Advertisement

ಬಿಐಎಎಲ್‌: ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ

12:35 AM Apr 23, 2019 | Team Udayavani |

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ‌ (ಬಿಐಎಎಲ್‌) ಪ್ರಸಕ್ತ ಹಣಕಾಸು ವರ್ಷದ ಫ‌ಲಿತಾಂಶ ಪ್ರಕಟಗೊಂಡಿದ್ದು, 2018-19ರ ವರ್ಷಾಂತ್ಯಕ್ಕೆ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ. 33.30ರಷ್ಟು ಏರಿಕೆ ಕಂಡುಬಂದಿದೆ.

Advertisement

ಕಳೆದೊಂದು ವರ್ಷದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 33.30 ದಶಲಕ್ಷ ಪ್ರಯಾಣಿಕರು ಸಂಚರಿಸಿದ್ದು, 2.40 ಲಕ್ಷ ವಿಮಾನಗಳು ಹಾರಾಟ ನಡೆಸಿವೆ. ಈ ಮೂಲಕ ಪ್ರಯಾಣಿಕರ ಸಂಖ್ಯೆ ಶೇ. 33.30ರಷ್ಟು ಹಾಗೂ ವಿಮಾನಗಳ ಸಂಚಾರದಟ್ಟಣೆಯಲ್ಲಿ ಶೇ. 21.8ರಷ್ಟು ವೃದ್ಧಿಯಾಗಿದೆ.

ಒಟ್ಟಾರೆ ಪ್ರಯಾಣಿಕರಲ್ಲಿ ದೇಶೀಯ ವಿಮಾನಗಳಲ್ಲಿ 28.82 ಹಾಗೂ ಅಂತಾರಾಷ್ಟ್ರೀಯ ವಿಮಾನಗಳಲ್ಲಿ 4.48 ದಶಲಕ್ಷ ಮಂದಿ ಪ್ರಯಾಣಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ದೇಶೀಯ 23.09 ಹಾಗೂ ಅಂತಾರಾಷ್ಟ್ರೀಯ 3.81 ಸೇರಿದಂತೆ 26.91 ದಶಲಕ್ಷ ಜನ ಸಂಚರಿಸಿದ್ದರು. ಅಲ್ಲದೆ, ಈ ಅವಧಿಯಲ್ಲಿ ಸರಕು ಸಾಗಣೆಯಲ್ಲಿ ಕೂಡ ಶೇ. 11.0ರಷ್ಟು ಪ್ರಗತಿ ಸಾಧಿಸಿದೆ ಎಂದು ಬಿಐಎಎಲ್‌ ತಿಳಿಸಿದೆ.

ಬಿಐಎಎಲ್‌ ಪ್ರಯಾಣಿಕರಿಗೆ ಪೂರಕವಾದ ಹಲವು ಕ್ರಮಗಳನ್ನು ಕೈಗೊಂಡಿದ್ದು, ಕೇವಲ 45 ಸೆಕೆಂಡ್‌ಗಳಲ್ಲಿ ಬ್ಯಾಗೇಜ್‌ ಚೆಕ್‌ಇನ್‌ ವ್ಯವಸ್ಥೆಯನ್ನು ಈ ಅವಧಿಯಲ್ಲಿ ಅಳವಡಿಸಲಾಯಿತು. ಅಟೋಮೇಟೆಡ್‌ ಟ್ರೇರಿಟ್ರೀವಲ್‌ ಇರುವ ಸ್ಮಾರ್ಟ್‌ ಸೆಕ್ಯುರಿಟಿ ಲೇನ್‌ಗಳು ಸೇರಿದಂತೆ ಹಲವು ಮೈಲುಗಲ್ಲುಗಳಿಗೆ ಈ ವರ್ಷ ಸಾಕ್ಷಿಯಾಯಿತು ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಮರಾರ್‌ ತಿಳಿಸಿದ್ದಾರೆ.

ಅಲ್ಲದೆ, ಆಗಾಗ್ಗೆ ಮಂಜಿನಿಂದಾಗಿ ವಿಮಾನಗಳ ಸೇವೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಂಬಂಧದ ಅಧ್ಯಯನಕ್ಕಾಗಿ ಜವಾಹರಲಾಲ್‌ ನೆಹರು ಮುಂದುವರಿದ ವಿಜ್ಞಾನ ಸಂಶೋಧನಾ ಕೇಂದ್ರದೊಂದಿಗೆ 20 ತಿಂಗಳ ಒಪ್ಪಂದ ಕೂಡ ಮಾಡಿಕೊಳ್ಳಲಾಯಿತು. ಈಗ 13 ಸಾವಿರ ಕೋಟಿ ವೆಚ್ಚದಲ್ಲಿ ಬಿಐಎಎಲ್‌ ವಿಸ್ತರಣೆ ಆಗುತ್ತಿದ್ದು, 2,55,000 ಚ.ಮೀ.ನಲ್ಲಿ ಟರ್ಮಿನಲ್‌-2 ನಿರ್ಮಾಣ ಆಗುತ್ತಿದೆ.

Advertisement

2021ರ ವೇಳೆಗೆ ಟರ್ಮಿನಲ್‌-2 ಕಾರ್ಯಾರಂಭಗೊಳ್ಳಲಿದ್ದು, ಈ ನಿಟ್ಟಿನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಎರಡು ಹಂತಗಳಲ್ಲಿ ಉದ್ದೇಶಿತ ಟರ್ಮಿನಲ್‌ ನಿರ್ಮಾಣಗೊಳ್ಳಲಿದ್ದು, ಮೊದಲ ಹಂತದಲ್ಲಿ 25 ದಶಲಕ್ಷ ಪ್ರಯಾಣಿಕರಿಗೆ ಮತ್ತು 2ನೇ ಹಂತದಲ್ಲಿ 20 ದಶಲಕ್ಷ ಪ್ರಯಾಣಿಕರ ಸಾಮರ್ಥ್ಯ ಹೆಚ್ಚಿಸಲಿದೆ ಎಂದು ಹೇಳಿದರು.

ಪ್ರಯಾಣಿಕರ ಸಂಚಾರ (ದಶಲಕ್ಷಗಳಲ್ಲಿ) 2018-19 2017-18 ಪ್ರಗತಿ (ಶೇಕಡಾವಾರು)
-ದೇಶೀಯ 28.82 23.09 24.8
-ಅಂತಾರಾಷ್ಟ್ರೀಯ 4.48 3.81 17.5
-ಒಟ್ಟಾರೆ 33.30 26.91 23.8

ವಿಮಾನಗಳ ಸಂಚಾರ 2018-19 2017-18 ಪ್ರಗತಿ (ಶೇಕಡಾವಾರು)
-ದೇಶೀಯ 2,11,795 1,72,665 22.7
-ಅಂತಾರಾಷ್ಟ್ರೀಯ 2,11,795 24,665 15.4
-ಒಟ್ಟಾರೆ 2,40,251 1,97,330 21.8

Advertisement

Udayavani is now on Telegram. Click here to join our channel and stay updated with the latest news.

Next