ಚಿತ್ರವನ್ನು ಪ್ರಾದೇಶಿಕ ಸೆನ್ಸಾರ್ ಮಂಡಳಿಯು ವೀಕ್ಷಿಸಿದ್ದು, ಇದೀಗ “ಯು/ಎ’ ಪ್ರಮಾಣ ಪತ್ರ ನೀಡಿದೆ. ಇನ್ನು ಚಿತ್ರ ಸೆಪ್ಟೆಂಬರ್ ಮೊದಲ ಅಥವಾ ಎರಡನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
Advertisement
ಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಪ್ರಮುಖವಾಗಿ “ಭರ್ಜರಿ’ ಚಿತ್ರಕ್ಕೆ ದರ್ಶನ್ ಅವರು ಧ್ವನಿ ನೀಡಿದ್ದಾರೆ. ದರ್ಶನ್ ಅವರನಿರೂಪಣೆಯೊಂದಿಗೆ “ಭರ್ಜರಿ’ ಚಿತ್ರ ಆರಂಭವಾಗಲಿದೆ. 12 ನಿಮಿಷಗಳ ಕಾಲ ದರ್ಶನ್ ಧ್ವನಿ ನೀಡಿದ್ದು, ಇದು ಆರಂಭದಿಂದ ಸಿನಿಮಾ ಮುಗಿಯುವವರೆಗೆ ಅಲ್ಲಲ್ಲಿ ಬಂದು ಹೋಗಲಿದೆ. ಇನ್ನು ಹರಿಕೃಷ್ಣ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್‌ನ ಮೂರನೇ ಚಿತ್ರ ಇದಾಗಿದೆ. ಈ ಹಿಂದೆ “ಅದ್ಧೂರಿ’, “ಬಹದ್ದೂರ್’ ಚಿತ್ರಗಳಿಗೂ ಹರಿಕೃಷ್ಣ ಸಂಗೀತ ನೀಡಿದ್ದರು. ಈಗ ಈ ಜೋಡಿಯ ಮೂರನೆ ಚಿತ್ರದ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ರಂಗಾಯಣ ರಘು, ಉದಯ್, ಅನಿಲ್, ವೈಶಾಲಿ ದೀಪಕ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಷ ಕೂದುವಳ್ಳಿ ಅವರ ಛಾಯಾಗ್ರಹಣ, ಹರ್ಷ ಅವರ ನೃತ್ಯ ನಿರ್ದೇಶನ, ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಈ ಚಿತ್ರವನ್ನು ಆರ್.ಎಸ್. ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಕನಕಪುರ ಶ್ರೀನಿವಾಸ್ ನಿರ್ಮಿಸಿದ್ದಾರೆ. “ಬಹದ್ದೂರ್’ ಚೇತನ್, ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ರಚಿಸಿದ್ದಾರೆ.