Advertisement

ರಂಗಾಯಣ ಅಂಗಳದಲ್ಲಿ ಬಹುರೂಪಿ ಅನಾವರಣ

02:34 PM Feb 14, 2020 | Suhan S |

ಮೈಸೂರು: ಮೈಸೂರು ರಂಗಾಯಣದ ವಾರ್ಷಿಕ ಉತ್ಸವ; ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ- 2020ಕ್ಕೆ ಕಲಾಮಂದಿರ ಆವರಣ ಸಜ್ಜುಗೊಂಡಿದೆ.

Advertisement

ಶುಕ್ರವಾರದಿಂದ 19ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದ್ದು, ಮಹಾತ್ಮಗಾಂಧಿ ಅವರ 150ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ಗಾಂಧಿಪಥ ಶೀರ್ಷಿಕೆಯಡಿ ನಾಟಕೋತ್ಸವ ನಡೆಯಲಿದೆ. ಶುಕ್ರವಾರ ಸಂಜೆ 5.30ಕ್ಕೆ ಹಿರಿಯ ನಟ ಅನಂತನಾಗ್‌ ನಾಟಕೋತ್ಸವ ಉದ್ಘಾಟಿಸಲಿದ್ದಾರೆ.

ಫೆ.14ರಿಂದ ಆರು ದಿನಗಳ ಕಾಲ ಐದು ವೇದಿಕೆಗಳಲ್ಲಿ ಭಾರತದ ಇತರೆ ಭಾಷೆಗಳ 11 ನಾಟಕಗಳು, ಕನ್ನಡದ ಹತ್ತು ನಾಟಕಗಳಲ್ಲದೇ, 2 ಯಕ್ಷಗಾನ ಪ್ರಸಂಗಗಳು, ಒಂದು ಬಯಲಾಟ ಹಾಗೂ ಒಂದು ತೊಗಲು ಗೊಂಬೆಯಾಟಗಳು ಪ್ರದರ್ಶನಗೊಳ್ಳಲಿವೆ. ರಂಗಾಯಣ ರೆಪರ್ಟರಿ ಪ್ರಸ್ತುತಪಡಿಸುವ ಗಾಂಧಿ ವರ್ಸಸ್‌ ಗಾಂಧಿ, ಮೈಸೂರಿನ ಹವ್ಯಾಸಿ ಕಲಾವಿದರು ಪ್ರಸ್ತುತಪಡಿಸುವ ಮಹಾತ್ಮ ಹಾಗೂ ಮುಂಬೈನ ವರ್ಕಿಂಗ್‌ ಟೈಟಲ್‌ ಪ್ರಸ್ತುತಪಡಿಸುವ ಮಹದೇವ ಭಾಯಿ ಸೇರಿದಂತೆ ಗಾಂಧಿ ಬಗೆಗಿನ ಮೂರು ನಾಟಕಗಳು ಸೇರಿ 25 ನಾಟಕಗಳು ಪ್ರದರ್ಶನ ಕಾಣಲಿವೆ.

