Advertisement

Video: ಕ್ರಿಕೆಟ್ ಆಡಲು ಹೋಗಿ ಮುಗ್ಗರಿಸಿ ಬಿದ್ದು ತಲೆಗೆ ಗಾಯಮಾಡಿಕೊಂಡ ಶಾಸಕ…

12:47 PM Dec 30, 2023 | Team Udayavani |

ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಸಮಾರಂಭದ ವೇಳೆ ಕ್ರಿಕೆಟ್ ಆಟ ಅಡಿ ಪಂದ್ಯಾವಳಿ ಉದ್ಘಾಟಿಸುವ ವೇಳೆ ಶಾಸಕರೊಬ್ಬರು ಮುಗ್ಗರಿಸಿ ಬಿದ್ದು ಗಾಯಗೊಂಡಿದ್ದಾರೆ.

Advertisement

ಸೋಮವಾರ ಒಡಿಶಾದ ಕಲಹಂಡಿ ಜಿಲ್ಲೆಯ ಬೆಲ್ಖಂಡಿಯಲ್ಲಿ ಕ್ರೀಡಾ ಕಾರ್ಯಕ್ರಮ ಆಯೋಜಿಸಲಾಗಿತ್ತು ಇದರ ಉದ್ಘಾಟನೆಗೆ ಬಿಜು ಜನತಾ ದಳ (ಬಿಜೆಡಿ) ಶಾಸಕ ಭೂಪೇಂದ್ರ ಸಿಂಗ್ ಅವರನ್ನು ಕರೆಯಲಾಗಿತ್ತು ಅದರಂತೆ ಶಾಸಕರು ಕಾರ್ಯಕ್ರಮಕ್ಕೆ ಬಂದಿದ್ದಾರೆ ಈ ವೇಳೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಸಲುವಾಗಿ ಕ್ರಿಕೆಟ್ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡುವ ಕ್ರಮ ಎಲ್ಲ ಕಡೆ ಸಾಮಾನ್ಯವಾಗಿ ಇರುತ್ತದೆ ಅದರಂತೆ ಇಲ್ಲಿಯೂ ಶಾಸಕರು ಬ್ಯಾಟ್ ಹಿಡಿದು ಕ್ರಿಕೆಟ್ ಆಡಲು ಪಿಚ್ ಬಳಿ ನಿಂತಿದ್ದಾರೆ.

ಈ ವೇಳೆ ಬೌಲರ್ ಹಾಕಿದ ಚೆಂಡನ್ನು ಹೊಡೆಯಲು ಹೋಗಿ ಶಾಸಕ ಭೂಪೇಂದ್ರ ಸಿಂಗ್ ಅವರು ಮುಗ್ಗರಿಸಿ ಬಿದ್ದಿದ್ದಾರೆ. ಈ ವೇಳೆ ಅವರ ಕೈ, ಕಾಲು, ತಲೆಗೆ ಗಾಯಗಳಾಗಿವೆ. 72 ವರ್ಷದ ಸಿಂಗ್ ಅವರನ್ನು ತಕ್ಷಣವೇ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next