ವಾಷಿಂಗ್ಟನ್: ಭಾರತದ ಕುರಿತು ತಾರತಮ್ಯದ ವರದಿಯನ್ನು ಪ್ರಕಟಿಸುತ್ತಿರುವ ದಿ ವಾಷಿಂಗ್ಟನ್ ಪೋಸ್ಟ್ ಸೇರಿದಂತೆ ಅಮೆರಿಕದ ಮುಖ್ಯವಾಹಿನಿಯ ಮಾಧ್ಯಮಗಳ ವಿರುದ್ಧ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಇರಾನ್ ಹಿಜಾಬ್ ಪ್ರತಿಭಟನೆ: ಅಣ್ಣನ ಮೃತ ದೇಹದ ಮುಂದೆ ಕೂದಲು ಕತ್ತರಿಸಿ ತಂಗಿಯ ಆಕ್ರೋಶ..
“ನಾನು ಇಲ್ಲಿನ ಮಾಧ್ಯಮಗಳನ್ನು ಗಮನಿಸಿದ್ದೇನೆ. ಕೆಲವು ಪತ್ರಿಕೆಗಳ ಬಗ್ಗೆ ನಿಮಗೂ ತಿಳಿದಿದೆ. ಈ ನಗರ (ವಾಷಿಂಗ್ಟನ್ ಪೋಸ್ಟ್)ದ ಪತ್ರಿಕೆಯೊಂದು ಸೇರಿದಂತೆ ಅಮೆರಿಕದ ಪತ್ರಿಕೆಗಳು ಭಾರತದ ಬಗ್ಗೆ ತಾರತಮ್ಯದ ವರದಿ, ಲೇಖನ ಪ್ರಕಟಿಸುತ್ತಿದೆ” ಎಂದು ಜೈಶಂಕರ್ ಅಮೆರಿಕದಲ್ಲಿನ ಭಾರತೀಯ ಅಮೆರಿಕನ್ ರನ್ನು ಉದ್ದೇಶಿಸಿ ಮಾತನಾಡುತ್ತ ಅಸಮಧಾನ ಹೊರಹಾಕಿರುವುದಾಗಿ ವರದಿ ತಿಳಿಸಿದೆ.
ಅಮೆರಿಕದ ಪ್ರತಿಷ್ಠಿತ ವಾಷಿಂಗ್ಟನ್ ಪೋಸ್ಟ್ ದೈನಿಕ ವಾಷಿಂಗ್ಟನ್ ಡಿ.ಸಿಯಿಂದ ಪ್ರಕಟವಾಗುತ್ತಿದ್ದು, ಈ ಪತ್ರಿಕೆ ಪ್ರಸ್ತುತ ಅಮೆಜಾನ್ ಮಾಲೀಕ ಜೆಫ್ ಬೆಜೋಸ್ ಒಡೆತನದಲ್ಲಿದೆ.
ಅಮೆರಿಕದಲ್ಲಿ ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ತಪ್ಪು ಮಾಹಿತಿ ನೀಡಲಾಗುತ್ತಿದೆಯೇ ಎಂದು ಜೈಶಂಕರ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಭಯೋತ್ಪಾದಕ ಘಟನೆ ನಡೆದಾಗ, ಅಲ್ಲಿ ಸಾವನ್ನಪ್ಪಿರುವ ವ್ಯಕ್ತಿ ಯಾವ ಧರ್ಮಕ್ಕೆ ಸೇರಿದ್ದಾನೆ ಎಂಬುದು ಮುಖ್ಯವಲ್ಲ. ಒಂದು ವೇಳೆ ಭಾರತೀಯ ಸೈನಿಕರು ಅಥವಾ ಪೊಲೀಸರು, ನಾಗರಿಕರು, ಸರ್ಕಾರಿ ಅಧಿಕಾರಿಗಳು ಘಟನೆಯಲ್ಲಿ ಜೀವ ಕಳೆದುಕೊಂಡಾಗ ಯಾವ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತೀರಿ ಎಂದು ಹೇಳಿದರು.