈಕ್ಷಣಿಕ ಅಭಿವೃದ್ಧಿಗೂ ಕೊಡುಗೆ ನೀಡುತ್ತಿವೆ ಎಂದರು.
Related Articles
Advertisement
ಟಿಕೆಎಪಿ (ಟಯೋಟಾ ಕಿರ್ಲೋಸ್ಕರ್ ಆಟೋ ಪಾಟ್ಸì) ವ್ಯವಸ್ಥಾಪಕ ನಿರ್ದೇಶಕ ಮೋಹನ್ ಕುಮಾರ್ ಮಾತನಾಡಿ, ಟೊಯೋಟಾ ಸಂಸ್ಥೆ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ನಮ್ಮ ಸಂಸ್ಥೆ ಯಾವುದೇ ಕೆಲಸವನ್ನು ಸಿದ್ಧತೆ ಮತ್ತು ಬದ್ಧತೆ ಇಲ್ಲದೆ ಮಾಡುವುದಿಲ್ಲ. ಸರ್ಕಾರಿ ಶಾಲೆಗಳ ಉಳಿವಿಗಾಗಿ ಬಿಡದಿ ಕೈಗಾರಿಕೆಗಳ ಸಂಘವು ಅವಿರತವಾಗಿ ಶ್ರಮಿಸುತ್ತಿದೆ ಎಂದರು.
ಟಿಕೆಎಪಿ ವ್ಯವಸ್ಥಾಪಕ ಪ್ರಸನ್ನ ಕುರ್ಮಾ ಮಾತನಾಡಿದರು. ಕೊಠಡಿಗಳ ಕೀಲಿ ಕೈಗಳನ್ನು ಶಾಲೆಯ ಮುಖ್ಯಸ್ಥರಿಗೆ ನೀಡಲಾಯಿತು. ಬಾಷ್ ಕಂಪನಿ ನಿರ್ದೇಶಕ ಡಾ.ಪುಂಡಲೀಕ ಕಾಮತ್, ಬಿಡದಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ನರಸಿಂಹಯ್ಯ, ಬಿಡದಿ ಪುರಸಭಾ ಸದಸ್ಯರಾದ ಸಿ.ಲೋಕೇಶ್, ವೆಂಕಟೇಶಮ್ಮ ರಾಮಕೃಷ್ಣಯ್ಯ, ರಾಕೇಶ್, ಮಹೀಪತಿ, ರಮೇಶ್ ಕುಮಾರ್, ಸಂತೋಷ್, ಸ್ಥಳೀಯ ಮುಖಂಡರಾದ ಬೆಟ್ಟಸ್ವಾಮಿ, ಸರ್ಕಾರಿ ಪ್ರಾಥಮಿಕ ಮುಖ್ಯಶಿಕ್ಷಕಿ ಹಾಗೂ ಶಿಕ್ಷಕ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.