Advertisement
ತಾಲೂಕಿನ ನಂದಿ ಹೋಬಳಿಯ ಗೊಲ್ಲಹಳ್ಳಿ ಗ್ರಾಪಂನ ನಾಸ್ತಿಮ್ಮನಹಳ್ಳಿ ಗ್ರಾಮದಲ್ಲಿ “ನಮ್ಮ ನಡೆ ಗ್ರಾಮ ಕಡೆ” ಕಾರ್ಯಕ್ರಮದಲ್ಲಿ ಮಾತನಾಡಿದರು.
Related Articles
Advertisement
ಕ್ಷೇತ್ರದ ಜನರ ಮನೆ ಮಗನಾಗಿ ಸೇವೆ ಸಲ್ಲಿಸಲು ಸದಾ ಸಿದ್ಧನಿದ್ದೇನೆ ಪ್ರತಿಯೊಂದು ಹಳ್ಳಿ ಮತ್ತು ನಗರ ಪ್ರದೇಶವನ್ನು ಪಕ್ಷಾತೀತವಾಗಿ ಮತ್ತು ಜಾತ್ಯತೀತವಾಗಿ ಅಭಿವೃದ್ಧಿಗೊಳಿಸುವುದು ನನ್ನ ಮುಖ್ಯ ಗುರಿ ಅದಕ್ಕಾಗಿ ಎಲ್ಲರೂ ಸಹಕಾರ ಮತ್ತು ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಮಾಜಿ ಶಾಸಕಿ ಅನುಸೂಯಮ್ಮ ಮಾತನಾಡಿ, ಕ್ಷೇತ್ರದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಕೆಪಿಸಿಸಿ ಸದಸ್ಯ ವಿನಯ್ ಎನ್ ಶ್ಯಾಮ್ ಅವರಿಗೆ ಎಲ್ಲಾ ರೀತಿಯ ಸಹಕಾರ ಮತ್ತು ಬೆಂಬಲವನ್ನು ನೀಡಬೇಕೆಂದು ಗ್ರಾಮಸ್ಥರಿಗೆ ಮನವಿ ಮಾಡಿ ಮುಂದಿನ ಚುನಾವಣೆಯಲ್ಲಿ ಇವರಿಗೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.
ಕೆಪಿಸಿಸಿ ಕಾರ್ಮಿಕ ವಿಭಾಗ ನಾರಾಯಣಸ್ವಾಮಿ, ಕಾಂಗ್ರೆಸ್ ಹಿರಿಯ ಮುಖಂಡ ವಕೀಲ ನಾರಾಯಣಸ್ವಾಮಿ,ಮಾಜಿ ಜಿಪಂ ಸದಸ್ಯೆ ನಾರಾಯಣಮ್ಮ, ಮಂಗಳ ಪ್ರಕಾಶ್, ಮಹಿಳಾ ನಾಯಕಿ ಶಾಂತಿ,ಕಲಾವತಿ, ಶಾಹೀನ, ಲಕ್ಷ್ಮಣ್, ಸತೀಶ್, ಮಹೇಂದ್ರ ಗಜೇಂದ್ರ, ನಾಗೇಶ್, ಹರೀಶ್, ಸಂತೋಷ್, ಮಧುಸ್ವಾಮಿ ಹಾಗೂ ಗೊಲ್ಲಹಳ್ಳಿ ಗ್ರಾಪಂನ ಕಾಂಗ್ರೆಸ್ ಮುಖಂಡರಿದ್ದರು.
ಮೂಲ ಸೌಕರ್ಯ ಒದಗಿಸಲು ಪಕ್ಷ ಸಿದ್ಧಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗಡಿ ಗ್ರಾಮವಾಗಿರುವ ಗೊಲ್ಲಹಳ್ಳಿ ಗ್ರಾಪಂನ ನಾಸ್ತಿಮ್ಮನಹಳಿ ಗ್ರಾಮವನ್ನು ಸಂಪೂರ್ಣವಾಗಿ ಕ್ಷೇತ್ರದ ಶಾಸಕರು ಹಾಗೂ ಗ್ರಾಪಂ ಸದಸ್ಯರು ಕಡೆಗಣಿಸಿದ್ದಾರೆ. ಇಲ್ಲಿನ ಜನ ಮೂಲ ಸೌಲಭ್ಯಗಳಿಗಾಗಿ ಪರದಾಡುವಂತಾಗಿದೆ. ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಸದಾಸಿದ್ಧವಾಗಿದೆ ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸಲು ಪಕ್ಷ ಹೋರಾಟ ನಡೆಸಲಿದೆ ಎಂದು ಕೆಪಿಸಿಸಿ ಸದಸ್ಯ ವಿನಯ್ ಎನ್ ಶ್ಯಾಮ್ ಹೇಳಿದರು.