Advertisement

ದಶಕದ ಹಿಂದೆ ಭೂ ಮಾಫಿಯಾದಿಂದ ಒತ್ತುವರಿಯಾಗಿದ್ದ ಗೌಡನಕೆರೆಯ 5.17 ಎಕರೆ ಜಮೀನು ತೆರವು

01:38 PM Sep 17, 2020 | sudhir |

ಕೆಜಿಎಫ್: ನಗರದ ಗೌತಮನಗರದ ಗೌಡನಕೆರೆಯಲ್ಲಿ ಒತ್ತುವರಿಯಾಗಿದ್ದ 5.17 ಎಕರೆ ಜಮೀನನ್ನು ಬುಧವಾರ ಜಿಪಂ, ಕಂದಾಯ, ನಗರಸಭೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತೆರವುಗೊಳಿಸಿದರು.

Advertisement

11.17 ಎಕರೆ ವಿಸ್ತೀರ್ಣವುಳ್ಳ ಗೌಡನಕೆರೆ ಪುರಾತನವಾಗಿದ್ದು, ಕೆರೆಯ ಒಂದು ಬದಿಯಲ್ಲಿ ಕರಗ ಮಹೋತ್ಸವ ಮತ್ತು ಶಕ್ತಿ ದೇವತೆಗಳ ಆರಾಧನೆಗೆ ಸ್ಥಳವನ್ನಾಗಿ ಬಳಸಲಾಗುತ್ತಿತ್ತು. ಕೆಲವು ಭೂ ಮಾಫಿಯಾಗಳು ದಶಕದ ಹಿಂದೆಕೆರೆ ಒತ್ತುವರಿ ಮಾಡಿಕೊಂಡು ಕೆರೆಯ ಸ್ವರೂಪ ಬದಲಾಯಿಸಿದ್ದರು.

ಅಧಿಕಾರಿಗಳು ಪೊಲೀಸರ ಸಹಕಾರದಿಂದ ಒತ್ತುವರಿಯಾಗಿದ್ದ5.17 ಎಕರೆ ಜಮೀನನ್ನು ಮರಳಿ ವಶಕ್ಕೆ ಪಡೆದುಕೊಂಡರು. ಅಕ್ರಮವಾಗಿ ನಿರ್ಮಾಣಮಾಡಿದ್ದ ಎರಡು ರಸ್ತೆಗಳನ್ನು ಹಳ್ಳ ತೋಡಿ ಮುಚ್ಚಿದರು.

ತಹಶೀಲ್ದಾರ್‌ ಕೆ.ರಮೇಶ್‌, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಷಾದ್ರಿ, ಕೆಡಿಎ ಆಯುಕ್ತ ಜಹೀರ್‌ ಅಬ್ಟಾಸ್‌, ಜಿಪಂ ಸಹಾಯಕ ಎಂಜಿನಿಯರ್‌ಗಳಾದ ಶ್ರೀನಿವಾಸ್‌, ರವಿಚಂದ್ರನ್‌, ಪ್ರದೀಪ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ಸೂರ್ಯಪ್ರಕಾಶ್‌, ಸಬ್‌ ಇನ್‌ಸ್ಪೆಕ್ಟರ್‌ ಆನಂದಬಾಬು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next