Advertisement

Bidadi; ತೋಟದ ಮನೆಯಲ್ಲಿ ಮಾನವರ ತಲೆಬುರುಡೆಗಳು ಪತ್ತೆ!

11:30 AM Mar 11, 2024 | Team Udayavani |

ರಾಮನಗರ: ಬಿಡದಿ ಬಳಿಯ ಜೋಗರದೊಡ್ಡಿ ಗ್ರಾಮದಲ್ಲಿ 20 ಕ್ಕೂ ಹೆಚ್ಚು ಮನುಷ್ಯನ ತಲೆ ಬುರುಡೆಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ತೋಟದ ಮನೆಯಲ್ಲಿ ತಲೆಬುರುಡೆಗಳು ಪತ್ತೆಯಾಗಿದೆ.

Advertisement

ಬಲರಾಮ್ ಎಂಬ ವ್ಯಕ್ತಿ ಮೇಲೆ ಬುರುಡೆ ಸಂಗ್ರಹ ಆರೋಪವಿದ್ದು, ಮಾಟಮಂತ್ರಕ್ಕೆ ಇವುಗಳನ್ನು ಬಳಕೆ ಮಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬಲರಾಮ್ ರಾತ್ರಿ ವೇಳೆ ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದ. ಇದನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಬಿಡದಿ ಪೊಲೀಸರು ಸ್ಮಶಾನಕ್ಕೆ ಎಂಟ್ರಿ ಕೊಟ್ಟ ಬಲರಾಮ್ ನನ್ನು ಬಂಧಿಸಿದ್ದಾರೆ.

ವಿಚಾರಣೆಯ ವೇಳೆ ಬಲರಾಮ್, ತಾತನ ಕಾಲದಿಂದಲೂ ಬುರುಡೆ ಪೂಜೆ ಮಾಡುತ್ತಿದ್ದೇವೆ ಎಂದಿದ್ದಾನೆ. ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next