Advertisement

Wikipedia: ಪಕ್ಷಪಾತ, ತಪ್ಪು ಮಾಹಿತಿ ದೂರು: ವಿಕಿಪೀಡಿಯಾಗೆ ಕೇಂದ್ರದಿಂದ ನೋಟಿಸ್‌

10:51 PM Nov 05, 2024 | Team Udayavani |

ನವದೆಹಲಿ: ವಿಕಿಪೀಡಿಯಾದಲ್ಲಿ ಪ್ರಕಟವಾಗುವ ಲೇಖನಗಳು ಪಕ್ಷಪಾತ ಮತ್ತು ಅಸ್ಪಷ್ಟತೆಯಿಂದ ಕೂಡಿರುತ್ತವೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರ ವಿಕಿಪೀಡಿಯಾಗೆ ನೋಟಿಸ್‌ ನೀಡಿದೆ.

Advertisement

ಅಲ್ಲದೇ ವಿಕಿಪೀಡಿಯಾವನ್ನು ಮಧ್ಯವರ್ತಿ ಎನ್ನುವ ಬದಲು ಪ್ರಕಾಶಕ ಎಂದೇಕೆ ಪರಿಗಣಿಸಬಾರದು ಎಂದೂ ಪ್ರಶ್ನಿಸಿದೆ. ಎಎನ್‌ಐ ಕೇಂದ್ರ ಸರ್ಕಾರದ ಪರವಾಗಿ ಸುದ್ದಿ ಪ್ರಕಟಿಸುವ ಸಂಸ್ಥೆ ಎಂದು ವಿಕಿಪೀಡಿಯಾದಲ್ಲಿ ಪ್ರಕಟಿಸಲಾಗಿತ್ತು. ಈ ಬಗ್ಗೆ ಎಎನ್‌ಐ ಕಾನೂನು ಕ್ರಮಕ್ಕೆ ಮುಂದಾಗಿತ್ತು.

ಈ ಪ್ರಕರಣದಲ್ಲಿ ವಿಕಿಪೀಡಿಯಾ ಪೇಜ್‌ ತಿದ್ದಿದವರು ಯಾರು ಎಂಬುದನ್ನು ಸ್ಪಷ್ಟಪಡಿಸದ್ದಕ್ಕೆ ದೆಹಲಿ ಹೈಕೋರ್ಟ್‌ ಸಹ ವಿಕಿಪಿಡೀಯಾವನ್ನು ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ಪೇಜ್‌ ಮುಚ್ಚಿಸುವ ಎಚ್ಚರಿಕೆಯನ್ನೂ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next