ಕನ್ನಡದ ಆಧುನಿಕ ರಂಗಭೂಮಿಯಲ್ಲಿ ಈವರೆಗೆ 700ಕ್ಕೂ ಹೆಚ್ಚು ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕ ಫೆ.15ರಂದು ಸಂಜೆ 7.30ಕ್ಕೆ ಕಲಾಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ವೃತ್ತಿ ರಂಗಭೂಮಿಯನ್ನು ಗೌರವಿಸುವ ದೃಷ್ಟಿಯಿಂದ ಹಿರಿಯ ರಂಗ ಸಂಗೀತ ನಿರ್ದೇಶಕ ಪರಮಶಿವನ್‌ ಸಂಗೀತ ನೀಡಿರುವ ಮೈಸೂರಿನ ನಟನ ರಂಗಶಾಲೆಯವರಿಂದ ಸುಭದ್ರ ಕಲ್ಯಾಣ ನಾಟಕ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ. ಫೆ.19ರಂದು ಕವಿಕಟ್ಟೆಯಲ್ಲಿ ಸಂಜೆ 4ಗಂಟೆಗೆ ಕವಿ ಕಂಡ ಗಾಂಧಿ; ಹಿರಿಯ ಕವಿಗಳು ಗಾಂಧಿ ಕುರಿತು ರಚಿಸಿದ ಕವನಗಳನ್ನು ರಂಗಾಯಣ ರೆಪರ್ಟರಿಯ ಹಿರಿಯ ಕಲಾವಿದರು ವಾಚಿಸಲಿದ್ದಾರೆ. ಬಹುರೂಪಿ ನಾಟಕೋತ್ಸವದ ಆಹಾರ ಮಳಿಗೆ ವಿಚಾರದಲ್ಲಿ ವಿಶೇಷ ಗಮನಹರಿಸಲಾಗಿದೆ. ಮಲೆನಾಡು, ಕರಾವಳಿ, ಉತ್ತರ ಕನ್ನಡ, ಕೊಡವ, ಕಲ್ಯಾಣ ಕರ್ನಾಟಕದ ವಿಶೇಷ ಆಹಾರಗಳು ಮೈಸೂರಿಗರ ನಾಲಗೆ ರುಚಿ ತಣಿಸಲಿವೆ. ಕರಕುಶಲ ಮಳಿಗೆಗಳು, ಬೆಂಗಳೂರು ಗಾಂಧಿ ಭವನದ ಗಾಂಧಿಪ್ರತಿಮೆ ಮತ್ತು ಸರಕುಗಳು, ಪುರಾತನ ನಾಣ್ಯ,ನೋಟು ಸಂಗ್ರಹಗಳ ಪ್ರದರ್ಶನ, ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದಲ್ಲಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಮಳಿಗೆಗಳು ಇರಲಿವೆ.

ನಾಟಕೋತ್ಸವದ ಟಿಕೆಟ್‌ ದರ 100 ರೂ. ನಿಗದಿಪಡಿಸಿದ್ದು, ಫೆ.4ರಿಂದಲೇ ನಾಟಕ ಪ್ರದರ್ಶನಗಳ ಮುಂಗಡ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ರಂಗಾಯಣದ ವೆಬ್‌ಸೈಟ್‌  ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್‌ ಪಡೆಯಬಹುದಾಗಿದೆ. ಜತೆಗೆ ಬಹುರೂಪಿ ನಾಟಕೋತ್ಸವದ ಸಂದರ್ಭದಲ್ಲಿ ನಾಟಕ ಪ್ರದರ್ಶನದ ಒಂದು ಗಂಟೆ ಮುಂಚಿತವಾಗಿ ಕೌಂಟರ್‌ ಗಳಲ್ಲೂ ಟಿಕೆಟ್‌ ದೊರೆಯಲಿದೆ.

Advertisement

 

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ :

ಫೆ.14, ಸಂಜೆ 7.30 :

ಸ್ಥಳ: ಭೂಮಿಗೀತ, ರಂಗಾಯಣ

ಸದಾನ್‌ಬಗಿ ಇಶೈ (ಮಣಿಪುರಿ)

ರಾತ್ರಿ 8, ಸ್ಥಳ: ವನರಂಗ, ರಂಗಾಯಣ

ವೀರರಾಣಿ ಕಿತ್ತೂರು ಚೆನ್ನಮ್ಮ (ದೊಡ್ಡಾಟ)

ಸಂಜೆ 7.30, ಸ್ಥಳ: ಕಿರು ರಂಗಮಂದಿರ

ಬೆಂದಕಾಳು ಆನ್‌ ಟೋಸ್ಟ್‌ (ಕನ್ನಡ)

ಫೆ.15,ಸಂಜೆ 7.30 :

ಸ್ಥಳ: ಭೂಮಿಗೀತ

ಮಹದೇವ ಭಾಯಿ (ಇಂಗ್ಲಿಷ್‌/ಹಿಂದಿ)

ಸ್ಥಳ: ಕಿರು ರಂಗಮಂದಿರ ಭಗವದಜ್ಜುಕೀಯಮ್‌

(ಹಿಂದಿ) ಸ್ಥಳ: ಕಲಾಮಂದಿರ, ಮುಖ್ಯಮಂತ್ರಿ

(ಕನ್ನಡ), ರಾತ್ರಿ 8, ಸ್ಥಳ: ವನರಂಗ

ಝಲ್ಕರಿ (ಹಿಂದಿ)

ಫೆ.16, ಸಂಜೆ 7.30 :

ಸ್ಥಳ:ಭೂಮಿಗೀತ

ಸಂಗೀತ್‌ಬಾರೀ (ಮರಾಠಿ)

ಐಂದಗಿ ಔರ್‌ ಜೋಂಕ್‌ (ಹಿಂದಿ)

ಈಡಿಪಸ್‌ (ಬೆಂಗಾಲಿ), ರಾತ್ರಿ 8,

ಮಂಟೇಸ್ವಾಮಿ ಕಥಾಪ್ರಸಂಗ (ಕನ್ನಡ)

ಫೆ.17, ಸಂಜೆ 6 :

ಸ್ಥಳ: ಕಿರು ರಂಗಮಂದಿರ

ದ ಬ್ಲಾಕ್‌ ಬೋರ್ಡ್‌ ಲ್ಯಾಂಡ್‌ (ಹಿಂದಿ/ಇಂಗ್ಲಿಷ್‌)

ಸಂಜೆ 6.30, ಸ್ಥಳ: ಭೂಮಿಗೀತ ಗಾಂಧಿ ವರ್ಸಸ್‌

ಗಾಂಧಿ (ಕನ್ನಡ) ಸಂಜೆ 7, ಸ್ಥಳ: ವನರಂಗ

ದೇವಯಾನಿ (ಕನ್ನಡ) ಸಂಜೆ 7.30, ಸ್ಥಳ:

ಕಲಾಮಂದಿರ ಸುಭದ್ರ ಕಲ್ಯಾಣ (ಕನ್ನಡ)

ಫೆ.18, ಸಂಜೆ 6 :

ಸ್ಥಳ: ಕಿರು ರಂಗಮಂದಿರ

ಮಿಸ್‌ ಜೂಲಿ (ಕನ್ನಡ), ಸಂಜೆ 6.30, ಸ್ಥಳ: ಭೂಮಿಗೀತ

ಪರಿತ್ರಾಣ್‌ (ಗುಜರಾತಿ), ಸಂಜೆ 7, ಸ್ಥಳ: ವನರಂಗ

ಕೆಂಡೋನಿಯನ್ಸ್‌ (ಕನ್ನಡ), ಸಂಜೆ 7.30,

ಕಲಾಮಂದಿರ, ಶಾಕುಂತಲಂ (ಮಲಯಾಳಂ)

ಫೆ.19, ಸಂಜೆ 6 :

ಸ್ಥಳ: ಕಿರು ರಂಗಮಂದಿರ

ಸ್ವಭಾಬ್‌ಜತ (ಅಸ್ಸಾಮಿ) ಸಂಜೆ 6.30, ಭೂಮಿಗೀತ

ಅಕ್ಷಯಾಂಬರ (ಕನ್ನಡ) ಸಂಜೆ 7, ವನರಂಗ

ಕಾಮ್ಯಕಲಾ ಪ್ರತಿಮಾ (ಕನ್ನಡ) ಸಂಜೆ 7.30,

ಕಲಾಮಂದಿರ ಮಹಾತ್ಮ (ಕನ್ನಡ)

 

ಚಲನಚಿತ್ರೋತ್ಸವ :

ಫೆ.14

ಮಧ್ಯಾಹ್ನ 12ಕ್ಕೆ ಗಿರೀಶ್‌ ಕಾಸರವಳ್ಳಿ ನಿರ್ದೇಶನದ

ಕೂರ್ಮಾವತಾರ

ಮಧ್ಯಾಹ್ನ 2ಕ್ಕೆ ಶ್ಯಾಮ ಬೆನಗಲ್‌ ನಿರ್ದೇಶನದ ದಿ

ಮೇಕಿಂಗ್‌ ಆಫ್ ಮಹಾತ್ಮ

ಫೆ.15 :

ಬೆಳಗ್ಗೆ 10.30ಕ್ಕೆ ಕ್ರಿಸ್‌ ಸಾಲ್ಟ್ ನಿರ್ದೇಶನದ ಗಾಂಧಿ:

ದಿ ಮೇಕಿಂಗ್‌ ಆಫ್ ಮಹಾತ್ಮ

ಮಧ್ಯಾಹ್ನ 12ಕ್ಕೆ ಆಲಿವರ್‌ ಹಾರ್ಮಬರ್ಗರ್‌

ನಿರ್ದೇಶನದ ದಿ ರೈಸ್‌ ಆ್ಯಂಡ್‌ ಫಾಲ್‌ ಆಫ್ ದಿ

ವಾಲ್‌ ಮಧ್ಯಾಹ್ನ 2ಕ್ಕೆ ರಿಚರ್ಡ್‌ ಅಟೆನ್‌ ಬರೋ

ನಿರ್ದೇಶನದ ಗಾಂಧಿ

ಫೆ.16 :

ಬೆಳಗ್ಗೆ 10.30ಕ್ಕೆ ಕ್ರಿಸ್‌ ಸಾಲ್ಟ್ ನಿರ್ದೇಶನದ ಗಾಂಧಿ:

ದಿ ರೈಸ್‌ ಆಫ್ ಟು ಫೇಮ್‌

ವಿನಯ್‌ಕುಮಾರ್‌ ಎಂ.ಜಿ. ನಿರ್ದೇಶನದ ದಿ

ಟ್ರೇನ್‌ (ಮೂಕಿ ಚಿತ್ರ,8ನಿಮಿಷ)

ಮಧ್ಯಾಹ್ನ 12ಕ್ಕೆ ಪೀಟರ್‌ ಕುನ್ಹಾರ್ಡ್‌ ನಿರ್ದೇಶನದ

ಕಿಂಗ್‌ ಇನ್‌ ದಿ ವೈಲ್ಡರ್ನೆಸ್‌

ಮಧ್ಯಾಹ್ನ 2ಕ್ಕೆ ರಾಜ್‌ಕುಮಾರ್‌ ಹಿರಾನಿ

ನಿರ್ದೇಶನದ ಲಗೆ ರಹೋ ಮುನ್ನಾ ಭಾಯ್‌

 

ಫೆ.17 :

ಬೆಳಗ್ಗೆ 10.30ಕ್ಕೆ ಕ್ರಿಸ್‌ ಸಾಲ್ಟ್ ನಿರ್ದೇಶನದ ಗಾಂಧಿ:

ದಿ ರೋಡ್‌ ಟು ಫ್ರೀಡಮ್‌

ಮಧ್ಯಾಹ್ನ 12ಕ್ಕೆ ಜೋಸೆಫ್ ಸಾರ್ಜೆಂಟ್‌

ನಿರ್ದೇಶನದ ಮಂಡೇಲಾ ಆ್ಯಂಡ್‌ ಡಿಕ್ಲರ್ಕ್‌

ಮಧ್ಯಾಹ್ನ 2ಕ್ಕೆ ಫಿರೋಜ್‌ ಅಬ್ಟಾಸ್‌ ಖಾನ್‌

ನಿರ್ದೇಶನದ ಗಾಂಧಿ ಮೈ ಫಾದರ್‌

 

ಫೆ.18 :

ಬೆಳಗ್ಗೆ 10.30ಕ್ಕೆ ವಿಟ್ಟಲ್‌ ಭಾಯ್‌ ಜಾವೇರಿ

ನಿರ್ದೇಶನದ ಮಹಾತ್ಮ- ದಿ ಲೈಫ್ ಆಫ್ ಗಾಂಧಿ

ಮಧ್ಯಾಹ್ನ 12ಕ್ಕೆ ಸ್ಟೀಫ‌ನ್‌ ಸ್ಪಿಲ್ಬರ್ಗ್‌ ನಿರ್ದೇಶನದ

ಲಿಂಕನ್‌ ಮಧ್ಯಾಹ್ನ 2ಕ್ಕೆ ರಿಷಬ್‌ ಶೆಟ್ಟಿ ನಿರ್ದೇಶನದ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

 

ಫೆ.19 :

ಬೆಳಗ್ಗೆ 10.30ಕ್ಕೆ ಸ್ಟೀವ್‌ ಯಾರ್ಕ್‌ ನಿರ್ದೇಶನದ ಎ

ಫೋರ್ಸ್‌ ಮೋರ್‌ ಪವರ್‌ ಫುಲ್‌; ಎ ಸೆಂಚುರಿ

ಆಫ್ ನಾನ್‌ವಯಲೆಂಟ್‌ ಕಾನ್‌ಪ್ಲಿಕ್ಟ್-1

 

 -ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next